ಸಾರಿಗೆ ಇಲಾಖೆಯಲ್ಲಿ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ಸಾರಿಗೆ ಇಲಾಖೆಯಲ್ಲಿ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ಕೆಎಸ್ಆರ್ಟಿಸಿ ಡ್ರೈವರ್ ಹುದ್ದೆ(KSRTC driver job) : ಇದೀಗ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ತಮ್ಮ ಕಾರ್ಯನಿರ್ವಹಿಸಬೇಕು ಎನ್ನುವವರಿಗೆ ಒಂದು ಉಪಯುಕ್ತ ಮಾಹಿತಿ ಇಲ್ಲಿದೆ. ಹೌದು, ಇದೀಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಚಾಲಕರಾಗಿ(Ksrtc driver) ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ವರದಿಯಲ್ಲಿ ತಿಳಿಸಿದ ಮಾಹಿತಿಗಳನ್ನು ತಿಳಿದುಕೊಂಡು ಅಗತ್ಯವಿರುವ ದಾಖಲೆಗಳೊಂದಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ. 



ಮೊದಲಿಗೆ ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂದು ತಿಳಿಯುವುದಾದರೆ:

ಧಾರವಾಡ ವಿಭಾಗ : ಈ ವಿಭಾಗದಲ್ಲಿ (ಧಾರವಾಡ, ಸೌದತ್ತಿ, ರಾಮದುರ್ಗ, ಹಳಿಯಾಳ ,ದಾಂಡೇಲಿ) ಡಿಪೋಗಳಿಗೆ – 30 ಹುದ್ದೆಗಳು ಖಾಲಿಯಿವೆ.

ಚಿಕ್ಕೋಡಿ ವಿಭಾಗ : ಈ ವಿಭಾಗದಲ್ಲಿ (ಚಿಕ್ಕೋಡಿ, ಸಂಕೇಶ್ವರ, ಗೋಕಾಕ್, ನಿಪ್ಪಾಣಿ , ರಾಯಭಾಗ, ಅಥಣಿ , ಹುಕ್ಕೇರಿ ) ಡಿಪೋಗಳಿಗೆ – 40 ಹುದ್ದೆಗಳು ಖಾಲಿಯಿವೆ.

ಹಾವೇರಿ ವಿಭಾಗ : ಈ ವಿಭಾಗದಲ್ಲಿ (ಹಾವೇರಿ ಹಿರೇಕೆರೂರು ,ರಾಣೆಬೆನ್ನೂರು ,ಹಾನಗಲ್ ,ಬ್ಯಾಡಗಿ, ಸವಣೂರು) ಡಿಪೋಗಳಿಗೆ – 50 ಹುದ್ದೆಗಳು ಖಾಲಿಯಿವೆ.

ಸಿರಿಸಿ ವಿಭಾಗ :  ಸಿರಸಿ ,ಕುಮುಟಾ , ಕಾರವಾರ, ಭಟ್ಕಲ್, ಯಲ್ಲಾಪುರ ,ಅಂಕೋಲ ) ಡಿಪೋಗಳಿಗೆ – 60 ಹುದ್ದೆಗಳು ಖಾಲಿಯಿವೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯ ಇರುವ ದಾಖಲೆಗಳು :

  • ಆಧಾರ್ ಕಾರ್ಡ್ (Adhar card)
  • ಡ್ರೈವಿಂಗ್ ಲೈಸೆನ್ಸ್ (Driving License)
  • ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೇಟ್ (Medical fittness certificate)
  • ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ (Police verification certificate)
  • ಎರಡು ಫೋಟೋಗಳು (Photos)
  • ಮಾರ್ಕ್ಸ್ ಕಾರ್ಡ್ (marks card from 7th std and above)
  • ಟಿ ಸಿ (Transfer certificate)
  • ಬ್ಯಾಂಕ್ ಡಿಟೇಲ್ಸ್(Bank detials)

ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೂ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಯುವುದಾದರೆ, ಈ ಹುದ್ದೆಗೆ ಅರ್ಹವಿರುವ ಆಸಕ್ತ ಅಭ್ಯರ್ಥಿಗಳು ತಿಳಿಸಿರುವ ದಾಖಲೆಗಳೊಂದಿಗೆ, ನಿಮ್ಮ ಹತ್ತಿರದ KSRTC ಸಾರಿಗೆ ನಿಗಮದ ಡಿಪೋ ಅನ್ನು ಬೇಟಿ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮತ್ತು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು , ಅಭ್ಯರ್ಥಿಗಳು ದೂರವಾಣಿ ಸಂಖ್ಯೆಯಾದ : 08213588801 ಅಥವಾ 8618943513 ಅಥವಾ 7259382467 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ(Ksrtc) ಅಧಿಕೃತ ವೆಬ್ ಸೈಟ್ (Official website): https://nwkrtc.karnataka.gov.in/


Post a Comment

Previous Post Next Post
CLOSE ADS
CLOSE ADS
×