Fertilizer Subsidy - ರೈತರಿಗಿದು ಶುಭಸುದ್ಧಿ!: ರಸಗೊಬ್ಬರಕ್ಕೆ ಕೇಂದ್ರದಿಂದ ಬೃಹತ್‌ ರಿಯಾಯಿತಿ

Fertilizer Subsidy - ರೈತರಿಗಿದು ಶುಭಸುದ್ಧಿ!: ರಸಗೊಬ್ಬರಕ್ಕೆ ಕೇಂದ್ರದಿಂದ ಬೃಹತ್‌ ರಿಯಾಯಿತಿ

ದೇಶದ ರೈತರನ್ನು ಗಮನದಲ್ಲಿರಿಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಗುರುವಾರ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮುಂಬರುವ ಮುಂಗಾರು ಹಂಗಾಮಿನಲ್ಲಿ ಬಿತ್ತೆನೆ ಕಾರ್ಯಕ್ಕೆ ನೆರವಾಗುವ ದೃಷ್ಟಿಯಿಂದ ಒಟ್ಟು 24,420 ಕೋಟಿ ರೂಪಾಯಿ ರಸಗೊಬ್ಬರ ಸಹಾಯಧನ ನೀಡಲು ಒಪ್ಪಿಗೆ ಸೂಚಿಸಿದೆ. ಈ ನಿಟ್ಟಿನಲ್ಲಿ ಇನ್ನುಮುಂದೆ ಪ್ರತಿ ಕೆಜಿ ಸಾರಜನಕಕ್ಕೆ 47.02 ರೂಪಾಯಿ, ಪಾಸ್ಪೇಟಿಕ್‌ಗೆ 28.72 ರೂಪಾಯಿ, ಪೊಟ್ಯಾಶಿಯಂಗೆ 2.38 ರೂಪಾಯಿ ಮತ್ತು ಸಲ್ಫರ್‌ಗೆ 1.89 ರೂಪಾಯಿ ಸಹಾಯಧನ ಲಭಿಸಲಿದೆ.



ಮುಂದಿನ ಮುಂಗಾರು ಹಂಗಾಮಿನಲ್ಲಿ ರೈತರ ಬಿತ್ತನೆಗೆ ನೆರವಾಗಲು 24,420 ಕೋಟಿ ರೂ. ರಸಗೊಬ್ಬರ ಸಹಾಯಧನ ನೀಡಲು ಕೇಂದ್ರ ಸಚಿವ ಸಂಪುಟ ಸಭೆ ಗುರುವಾಗ ಒಪ್ಪಿಗೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿಏಪ್ರಿಲ್ 1ರಿಂದ ಸೆಪ್ಚೆಂಬರ್ 30ರ ವರೆಗೆ ಮುಂಗಾರು ಅವಧಿಗೆ ಫಾಸ್ಪೇಟಿಕ್‌ ಹಾಗೂ ಪೊಟ್ಯಾಶಿಯಂ ರಸಗೊಬ್ಬರಗಳಿಗೆ ಸಹಾಯಧನ ನೀಡಲು ಒಪ್ಪಿಗೆ ನೀಡಲಾಯಿತು. 2024-25ನೇ ಸಾಲಿನಲ್ಲಿ ಪೋಷಕಾಂಶ ಆಧಾರಿತ ರಸಗೊಬ್ಬರಕ್ಕೆ ಸಹಾಯ ನೀಡುವಂತೆ ಕೋರಿ ರಸಗೊಬ್ಬರ ಇಲಾಖೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.

ರೈತರಿಗೆ ಕೈಗೆಟುಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರಸಗೊಬ್ಬರಗಳ ಲಭ್ಯವಾಗಬೇಕು. ಅಂತಾರಾಷ್ಟ್ರೀಯ ಬೆಲೆ ಆಧರಿಸಿ ರಸಗೊಬ್ಬರಗಳ ಬೆಲೆ ನಿಯಂತ್ರಣ ಮಾಡಲು ಸಹಾಯಧನ ನೀಡಲಾಗುತ್ತಿದೆ. ಯೋಜನೆಯಡಿ ಮೂರು ಹೊಸ ರಸಗೊಬ್ಬರ ಶ್ರೇಣಿಗಳನ್ನು ಸೇರ್ಪಡೆ ಮಾಡಲಾಗಿದ್ದು, ಮಣ್ಣಿನ ಗುಣಮಟ್ಟ, ಮಣ್ಣಿನ ಪೋಷಕಾಂಶಗಳ ಬಲವರ್ಧನೆಗೆ ರಸಗೊಬ್ಬರಗಳ ಆಯ್ಕೆ ಮಾಡಿಕೊಳ್ಳಲು ರೈತರಿಗೆ ಅವಕಾಶ ನೀಡಲಾಗಿದೆ.

