SSC Sub-Inspector Notification 2024: ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ದೆಹಲಿ ಪೊಲೀಸ್ ಪಡೆಯಲ್ಲಿ ಅಗತ್ಯ 4187 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ಭರ್ತಿಗೆ ಇದೀಗ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಿ.
ಸಿಬ್ಬಂದಿ ನೇಮಕಾತಿ ಆಯೋಗವು ಪ್ರತಿ ವರ್ಷದಂತೆ ಇದೀಗ ದೆಹಲಿ ಪೊಲೀಸ್ ಪಡೆಗಳಲ್ಲಿ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ಭರ್ತಿಗೆ ನಡೆಸುವ ಪರೀಕ್ಷೆ ಅಧಿಸೂಚನೆಯನ್ನು ಪ್ರಕಟ ಮಾಡಿದೆ. ಬರೋಬರಿ 4187 ಸಬ್‌ಇನ್ಸ್‌ಪೆಕ್ಟರ್ (ಸಂಭಾವ್ಯ ಹುದ್ದೆಗಳು) ಪೋಸ್ಟ್‌ಗಳ ಭರ್ತಿಗೆ ಈ ಪರೀಕ್ಷೆ ಪ್ರಕ್ರಿಯೆ ನಡೆಸಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪ್ರಮುಖ ದಿನಾಂಕಗಳು, ಅರ್ಹತೆ, ಇತರೆ ಹೆಚ್ಚಿನ ಮಾಹಿತಿಗಳನ್ನು ಕೆಳಗಿನಂತೆ ತಿಳಿಸಲಾಗಿದೆ.
ಎಸ್‌ಎಸ್‌ಸಿ ಎಸ್‌ಐ ಸಂಭಾವ್ಯ ಹುದ್ದೆಗಳ ವಿವರ
- ದೆಹಲಿ ಪೊಲೀಸ್ ಪಡೆಗಳ ಸಬ್-ಇನ್ಸ್‌ಪೆಕ್ಟರ್ (ಎಕ್ಸಿಕ್ಯೂಟಿವ್) - ಪುರುಷರು : 125
- ದೆಹಲಿ ಪೊಲೀಸ್ ಪಡೆಗಳ ಸಬ್-ಇನ್ಸ್‌ಪೆಕ್ಟರ್ (ಎಕ್ಸಿಕ್ಯೂಟಿವ್) - ಮಹಿಳೆಯರು : 61
- ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಬ್-ಇನ್ಸ್‌ಪೆಕ್ಟರ್ (ಜೆನೆರಲ್ ಡ್ಯೂಟಿ) - ಪುರುಷರು : 4001
- ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪೈಕಿ ಬಿಎಸ್‌ಎಫ್‌ನಲ್ಲಿ - 892, ಸಿಐಎಸ್‌ಎಫ್‌ನಲ್ಲಿ - 1597, ಸಿಆರ್‌ಪಿಎಸ್- 1172, ಐಟಿಬಿಪಿಯಲ್ಲಿ -278, ಎಸ್‌ಎಸ್‌ಬಿಯಲ್ಲಿ -62 ಹುದ್ದೆಗಳಿವೆ.
ಎಸ್‌ಎಸ್‌ಸಿ ಎಸ್‌ಐ ಹುದ್ದೆಗೆ ವಿದ್ಯಾರ್ಹತೆ
- ಯಾವುದೇ ವಿಶ್ವವಿದ್ಯಾಲಯ / ಶೈಕ್ಷಣಿಕ ಸಂಸ್ಥೆಗಳಿಂದ ಪದವಿ ಪಾಸ್ ಮಾಡಿರಬೇಕು. ಅಥವಾ ತತ್ಸಮಾನ ಪರೀಕ್ಷೆ ಬರೆದು ಉತ್ತೀರ್ಣರಾಗಿರಬೇಕು.
- ದೆಹಲಿ ಪೊಲೀಸ್ ಎಸ್‌ಐ ಹುದ್ದೆಗೆ ವಾಹನ ಚಾಲನ ಪರವಾನಗಿ ಪಡೆದಿರಬೇಕು.
