5 ವರ್ಷಗಳ ಪೋಸ್ಟ್ ಆಫೀಸ್ ಎಫ್‌ಡಿಯನ್ನು ತೆರಿಗೆ ಉಳಿತಾಯ ಎಫ್‌ಡಿ ಎಂದೂ ಕರೆಯಲಾಗುತ್ತದೆ. ಎಫ್‌ಡಿಯು ಇಇಇ (EEE) ವಿಭಾಗಕ್ಕೆ ಸೇರಿದಾಗ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ರೂ 1.50 ಲಕ್ಷದವರೆಗೆ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ.
ಪೋಸ್ಟ್ ಆಫೀಸ್ (Post Office) ಅನೇಕ ರೀತಿಯ ಫಿಕ್ಸೆಡ್ ಡೆಪಾಸಿಟ್ (Fixed Deposite) ಪ್ಲಾನ್‌ಗಳನ್ನು ಒದಗಿಸುತ್ತಿದ್ದು ಉಳಿತಾಯ ಮಾಡುವ ಉದ್ದೇಶ ಹೊಂದಿರುವವರು ಈ ಪ್ಲಾನ್‌ಗಳನ್ನು ಚೆನ್ನಾಗಿ ಬಳಸಿಕೊಳ್ಳಬಹುದಾಗಿದೆ. ಅದರಲ್ಲೊಂದು ಪೋಸ್ಟ್ ಆಫೀಸ್ ಟ್ಯಾಕ್ಸ್ ಸೇವಿಂಗ್ ಎಫ್‌ಡಿಯಾಗಿದ್ದು, ಈ ಎಫ್‌ಡಿಗಳ ಕಾಲಾವಧಿ 1,2,3 ಹಾಗೂ 5 ವರ್ಷಗಳಾಗಿದ್ದು ಖಾತರಿಯುತ ಲಾಭವನ್ನೊದಗಿಸುತ್ತದೆ.
ಇದರಲ್ಲಿ 5 ವರ್ಷಗಳ ಪೋಸ್ಟ್ ಆಫೀಸ್ ಎಫ್‌ಡಿಯನ್ನು ತೆರಿಗೆ ಉಳಿತಾಯ ಎಫ್‌ಡಿ ಎಂದೂ ಕರೆಯಲಾಗುತ್ತದೆ. ಎಫ್‌ಡಿಯು ಇಇಇ (EEE) ವಿಭಾಗಕ್ಕೆ ಸೇರಿದಾಗ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ರೂ 1.50 ಲಕ್ಷದವರೆಗೆ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ.
ಇಇಇ (EEE) ತೆರಿಗೆ ವ್ಯವಸ್ಥೆ ಎಂದರೇನು?
ಇಇಇ (EEE) ತೆರಿಗೆ ವ್ಯವಸ್ಥೆಯಲ್ಲಿನ ಒಂದು ಪ್ರಮುಖ ಅಂಶವಾಗಿದ್ದು, ಇದು ವ್ಯಕ್ತಿಗೆ ಸಂಪತ್ತನ್ನು ಉಳಿಕೆ ಹಾಗೂ ನಿಯಮಕ್ಕೆ ಅನುಸಾರವಾಗಿ ತೆರಿಗೆ ಉಳಿಸಲು ಅನುವು ಮಾಡಿಕೊಡುತ್ತದೆ. ರೂ 10 ಲಕ್ಷ ಹೂಡಿಕೆಯು ಈ ಯೋಜನೆಯಲ್ಲಿ ನಿಮಗೆ ರೂ 4.50 ಲಕ್ಷ ಬಡ್ಡಿಯನ್ನು ನೀಡುತ್ತದೆ.
ಪೋಸ್ಟ್ ಆಫಿಸ್ ತೆರಿಗೆ ಉಳಿಸುವ ಎಫ್‌ಡಿ
5 ವರ್ಷಗಳ ಎಫ್‌ಡಿಯನ್ನು ಪೋಸ್ಟ್ ಆಫೀಸ್ ತೆರಿಗೆ ಉಳಿಸುವ FD ಎಂದೂ ಕರೆಯಲಾಗುತ್ತದೆ. ಅದೂ ಅಲ್ಲದೆ ಈ ಎಫ್‌ಡಿ ಯೋಜನೆ ಇಇಇ ವರ್ಗದಲ್ಲಿ ಬರುವುದರಿಂದ ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದ ಮೊತ್ತ, ಗಳಿಸಿದ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.
5 ವರ್ಷಗಳ ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ ರೂ 1.50 ಲಕ್ಷದವರೆಗಿನ ಹೂಡಿಕೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳಿಗೆ ಅರ್ಹವಾಗಿವೆ.
ಇದರ ಇನ್ನೊಂದು ಪ್ರಯೋಜನವೆಂದರೆ ಸಾಮಾನ್ಯವಾಗಿ ಎಲ್ಲಾ ಪೋಸ್ಟ್ ಆಫೀಸ್ ಎಫ್‌ಡಿಗಳಿಗಿಂತ ಇದು 7.5% ಹೆಚ್ಚಿನ ಬಡ್ಡಿದರವನ್ನೊದಗಿಸುತ್ತದೆ. ಅಂತೆಯೇ ಈ ಎಫ್‌ಡಿಯಲ್ಲಿ ನೀವು ಗಳಿಸುವ ಬಡ್ಡಿಯನ್ನು ವಾರ್ಷಿಕವಾಗಿ ಪಾವತಿಸಲಾಗುತ್ತದೆ. ಆದರೆ ತ್ರೈಮಾಸಿಕವಾಗಿ ಲೆಕ್ಕಹಾಕಲಾಗುತ್ತದೆ.