ಸಹಾಯಧನ ಬೆಲೆ

  • ಸಾರಜನಕ (ನೈಟ್ರೋಜನ್‌): ಪ್ರತಿ ಕೆ.ಜಿ.ಗೆ 47.02 ರೂ.
  • ಪಾಸ್ಪೇಟಿಕ್‌: ಪ್ರತಿ ಕೆ.ಜಿ.ಗೆ 28.72 ರೂ.
  • ಪೊಟ್ಯಾಶಿಯಂ: ಪ್ರತಿ ಕೆ.ಜಿ.ಗೆ 2.38 ರೂ.
  • ಸಲ್ಫರ್‌ ಪ್ರತಿ: ಕೆ.ಜಿ.ಗೆ 1.89 ರೂ.
  • ಡಿಎಪಿ (ಅಮೋನಿಯಂ ಫಾಸ್ಪೇಟ್‌) ಮೇಲಿನ ಸಬ್ಸಿಡಿ ಟನ್‌ಗೆ 4,500 ರೂ. ಮುಂದುವರಿಕೆ.
  • ಸರಕಾರದ ಸಹಾಯಧನ ಘೋಷಣೆ ಬಳಿಕ ಪ್ರತಿ ಬ್ಯಾಗ್‌ ಡಿಎಪಿ 1,350 ರೂ., ಮ್ಯೂರಿಯೇಟ್‌ ಪಾಸ್ಪೇಟ್‌(ಎಂಒಪಿ) 1,670 ರೂ., ಎನ್‌ಪಿಪಿ 1,470 ರೂ.ಗೆ ಲಭಿಸಲಿವೆ.

3 ಸೆಮಿಕಂಡಕ್ಟರ್‌ ಘಟಕ

ದೇಶದಲ್ಲಿಮೂರು ಸೆಮಿಕಂಡಕ್ಟರ್‌ ಘಟಕ ತೆರೆಯಲು ಕೇಂದ್ರ ಸಂಪುಟ ಸಭೆ ಅನುಮೋದಿಸಿದೆ. ಮುಂದಿನ 100 ದಿನಗಳಲ್ಲಿ ಮೂರು ಘಟಕಗಳ ನಿರ್ಮಾಣ ಆರಂಭಿಸಲು ಸರಕಾರ ನಿರ್ಧರಿಸಿದೆ. ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೇ ತಯಾರಿಕೆ ಪೂರಕ ವ್ಯವಸ್ಥೆ ಅಭಿವೃದ್ಧಿ ಪಡಿಸಲು 76,000 ಕೋಟಿ ರೂ. ಮೊತ್ತದ ಯೋಜನೆಗೆ ಸಂಪುಟ ಅಂಗೀಕಾರ ನೀಡಿದೆ.

ಗುಜರಾತ್‌ನ ಧೋಲೇರಾ, ಸಾನಂದ್‌ ಹಾಗೂ ಅಸ್ಸಾಂನ ಮೊರಿಗಾಂವ್‌ನಲ್ಲಿಮೂರು ಹೊಸ ಸೆಮಿಕಂಡಕ್ಟರ್‌ ಘಟಕ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ.

80 ಸಾವಿರ ಉದ್ಯೋಗ: ಮೂರು ಘಟಕಗಳು ಕಾರ್ಯಾರಂಭದ ಬಳಿಕ ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ20 ಸಾವಿರ ನೇರ, 60 ಸಾವಿರ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಸರಕಾರ ಅಂದಾಜಿಸಿದೆ.


Post a Comment

Previous Post Next Post
CLOSE ADS
CLOSE ADS
×