Ration Card: ಕ್ಯೂನಲ್ಲಿ ನಿಲ್ಲಬೇಕಿಲ್ಲ, ಎಲ್ಲಿಯೂ ಅಲೆಯಬೇಕಾಗಿಲ್ಲ: ಈಗ ಆನ್‌ಲೈನ್‌ನಲ್ಲೇ ಲಭ್ಯವಿವೆ ಪಡಿತರ ಚೀಟಿ ಡಿಟೇಲ್ಸ್

Ration Card: ಕ್ಯೂನಲ್ಲಿ ನಿಲ್ಲಬೇಕಿಲ್ಲ, ಎಲ್ಲಿಯೂ ಅಲೆಯಬೇಕಾಗಿಲ್ಲ: ಈಗ ಆನ್‌ಲೈನ್‌ನಲ್ಲೇ ಲಭ್ಯವಿವೆ ಪಡಿತರ ಚೀಟಿ ಡಿಟೇಲ್ಸ್

ಈಗ ನಿಮ್ಮ ರೇಷನ್ ಕಾರ್ಡ್ ನ ಎಲ್ಲಾ ಮಾಹಿತಿಯು ನಿಮಗೆ ಸುಲಭವಾಗಿ ಆನ್ಲೈನ್‌ನಲ್ಲಿ ಲಭ್ಯವಾಗುವಂತೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ವಿಶೇಷವೇನೆಂದರೆ, ನಿಮ್ಮ ಕಾರ್ಡ್ ಸಂಖ್ಯೆಯನ್ನು ನೀವು ಮರೆತಿದ್ದರೂ ಸಹ, ನಿಮ್ಮ ಪಡಿತರ ಕಾರ್ಡ್ ವಿವರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಇಲ್ಲಿ ಅವಕಾಶವಿದೆ.



ಪಡಿತರ ಚೀಟಿ (Ration card) ಯಾವುದೇ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಕ್ಕೆ ಅತಿ ಮುಖ್ಯವಾದುದು. ಇದು ಭಾರತೀಯರಿಗೆ (Indians) ಪ್ರಮುಖ ದಾಖಲೆ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ, ಪಡಿತರ ಚೀಟಿಯಿಂದಾಗಿ ನಾಉ ಸರ್ಕಾರದ ಬಹಳಷ್ಟು ಸೇವೆಗಳ ಲಾಭವನ್ನು ಪಡೆಯಬಹುದು. ದವಸ-ಧಾನ್ಯ ಸೇರಿದಂತೆ, ಆರೋಗ್ಯ ಸೇವೆ, ಶಿಕ್ಷಣ ಸಂಸ್ಥೆಗಳಲ್ಲೂ ಸಹ ಇದರ ಪ್ರಯೋಜನ ಬಹಳಷ್ಟಿದೆ. ಆದರೆ, ಪಡಿತರ ಚೀಟಿ ಮಾಡಿಸಬೇಕೆಂದರೆ, ಅಥವಾ ನಮ್ಮ ಚೀಟಿಯ ಮಾಹಿತಿ ಪಡೆಯಬೇಕೆಂದರೆ, ದಿನಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು, ಕ್ಯೂನಲ್ಲಿ ನಿಲ್ಲಬೇಕಾಗುತ್ತಿತ್ತು.

ಆದರೆ, ಇಂದಿನ ವೇಗದ ಜಗತ್ತಿನಲ್ಲೇ ಯಾರಿಗೂ ಕ್ಯೂ ನಲ್ಲಿ ನಿಂತು ಮಾಹಿತಿ ಪಡೆಯುವ ಸಮಯವಾಗಲೀ, ತಾಳ್ಮೆಯಾಗಲೀ ಇಲ್ಲ. ಹೀಗಾಗಿಯೇ ಈಗ ಸರ್ಕಾರ ಇದಕ್ಕೊಂದು ಪರಿಹಾರ ಸೂಚಿಸಿದೆ. ಇನ್ಮುಂದೆ ನಿಮ್ಮ ಪಡಿತರ ಚೀಟಿಯಲ್ಲಿನ ಮಾಹಿತಿ ಪಡೆಯಲು ಎಲ್ಲಿಯೂ ಅಲೆಯಬೇಕಾಗಿಲ್ಲ. ಕ್ಯೂನಲ್ಲಿ ನಿಲ್ಲಬೇಕಿಲ್ಲ.

