JN Tata Endowment Loan Scholarship Details In Kannada: ಭಾರತ ಮತ್ತು ಅಬ್ರಾಡ್‌ನಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿರುವವರು, ಮುಂದೆ ಉನ್ನತ ಶಿಕ್ಷಣ ಬಯಸಿದಲ್ಲಿ, ಅಂತಹವರಿಗಾಗಿ ಟಾಟಾ ಗ್ರೂಪ್ 10 ಲಕ್ಷ ರೂ.ವರೆಗೆ ಲೋನ್ ಸ್ಕಾಲರ್‌ಶಿಪ್ ಸೌಲಭ್ಯ ನೀಡುತ್ತಿದೆ. ಇದರ ಕುರಿತು ಡೀಟೇಲ್ಸ್ ಇಲ್ಲಿದೆ.
ಜೆಎನ್ ಟಾಟಾ ಎಂಡೋಮೆಂಟ್ ಮೆರಿಟ್ ಆಧಾರಿತ ಲೋನ್ ಸ್ಕಾಲರ್‌ಶಿಪ್ ಸೌಲಭ್ಯ ನೀಡುತ್ತಿದೆ. ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಆಗಲಿ ಅಥವಾ ದೇಶದಲ್ಲೇ ಆಗಲಿ ಉನ್ನತ ಶಿಕ್ಷಣ ಪಡೆಯಲು ಈ ಸೌಲಭ್ಯ ನೀಡುತ್ತಿದ್ದು, ವಿಜ್ಞಾನ ವಿಭಾಗದ ವಿವಿಧ ವಿಷಯಗಳು, ಕಾನೂನು, ಮ್ಯಾನೇಜ್ಮೆಂಟ್, ಕಾಮರ್ಸ್, ಫೈನ್ ಆರ್ಟ್ಸ್ ನಲ್ಲಿ ಪದವಿ, ಪಿಜಿ ಓದಿದವರು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಹೆಚ್ಚಿನ ಮಾಹಿತಿಗಳು ಕೆಳಗಿನಂತಿವೆ
- ವಿದ್ಯಾರ್ಥಿವೇತನದ ಹೆಸರು : ಜೆಎನ್ ಟಾಟಾ ಎಂಡೋಮೆಂಟ್ ಲೋನ್ ಸ್ಕಾಲರ್‌ಶಿಪ್ 2024
- ವಿದ್ಯಾರ್ಥಿವೇತನ ನೀಡುವ ಸಂಸ್ಥೆ : ಟಾಟಾ ಗ್ರೂಪ್
- ಸ್ಕಾಲರ್‌ಶಿಪ್ ಮೌಲ್ಯ : ರೂ.10,00,000 ವರೆಗೆ.
- ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 15-03-2024
ಅರ್ಹತೆಗಳು
- ಅರ್ಜಿ ಹಾಕುವವರಿಗೆ ಜೂನ್ 30, 2024 ಕ್ಕೆ ಗರಿಷ್ಠ 45 ವರ್ಷ ಮೀರಿರಬಾರದು.
- ಯುಜಿ, ಪಿಜಿ ಶಿಕ್ಷಣವನ್ನು ಕನಿಷ್ಠ ಶೇಕಡ.60 ಅಂಕಗಳನ್ನು ಗಳಿಸಿ ಪಾಸಾಗಿರಬೇಕು.
- ಜುಲೈನಿಂದ ಲೋನ್ ಸ್ಕಾಲರ್‌ಶಿಪ್ ಸೌಲಭ್ಯ ಮಂಜೂರು ಮಾಡಲಾಗುವುದು
- 2024-25ನೇ ಸಾಲಿನಲ್ಲಿ ಇನ್ನು ಯಾವುದೇ ಯುಜಿ/ಪಿಜಿ ಕೋರ್ಸ್‌ಗೆ ಪ್ರವೇಶ ಪಡೆಯದ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
- ಈಗಾಗಲೇ ವಿದೇಶಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಅನ್ನು 2ನೇ ವರ್ಷ, 3ನೇ ವರ್ಷದಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು.