ಈ ಯೋಜನೆಯಲ್ಲಿ ನೀವು 10 ಲಕ್ಷ ಹೂಡಿಕೆ ಮಾಡಿದರೆ ಮತ್ತು ಎಫ್‌ಡಿ ಪೂರ್ಣಗೊಂಡ ನಂತರ ನಿಮ್ಮ ಹಣವನ್ನು ಹಿಂಪಡೆದರೆ, ನೀವು ರೂ 4,49,948 ಬಡ್ಡಿಯನ್ನು ಪಡೆಯುತ್ತೀರಿ. 5 ವರ್ಷಗಳ ಪೋಸ್ಟ್ ಆಫೀಸ್ ಎಫ್‌ಡಿ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಪೋಸ್ಟ್ ಆಫೀಸ್ ತೆರಿಗೆ ಉಳಿತಾಯ ಎಫ್‌ಡಿ: ರೂ 10 ಲಕ್ಷ ಹೂಡಿಕೆಯ ಮೇಲೆ ರೂ 4.50 ಲಕ್ಷ ಬಡ್ಡಿ ಪಡೆಯುವುದು ಹೇಗೆ?
ನೀವು 5 ವರ್ಷಗಳ ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಮತ್ತು ಮೊತ್ತದ ಮೇಲೆ ಶೇಕಡಾ 7.5 ಬಡ್ಡಿಯನ್ನು ಪಡೆದರೆ, ಐದು ವರ್ಷಗಳಲ್ಲಿ, ನೀವು ಒಟ್ಟು ರೂ 4,49,948 ಬಡ್ಡಿಯನ್ನು ಗಳಿಸುವಿರಿ ಮತ್ತು ನಿಮ್ಮ ಹೂಡಿಕೆಯ ಮುಕ್ತಾಯ ಮೌಲ್ಯವು ರೂ. 14,49,948 ಆಗಿರುತ್ತದೆ.
ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆ ಯೋಜನೆ ಎಂದರೇನು?
ಸರ್ಕಾರಿ ಬೆಂಬಲಿತ ಪೋಸ್ಟ್ ಆಫೀಸ್ ಎಫ್‌ಡಿ ಯೋಜನೆಯಾದ ಇದು ವಾರ್ಷಿಕವಾಗಿ ಪಾವತಿಸಬೇಕಾದ ಬಡ್ಡಿ ಆದಾಯವನ್ನು ನೀಡುತ್ತದೆ ಮತ್ತು ತ್ರೈಮಾಸಿಕವಾಗಿ ಸಂಯೋಜಿತವಾಗಿದೆ.
ಯೋಜನೆಯಲ್ಲಿ ಕನಿಷ್ಠ ಹೂಡಿಕೆಯು ರೂ 1,000 ವಾಗಿದೆ. ವಿವಿಧ ಅವಧಿಗಳ ಎಫ್‌ಡಿಗಳಿಗೆ ಬಡ್ಡಿದರಗಳು ಶೇಕಡಾ 6.9 ರಿಂದ 7.5 ರವರೆಗೆ ಇರುತ್ತದೆ. 1-, 2-, 3-, ಮತ್ತು 5-ವರ್ಷದ ಎಫ್‌ಡಿ ಯೋಜನೆಗಳ ಬಡ್ಡಿ ದರಗಳು ಕ್ರಮವಾಗಿ 6.90%, 7.00%, 7.10% ಮತ್ತು 7.50% ವಾಗಿದೆ.
ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆ ಯೋಜನೆ: ತೆರಿಗೆ ಪ್ರಯೋಜನಗಳು?
ಐದು ವರ್ಷಗಳ ಎಫ್‌ಡಿ ಯೋಜನೆಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ 1.50 ಲಕ್ಷದವರೆಗೆ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಹಿರಿಯ ನಾಗರಿಕರಿಗೆ ರೂ 50,000 ಮತ್ತು ಇತರ ಠೇವಣಿದಾರರಿಗೆ ರೂ 40,000 ಕ್ಕಿಂತ ಹೆಚ್ಚಿನ ಬಡ್ಡಿ ಪಾವತಿಗಳು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸುತ್ತವೆ (ಟಿಡಿಎಸ್).
ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆ ಯೋಜನೆ: ಯೋಜನೆಗೆ ಯಾರು ಅರ್ಹರು?
ವಯಸ್ಕರು ಸ್ವಂತವಾಗಿ ಅಥವಾ ಮೂರು ಗುಂಪುಗಳಲ್ಲಿ ಖಾತೆಯನ್ನು ತೆರೆಯಬಹುದು ಮತ್ತು ನಿರ್ವಹಿಸಬಹುದು.
ಅಂಚೆ ಕಛೇರಿಯು ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಖಾತೆಗಳನ್ನು ಸ್ವೀಕರಿಸುತ್ತದೆ ಮತ್ತು ಅಪ್ರಾಪ್ತ ವಯಸ್ಕನು 18 ವರ್ಷವನ್ನು ತಲುಪುವವರೆಗೆ ಖಾತೆಯನ್ನು ನಿರ್ವಹಿಸುವ ಕಾನೂನುಬದ್ಧ ಪೋಷಕರ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು.