Crop Insurance: ಕೊನೆಗೂ ಬೆಳೆ ಪರಿಹಾರದ ಮೊತ್ತಕ್ಕೆ ಕಾಯುತ್ತಿದ್ದವರಿಗೆ ಅಧಿಕೃತ ಸಿಹಿಸುದ್ದಿ

Crop Insurance: ಕೊನೆಗೂ ಬೆಳೆ ಪರಿಹಾರದ ಮೊತ್ತಕ್ಕೆ ಕಾಯುತ್ತಿದ್ದವರಿಗೆ ಅಧಿಕೃತ ಸಿಹಿಸುದ್ದಿ

ಬರಗಾಲದ ನಿಮಿತವಾಗಿ ಬೇಸತ್ತಿರುವ ರೈತರಿಗೆ ಇದೀಗ ಸರ್ಕಾರವು ಹೊಸ ರೀತಿಯಾದಂತಹ ಸಿಹಿ ಸುದ್ದಿಯನ್ನು ನೀಡಿದೆ. ಹೌದು ಕೇಂದ್ರ ಸರ್ಕಾರದ ಯೋಜನೆ “ಫಸಲ್ ಭೀಮಾ ಯೋಜನೆ” ಅಡಿಯಲ್ಲಿ ನೋಂದಣಿ ಮಾಡಿಕೊಂಡ ರೈತರ ಪೈಕಿ ಕರ್ನಾಟಕದಲ್ಲಿ ಇರುವಂತಹ ರೈತರೇ ಅಧಿಕ ಮೊತ್ತದಲ್ಲಿ ಇದ್ದಾರೆ. ಇನ್ನು ಈ ಬಾರಿ ಹಿಂಗಾರು ಮತ್ತು ಮುಂಗಾರು ಮಳೆಯು ಕೈ ಕೊಟ್ಟಿದ್ದು ಇದರಿಂದ ದೇಶದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿರುವ ಕುರಿತಾಗಿ ರಾಜ್ಯ ಸರ್ಕಾರವು ಈಗಾಗಲೇ ಬರಗಾಲವನ್ನು ಘೋಷಿಸಿದೆ.



ಇನ್ನು ಸರಿಯಾದ ರೀತಿಯಲ್ಲಿ ಮಳೆ ಬಾರದ ಕಾರಣ ಬೆಳೆಯ ನಾಶ ಉಂಟಾಗಿ ಇದೀಗ ರೈತರು ಕೊರತೆಯನ್ನು ಎದುರಿಸುತ್ತಾ ಇದ್ದಾರೆ. ಇದರಿಂದ ರೈತರು ಹಾಕಿದಂತಹ ಬಂಡವಾಳ ಮತ್ತು ಬಿತ್ತಿದ ಬೆಳೆಯ ನಾಶ ಆಗಿರುವುದು ಬೇಸರದ ಸಂಗತಿ ಆಗಿದೆ. ಇನ್ನು ಈ ರೀತಿಯಾಗಿ ಸಂಕಷ್ಟ ಎದುರಿಸುತ್ತಿರುವಂತಹ ಪರಿಸ್ಥಿತಿ ಇದಾಗಿದೆ. ಹೀಗಾಗಿ ಸರ್ಕಾರವು ಬೆಳಹಾನಿ ಪರಿಹಾರ (Crop Insurance) ವನ್ನು ಈಗಾಗಲೇ ಹಲವು ರೈತರ ಖಾತೆಗೆ ಜಮಾ ಮಾಡುತ್ತಾ ಇದೆ. ಅದು ಕೂಡ ಫಸಲ್ ಭೀಮಾ ಯೋಜನೆ (Fasal Bima Yojana) ಮುಖಾಂತರ.

ಹಾಗಾದರೆ ಏನು ಈ ಫಸಲ್ ಭೀಮಾ ಯೋಜನೆ(Fasal Bima Yojana)?

ವಾತಾವರಣದಲ್ಲಿನ ಬದಲಾವಣೆ ಮತ್ತು ಸರಿಯಾದ ಸಮಯಕ್ಕೆ ಮಳೆ ಆಗದೆ ಇರುವ ಕಾರಣ ಬೆಳೆ ನಾಶ ಉಂಟಾದಲ್ಲಿ ಅದರಿಂದ ಕುಂಠಿತ ಆಗುವಂತಹ ರೈತರ ವ್ಯವಸ್ಥೆಯನ್ನು ಸರಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಫಸಲ್ ಭೀಮಾ ಯೋಜನೆ ಎಂಬ ಹೊಸ ಯೋಜನೆ ಅನ್ನು ಜಾರಿ ಮಾಡಿತು‌. ಇನ್ನು ಇದರ ಅಡಿಯಲ್ಲಿ ಸರಿಯಾದ ದಾಖಲೆಗಳನ್ನು ನೀಡಿ ರೈತರು ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಸರ್ಕಾರವು ಸೂಚನೆಯನ್ನು ಕೂಡ ನೀಡಿತು.

Crop Insurance Details:

ಇನ್ನು ಬೆಳೆ ಪರಿಹಾರ (Crop Insurance)ವಾಗಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡಂತಹ ರೈತರು 25 ಲಕ್ಷದಷ್ಟಿದ್ದು, ಅದರಲ್ಲಿ 45% ರಷ್ಟು ರೈತರು ನಮ್ಮ ಕರ್ನಾಟಕದವರೇ ಆಗಿದ್ದಾರೆ. ಇನ್ನು ಅದರಂತೆ 1400 ಕೋಟಿ ಮೊತ್ತವನ್ನು ಬಿಡುಗಡೆ ಮಾಡಿದಂತಹ ಸರ್ಕಾರ ಈಗಾಗಲೇ ಎಂಟು ಲಕ್ಷ ರೈತರಿಗೆ ಪರಿಹಾರವನ್ನು ಕೂಡ ಒದಗಿಸಿದೆ ಮತ್ತು ಅವರ ಖಾತೆಗೆ ಹಣವನ್ನು ಕೂಡ ಜಮಾ ಮಾಡಲಾಗಿದೆ. ಇನ್ನು ಉಳಿದ 800 ಕೋಟಿ ಹಣವನ್ನು ಮಾರ್ಚ್ 31ರ ಒಳಗಾಗಿ 13 ಲಕ್ಷ ರೈತರ ಖಾತೆಗೆ ಹಣವನ್ನು ಜಮಾ ಮಾಡುದಾಗಿ ಸರ್ಕಾರವು ತಿಳಿಸಿದೆ.

ಇನ್ನು ಇದರ ಸಲುವಾಗಿ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಿಕೊಳ್ಳುವಂತೆ ಸರ್ಕಾರವು ಕ್ರಮವನ್ನು ಕೈಗೊಂಡಿದೆ. ಈಗಾಗಲೇ ಬೆಳೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರವು ಪ್ರತಿ ರೈತರಿಗೆ 2000 ಮೊತ್ತವನ್ನು ಖಾತೆಗೆ ಜಮಾ ಮಾಡಿದ್ದು ಮಾರ್ಚ್ 31ರ ಒಳಗಾಗಿ ರೈತರಿಗೆ ಸಿಗಬೇಕಾದಂತಹ ಬೆಳೆ ಪರಿಹಾರದ ವಿಮೆಯ ಹಣದ ಮೊತ್ತವು ಸಿಗಲಿದೆ ಎಂದು ಸರ್ಕಾರವು ತಿಳಿಸಿದೆ.


Post a Comment

Previous Post Next Post
CLOSE ADS
CLOSE ADS
×