ಎಸ್‌ಎಸ್‌ಸಿ ಎಸ್‌ಐ ವಯಸ್ಸಿನ ಅರ್ಹತೆ
ದಿನಾಂಕ 01-08-2024 ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಅರ್ಜಿ ಸಲ್ಲಿಸಲು ಅನ್ವಯವಾಗಲಿದೆ
ಎಸ್‌ಎಸ್‌ಸಿ ಎಸ್‌ಐ ಪರೀಕ್ಷೆಯ ಪ್ರಮುಖ ವೇಳಾಪಟ್ಟಿ
- ಆನ್‌ಲೈನ್ ಅರ್ಜಿ ಸ್ವೀಕಾರ ಆರಂಭ ದಿನಾಂಕ: 04-03-2024
- ಆನ್‌ಲೈನ್ ಅರ್ಜಿ ಸ್ವೀಕಾರ ಕೊನೆ ದಿನಾಂಕ: 28-03-2024 ರ ರಾತ್ರಿ 11 ಗಂಟೆವರೆಗೆ.
- ಆನ್‌ಲೈನ್ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ : 29-03-2024 ರ ರಾತ್ರಿ 11 ಗಂಟೆವರೆಗೆ.
- ಅರ್ಜಿ ತಿದ್ದುಪಡಿಗೆ ಕೊನೆ ದಿನಾಂಕ : 30-03-2024 to 31-03-2024
- ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : 09, 10, 13 ಮೇ, 2024
ಎಸ್‌ಎಸ್‌ಸಿ ಎಸ್‌ಐ ಪರೀಕ್ಷೆಗೆ ಅಪ್ಲಿಕೇಶನ್ ಸಲ್ಲಿಸುವ ವಿಧಾನ
- ಸಿಬ್ಬಂದಿ ನೇಮಕಾತಿ ಆಯೋಗದ ವೆಬ್‌ಸೈಟ್ https://ssc.nic.in/ ಗೆ ಭೇಟಿ ನೀಡಿ.
- ಓಪನ್ ಆದ ಪೇಜ್ ನಲ್ಲಿ 'New User? Registration Here' ಎಂದಿರುವಲ್ಲಿ ಕ್ಲಿಕ್ ಮಾಡಿ.
- ನಂತರ ಕೇಳಲಾಗುವ ಅಗತ್ಯ ಮಾಹಿತಿಗಳನ್ನು ನೀಡಿ, ಮೊದಲು ರಿಜಿಸ್ಟ್ರೇಷನ್ ಪಡೆಯಿರಿ.
- ನಂತರ ಮತ್ತೆ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬೇಕು.
ಎಸ್‌ಎಸ್‌ಸಿ ಎಸ್‌ಐ ಪರೀಕ್ಷೆ ಅಪ್ಲಿಕೇಶನ್ ಶುಲ್ಕ ಮಾಹಿತಿ : ರೂ.100.
ಎಸ್‌ಎಸ್‌ಸಿ ಎಸ್‌ಐ ಪರೀಕ್ಷೆ ಕರ್ನಾಟಕದಲ್ಲಿ ಎಲ್ಲೆಲ್ಲಿ ನಡೆಯಲಿದೆ?
ಬೆಂಗಳೂರು, ಉಡುಪಿ, ಕಲಬುರಗಿ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ.
ಎಸ್‌ಎಸ್‌ಸಿ ಎಸ್‌ಐ ನೇಮಕ ಪ್ರಕ್ರಿಯೆ ಹಂತಗಳು
1. ಪೇಪರ್-1 ಲಿಖಿತ ಪರೀಕ್ಷೆ
2. ಪೇಪರ್-2 ಲಿಖಿತ ಪರೀಕ್ಷೆ
3. ದೈಹಿಕ ಸಾಮರ್ಥ್ಯ ಪರೀಕ್ಷೆ / ದೈಹಿಕ ಸಹಿಷ್ಣುತೆ ಪರೀಕ್ಷೆ.
4. ಸಂಪೂರ್ಣ ಮೆಡಿಕಲ್ ಟೆಸ್ಟ್
Tags:
Recruitment