- ಅಬ್ರಾಡ್‌ನಲ್ಲಿ ಉನ್ನತ ಶಿಕ್ಷಣ, ಸಂಶೋಧನೆಗೆ ತೆರಳುವವರು ಅರ್ಜಿ ಸಲ್ಲಿಸಬಹುದು.
ವಿಶೇಷ ಸೂಚನೆ : ಭಾರತದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಓದಲು ನಿರ್ಧರಿಸಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಆದರೆ ಉನ್ನತ ಶಿಕ್ಷಣಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿವೇತನ ಪ್ರೋಗ್ರಾಮ್ 4 ಹಂತಗಳನ್ನು ಹೊಂದಿದೆ. ಪ್ರತಿ ಹಂತದ ಕೊನೆಯಲ್ಲಿ ಅಪ್ಲಿಕೇಶನ್ ಸ್ಥಿತಿಯ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ. ಅವುಗಳೆಂದರೆ
ಹಂತ-1 : ಮಾರ್ಚ್ 15, 2024 ಅರ್ಜಿಗೆ ಕೊನೆ ದಿನ.
ಹಂತ-2 : ಆನ್‌ಲೈನ್ ಪರೀಕ್ಷೆ.
ಹಂತ-3 : ವಿಷಯ ತಜ್ಞರೊಂದಿಗೆ ಸಂದರ್ಶನ.
ಹಂತ-4 : ಅಂತಿಮ ಆಯ್ಕೆ ಪ್ರಕ್ರಿಯೆ.
ಅರ್ಜಿ ಸಲ್ಲಿಸುವ ವಿಧಾನ
ಮೇಲಿನ ಲಿಂಕ್ ಕ್ಲಿಕ್ ಮಾಡಿ. ಪಾಪಪ್ ವೆಬ್‌ಪೇಜ್ ಒಂದು ತೆರೆಯುತ್ತದೆ. ಈ ಹಂತದಲ್ಲಿ ಇಮೇಲ್ / ಜಿ-ಮೇಲ್ / ಮೊಬೈಲ್ ನಂಬರ್ ಮೂಲಕ ರಿಜಿಸ್ಟ್ರೇಷನ್ ಪಡೆಯಿರಿ. ನಂತರ ಮತ್ತೆ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.
ಅಪ್ಲಿಕೇಶನ್ ಹಾಕಲು ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿರಬೇಕು.
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್‌ನ ಮೊದಲ ಮತ್ತು ಕೊನೆ ಪೇಜ್ ಫೋಟೋಕಾಪಿ.
- ಅಂಕಪಟ್ಟಿ (ಪ್ರತಿ ಸೆಮಿಸ್ಟರ್ / ವರ್ಷದ)
- ಲೋನ್ ಸ್ಕಾಲರ್‌ಶಿಪ್ ತೆಗೆದುಕೊಳ್ಳುವ ಉದ್ದೇಶದ ಪ್ರಮಾಣ ಪತ್ರ.
ವಿಷಯ ತಜ್ಞರ ಸಂದರ್ಶನ ಹಂತದಲ್ಲಿ ಪ್ರವೇಶಾತಿ ದಾಖಲೆಗಳನ್ನು ಹಾಜರುಪಡಿಸಬೇಕು. ಅಂತಿಮ ಆಯ್ಕೆ ಸಂದರ್ಭದಲ್ಲಿ ಪಾನ್ ಕಾರ್ಡ್, ರದ್ದಾದ ಚೆಕ್ ಪ್ರತಿ, ಖಾತರಿದಾರರ ಆಧಾರ್ ಕಾರ್ಡ್, ಖಾತರಿದಾರರ ಭಾವಚಿತ್ರ, ಖಾತರಿದಾರರ ಆದಾಯ ಪ್ರಮಾಣ ಪತ್ರ, ಇತ್ತೀಚೆಗೆ ಐಟಿಆರ್ ಫಿಲ್ ಮಾಡಿದ ದಾಖಲೆ ಪ್ರತಿ, ಇತರೆ ಪ್ರಸ್ತುತಪಡಿಸಬೇಕು.