ಹೌದು, ಈಗ ನಿಮ್ಮ ರೇಷನ್ ಕಾರ್ಡ್ ನ ಎಲ್ಲಾ ಮಾಹಿತಿಯು ನಿಮಗೆ ಸುಲಭವಾಗಿ ಆನ್ಲೈನ್‌ನಲ್ಲಿ ಲಭ್ಯವಾಗುವಂತೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ವಿಶೇಷವೇನೆಂದರೆ, ನಿಮ್ಮ ಕಾರ್ಡ್ ಸಂಖ್ಯೆಯನ್ನು ನೀವು ಮರೆತಿದ್ದರೂ ಸಹ, ನಿಮ್ಮ ಪಡಿತರ ಕಾರ್ಡ್ ವಿವರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಇಲ್ಲಿ ಅವಕಾಶವಿದೆ.

ನಿಮ್ಮ ರಾಜ್ಯದ ಪೋರ್ಟಲ್ ತಿಳಿದುಕೊಳ್ಳಿ

ಭಾರತದ ಪ್ರತಿ ರಾಜ್ಯದ ಪಡಿತರ ಚೀಟಿ ವ್ಯವಸ್ಥೆಯು ಒಂದಕ್ಕಿಂತ ಒಂದು ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ನಿಮ್ಮ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಆನ್ ಲೈನ್ ಪೋರ್ಟಲ್ ಅನ್ನು ತಿಳಿದುಕೊಳ್ಳಿ.

ಉದಾ**:**ಕರ್ನಾಟಕ ರಾಜ್ಯದ ಪೋರ್ಟಲ್ ಗಾಗಿ PDS ಪೋರ್ಟಲ್ ಕರ್ನಾಟಕ ಎಂದು ಟೈಪ್ ಮಾಡಿ. ಇದು ನಿಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ನಿಮ್ಮನ್ನು ಕರೆದೊಯ್ಯುತ್ತದೆ.

ನಂತರ, “PDS,” “ಪಡಿತರ ಕಾರ್ಡ್,” ಅಥವಾ “ನಾಗರಿಕ ಸೇವೆಗಳು” ನಂತಹ ವಿಭಾಗಗಳನ್ನು ನೋಡಿ. ಈ ವಿಭಾಗಗಳು ಆನ್‌ಲೈನ್ ಪಡಿತರ ಕಾರ್ಡ್ ಪೋರ್ಟಲ್‌ಗೆ ಲಿಂಕ್ ಅನ್ನು ಹೊಂದಿರುತ್ತವೆ.

ಬ್ಯಾಕಪ್ ಆಗಿ ರಾಷ್ಟ್ರೀಯ ಪೋರ್ಟಲ್: ನಿಮ್ಮ ರಾಜ್ಯದ ನಿರ್ದಿಷ್ಟ ಪೋರ್ಟಲ್ ಅನ್ನು ಹುಡುಕಲು ಸಾಧ್ಯವಾಗದಿದ್ದರೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ (NFSA) ವೆಬ್‌ಸೈಟ್ ಎಲ್ಲಾ ರಾಜ್ಯಗಳ PDS ಪೋರ್ಟಲ್‌ಗಳ ಸೂಕ್ತ ಪಟ್ಟಿಯನ್ನು ಒದಗಿಸುತ್ತದೆ. https://nfsa.gov.in/portal/ration_card_state_portals_aa ವೆಬ್ ಸೈಟ್ ಗೆ ಹೋಗಿ “ರಾಜ್ಯ-UT ಪೋರ್ಟಲ್‌ಗಳಲ್ಲಿ ಪಡಿತರ ಕಾರ್ಡ್ ವಿವರಗಳು” ಗೆ ಸ್ಕ್ರಾಲ್ ಮಾಡಿ. ಅಲ್ಲಿ, ನಿಮಗೆ ಪ್ರತಿ ರಾಜ್ಯದ PDS ಪೋರ್ಟಲ್‌ಗೆ ಲಿಂಕ್ ಗಳು ಕಾಣಿಸುತ್ತವೆ.

Post a Comment

Previous Post Next Post
CLOSE ADS
CLOSE ADS
×