ಅನ್ನ ಭಾಗ್ಯ ಯೋಜನೆ: ಮಾರ್ಚ್ Admin ಅಕ್ಕಿ ಹಣದಲ್ಲಿ ಬಿಗ್ ಅಪೇಟ್, ಇಲ್ಲಿದೆ ಸಂಪೂರ್ಣ ಮಾಹಿತಿ. 3

ಅನ್ನ ಭಾಗ್ಯ ಯೋಜನೆ: ಮಾರ್ಚ್ Admin ಅಕ್ಕಿ ಹಣದಲ್ಲಿ ಬಿಗ್ ಅಪೇಟ್, ಇಲ್ಲಿದೆ ಸಂಪೂರ್ಣ ಮಾಹಿತಿ. 3

ನಮಸ್ಕಾರ ಸ್ನೇಹಿತರೇ, ಇಂದಿನ ವರದಿಯ ಮುಖ್ಯಾಂಶವೇನೆಂದರೆ, ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಬೇಕಿರುವ ಅನ್ನಭಾಗ್ಯ ಯೋಜನೆಯ ಹಣವನ್ನು ನವೀಕರಿಸಲಾಗಿದೆ. ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರೂಪಿಸಿರುವಂತಹ 'ಪಂಚ ಗ್ಯಾರಂಟಿ' ಯೋಜನೆಗಳಲ್ಲಿ ಒಂದಾಗಿರುವ, ಅನ್ನಭಾಗ್ಯ ಯೋಜನೆಯ ಹಣವು ಈಗಾಗಲೇ ಹಲವಾರು ಜನರ ಖಾತೆಗೆ ಜಮಾ ಆಗಿದೆ. ನಿಮ್ಮ ಬ್ಯಾಂಕ್ ಖಾತೆಗೂ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯೇ ಎನ್ನುವುದನ್ನು ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದರ ಮೂಲಕ ಅಥವಾ ನಿಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡುವುದರ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು. ಪ್ರತಿದಿನ ಇದೇ ತರಹದ ಉಚಿತ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ನಮ್ಮೊಂದಿಗೆ ಇರಿ.



ಈಗಿನ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ. ಸ್ವಲ್ಪ ದಿನಗಳ ಹಿಂದೆ ಈ ಯೋಜನೆ ಅಡಿಯಲ್ಲಿ ಹಣದ ಬದಲಾಗಿ ಅಕ್ಕಿಯನ್ನೇ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ಸರಿ ಪ್ರಮಾಣದ ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಹಣವನ್ನು ಮನೆಯ ಯಜಮಾನಿಯ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ರಾಜ್ಯದ ಹಲವಾರು ಫಲವಾನುಭವಿಗಳಿಗೆ ಮಾರ್ಚ್‌ ತಿಂಗಳ ಹಣ ಜಮಾ ಆಗಿದೆ, ಹಣ ಜಮಾ ಆಗದೇ ಇರುವ ಫಲಾನುಭವಿಗಳಿಗೆ ಈ ತಿಂಗಳ ಒಳಗಾಗಿ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಲಿದೆ ಎಂದು ಸರ್ಕಾರವು ಮಾಹಿತಿಯನ್ನು ನೀಡಿದೆ.

ರಾಜ್ಯ ಸರ್ಕಾರವು ಅನ್ನಭಾಗ್ಯ ಹಣವನ್ನು ಈ ತಿಂಗಳಲ್ಲೂ ಕೂಡ ಬಿಡುಗಡೆ ಮಾಡಿದ್ದು, ಎಲ್ಲಾ ಜಿಲ್ಲೆಯ ಫಲಾನುಭವಿಗಳಿಗೂ ಈ ಹಣ ಬಿಡುಗಡೆಗೊಳ್ಳಲಿದೆ ಎಂದು ಆಹಾರ ಇಲಾಖೆಯು ಸ್ಪಷ್ಟ ಮಾಹಿತಿಯನ್ನು ನೀಡಿದೆ.

ಮಾರ್ಚ್ ತಿಂಗಳ ಅನ್ನ ಭಾಗ್ಯ ಯೋಜನೆ ಹಣ ಜಮಾ

ನಮ್ಮ ರಾಜ್ಯದ ಒಬ್ಬ ಫಲಾನುಭವಿ ಮಹಿಳೆಯು ಈ ರೀತಿಯ ಮಾಹಿತಿಯನ್ನು ನೀಡಿದ್ದಾಳೆ: ಅವಳು ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳನ್ನು ಸರಿಯಾಗಿ ನೀಡಿದ್ದಾಳೆ ಆದರೂ ಕೂಡ ಅವಳಿಗೆ ಈ ಯೋಜನೆ ಹಣ ಜಮಾ ಆಗಿಲ್ಲ, ನಂತರ ಅವಳು ಬ್ಯಾಂಕ್ ಖಾತೆಯ ಸಮಸ್ಯೆ ಇದೆಯಾ ಎಂದು ಬ್ಯಾಂಕ್ ಆಫ್ ಬರೋಡ ದಲ್ಲಿ ಖಾತೆ ತೆರೆದ ಕೇವಲ ಮೂರು ದಿನಗಳಲ್ಲಿ ಅವಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ.

