ಕ್ಯಾಮೆರಾ ಪ್ರಿಯರನ್ನು ದಂದಾಗಿಸಿರುವ ಒಪ್ಪೋ F25 ಪ್ರೊ 5G ಸ್ಮಾರ್ಟ್​ಫೋನ್ ಮಾರಾಟ ಆರಂಭ

ಕ್ಯಾಮೆರಾ ಪ್ರಿಯರನ್ನು ದಂದಾಗಿಸಿರುವ ಒಪ್ಪೋ F25 ಪ್ರೊ 5G ಸ್ಮಾರ್ಟ್​ಫೋನ್ ಮಾರಾಟ ಆರಂಭ

Oppo F25 Pro 5G Sale in India: ಭಾರತದಲ್ಲಿ ಒಪ್ಪೋ F25 ಪ್ರೊ 5G ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 8GB RAM + 128GB ಸ್ಟೋರೇಜ್ ಆವೃತ್ತಿಗೆ 23,999 ರೂ., ಅಂತೆಯೆ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ ರೂ. 28,999 ಆಗಿದೆ. ಈ ಫೋನ್ ಒಪ್ಪೋದ ಇ-ಸ್ಟೋರ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇತರ ಪ್ರಮುಖ ರಿಟೇಲ್ ಔಟ್‌ಲೆಟ್‌ಗಳ ಮೂಲಕ ಸೇಲ್ ಆಗುತ್ತಿದೆ.



ಚೀನಾ ಮೂಲದ ಪ್ರಸಿದ್ಧ ಒಪ್ಪೋ ಕಂಪನಿ ಭಾರತದಲ್ಲಿ ಕಳೆದ ವಾರ ತನ್ನ ಎಫ್ ಸರಣಿ ಅಡಿಯಲ್ಲಿ ಹೊಸ ಒಪ್ಪೋ F25 ಪ್ರೊ 5G (Oppo F25 Pro 5G) ಸ್ಮಾರ್ಟ್​ಫೋನ್ ಅನ್ನು ಅನಾವರಣ ಮಾಡಿತ್ತು. ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಫೋನ್ ಇದೀಗ ಭಾರತದಲ್ಲಿ ಸೇಲ್ ಕಾಣುತ್ತಿದೆ

ಭಾರತದಲ್ಲಿ ಒಪ್ಪೋ F25 ಪ್ರೊ 5G ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 8GB RAM + 128GB ಸ್ಟೋರೇಜ್ ಆವೃತ್ತಿಗೆ 23,999 ರೂ., ಅಂತೆಯೆ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ ರೂ. 28,999 ಆಗಿದೆ. ಈ ಫೋನ್ ಒಪ್ಪೋದ ಇ-ಸ್ಟೋರ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇತರ ಪ್ರಮುಖ ರಿಟೇಲ್ ಔಟ್‌ಲೆಟ್‌ಗಳ ಮೂಲಕ ಸೇಲ್ ಆಗುತ್ತಿದೆ.

ಡ್ಯುಯಲ್ ಸಿಮ್ (ನ್ಯಾನೋ) ಒಪ್ಪೋ F25 ಪ್ರೊ 5G ಆಂಡ್ರಾಯ್ಡ್ ಆಧಾರಿತ ColorOS 14.0 ನಲ್ಲಿ ಕಾರ್ಯನಿರ್ವಹಿಸುತ್ತದೆ. 6.7-ಇಂಚಿನ ಪೂರ್ಣ-HD+ (1,080×2,412 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು 120Hz ರಿಫ್ರೆಶ್ ದರವನ್ನು ಹೊಂದಿದೆ. ಈ ಫೋನ್ 8GB LPDDR4x RAM ಮತ್ತು Mali-G68 MC4 GPU ಜೊತೆಗೆ ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 7050 SoC ನಿಂದ ಚಾಲಿತವಾಗಿದೆ.

ಕ್ಯಾಮೆರಾ ವಿಷಯದಲ್ಲಿ, ಒಪ್ಪೋ F25 ಪ್ರೊ 5G ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 64-ಮೆಗಾಪಿಕ್ಸೆಲ್ ಓಮ್ನಿವಿಷನ್‌ನ OV64 ಪ್ರಾಥಮಿಕ ಸಂವೇದಕ, ಜೊತೆಗೆ f/1.7 ಲೆನ್ಸ್ ಮತ್ತು ಆಟೋಫೋಕಸ್​ನಿಂದ ಕೂಡಿದೆ. 8-ಮೆಗಾಪಿಕ್ಸೆಲ್ ಸೋನಿ IMX355 ವೈಡ್-ಆಂಗಲ್ ಸೆನ್ಸಾರ್ ಜೊತೆಗೆ f/2.2 ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಇದೆ.

ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. 5,000mAh ಬ್ಯಾಟರಿ ನೀಡಲಾಗಿದ್ದು, ಇದು ಸ್ಟ್ಯಾಂಡರ್ಡ್ 67W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ವೇಗದ ಚಾರ್ಜಿಂಗ್ ತಂತ್ರಜ್ಞಾನವು ಕೇವಲ ಹತ್ತು ನಿಮಿಷಗಳಲ್ಲಿ ಶೂನ್ಯದಿಂದ 30 ಪ್ರತಿಶತ ಮತ್ತು 48 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಬ್ಯಾಟರಿಯನ್ನು ತುಂಬುತ್ತದೆ ಎಂದು ಕಂಪನಿ ಹೇಳಿದೆ.

Post a Comment

Previous Post Next Post
CLOSE ADS
CLOSE ADS
×