ನೀವು ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿಯನ್ನು ಸರಿಯಾಗಿ ನೀಡಿದ್ದರು, ಸಹ ನಿಮ್ಮಖಾತೆಗೆ ಹಣ ವರ್ಗಾವಣೆ ಆಗಿಲ್ಲ ಎಂದರೆ,ನೀವು ಹತ್ತಿರವಿರುವ ಪೋಸ್ಟ್ ಆಫೀಸ್ನಲ್ಲಿ ಒಂದು ಹೊಸ ಖಾತೆಯನ್ನು ತೆರೆಯುವುದು ಒಳ್ಳೆಯದು, ಇಲ್ಲವೇ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯಿರಿ (ಉದಾ: SBI, ಕೆನರಾ, ಬ್ಯಾಂಕ್ ಆಫ್ ಬರೋಡ). ನೀವು ಎಲ್ಲ ಮಾಹಿತಿಯನ್ನು ಸರಿಯಾಗಿ ನೀಡಿದ್ದರು ಸಹ ಹಣ ವರ್ಗಾವಣೆ ಆಗಿಲ್ಲ ಎಂದರೆ ಅದು ನಿಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ಸೀಡಿಂಗ್ ಸಮಸ್ಯೆಯೂ ಆಗಿರಬಹುದು, ಹಾಗಾಗಿ ನೀವು ಒಂದು ಹೊಸ ಖಾತೆಯನ್ನು ಆಧಾರ್ ದೃಢೀಕರಣ ಮೂಲಕ ತೆರೆದಾಗ ತಕ್ಷಣವೇ ಡಿಬಿಟಿ (DBT) ಮೂಲಕ ಹಣದ ವರ್ಗಾವಣೆ ಸುಲಭವಾಗಿ ಆಗುತ್ತದೆ ಇದೊಂದು ಪ್ರಯತ್ನ ಮಾಡಿ ನೋಡಿ.



• ಅನ್ನ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಕೆಳಗಡೆ ನೀಡಲಾದ ಎಲ್ಲಾ ಹಂತಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ ಹಣದ ವರ್ಗಾವಣೆಯ ಮಾಹಿತಿಯನ್ನು ಪಡೆಯಬಹುದು.

   https://ahara.kar.nic.in/lpg/

• ಫಲಾನುಭವಿಯು ಮೊದಲನೇದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಲು ಮೇಲೆ ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ ನಿಮ್ಮಜಿಲ್ಲೆಯ ಮೇಲೆ ಕಾಣಿಸುವ ಲಿಂಕ್ ಅನ್ನು ಕ್ಲಿಕ್ ಮಾಡಿ. 

• ನಂತರ ಕೆಳಭಾಗದಲ್ಲಿರುವ ನೇರ ನಗದು ವರ್ಗಾವಣೆ ಸ್ಥಿತಿ (DBT) ಮೇಲೆ ಕ್ಲಿಕ್ ಮಾಡಿ.

• ನಂತರದಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ನಮೂದಿಸಿ, ಆಮೇಲೆ ಗೋ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವವರ ಸದಸ್ಯರ ಸಂಖ್ಯೆ ಮುಖ್ಯಸ್ಥರ ಹೆಸರು, ಸದಸ್ಯರ ಯುಐಡಿ ಹಾಗೂ ಎಷ್ಟು ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ ಅಥವಾ ಆಗಿದೆ ಎನ್ನುವ ಮಾಹಿತಿಯನ್ನು ನೀವು ಕಾಣಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಯು, ಅನ್ನ ಭಾಗ್ಯ ಯೋಜನೆ ಹಣದ ವರ್ಗಾವಣೆಯ ಸ್ಥಿತಿಯನ್ನು ಮೇಲಿನ ಹಂತಗಳನ್ನು ಪಾಲಿಸುವ ಮುಖಾಂತರ ಪಡೆದುಕೊಳ್ಳಬಹುದು.

ಅನ್ನ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಿ ಇನ್ನು ಒಂದು ಕಂತಿನ ಹಣ ಜಮಾ ಆಗದೇ ಇರುವ ಫಲಾನುಭವಿಯು, ಮೇಲಿನ ಮಾಹಿತಿಯಲ್ಲಿರುವ ಹಾಗೆ ಹೊಸ ಬ್ಯಾಂಕ್ ಖಾತೆಯನ್ನು ಆಧಾರ್ ದೃಢೀಕರಣದ ಮೂಲಕ ತೆರೆಯುವುದು ಒಳ್ಳೆಯದು. ಹಣ ಜಮಾ ಆಗದೇ ಇರುವ ಫಲಾನುಭವಿಯು ಇದೊಂದು ಪ್ರಯತ್ನ ಮಾಡಿ ನೋಡಿ.

ಉತ್ತಮ ಮಾಹಿತಿಯನ್ನು ಹೊಂದಿದ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಬಂಧುಗಳಿಗೆ ಹಾಗೂ ಅಗತ್ಯವಿರುವ ಎಲ್ಲರಿಗೂ ಶೇರ್ ಮಾಡಿ. ಲೇಖನವನ್ನು ಓದಿದ ಎಲ್ಲರಿಗೂ ಧನ್ಯವಾದಗಳು.

ಪ್ರತಿದಿನ ನಮ್ಮ ಜಾಲತಾಣದಲ್ಲಿ ಪ್ರಸಾರವಾಗುವ ಇದೆ ತರಹದ ಸರ್ಕಾರಿ ಯೋಜನೆಗಳು ಉದ್ಯೋಗ ವಾರ್ತೆಗಳು ಹಾಗೂ ಇನ್ನಿತರ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಫಾಲೋ ಮಾಡಿಕೊಳ್ಳಿ.

Post a Comment

Previous Post Next Post
CLOSE ADS
CLOSE ADS
×