ನವೋದಯ ವಿದ್ಯಾಲಯದಲ್ಲಿ 1377 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.! SSLC ಪಾಸಾಗಿದ್ರೆ ಸಾಕು ಅಪ್ಲೇ ಮಾಡಿ

ನವೋದಯ ವಿದ್ಯಾಲಯದಲ್ಲಿ 1377 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.! SSLC ಪಾಸಾಗಿದ್ರೆ ಸಾಕು ಅಪ್ಲೇ ಮಾಡಿ

ಹಲೋ ಸ್ನೇಹಿತರೇ, ಸಹಾಯಕರು, ಸ್ಟಾಫ್‌ ನರ್ಸ್‌, ಕಂಪ್ಯೂಟರ್ ಆಪರೇಟರ್‌ ಸೇರಿದಂತೆ ಒಟ್ಟು 1377 ನಾನ್‌ ಟೀಚಿಂಗ್ ಹುದ್ದೆಗಳಿಗೆ NVS ನೋಟಿಸ್‌ ಬಿಡುಗಡೆ ಮಾಡಿದೆ. SSLC, ಪಿಯುಸಿ, ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಸಂಪೂರ್ಣ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.



ನವೋದಯ ವಿದ್ಯಾಲಯ ಸಮಿತಿಯು ದೇಶದಾದ್ಯಂತ ತನ್ನ ಶಿಕ್ಷಣ ಸಂಸ್ಥೆಯನ್ನು ಹೊಂದಿದೆ. ಇಲ್ಲಿ ಅವಶ್ಯವಿರುವ ವಿವಿಧ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು 2024ನೇ ಸಾಲಿನ ಎಂಪ್ಲಾಯ್‌ಮೆಂಟ್‌ ನೋಟಿಫಿಕೇಶನ್‌ ಇದೀಗ ಬಿಡುಗಡೆ ಮಾಡಿದೆ. ನಿರುದ್ಯೋಗಿ ಪದವೀಧರರು, ಸ್ನಾತಕೋತ್ತರ ಪದವೀಧರರು, ಪಿಯುಸಿ, ಇತರೆ ಶಿಕ್ಷಣಗಳನ್ನು ಪಾಸಾದವರು ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಈಗಲೇ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ 

ಸ್ಟಾಫ್‌ ನರ್ಸ್‌ :121

ಅಸಿಸ್ಟಂಟ್ ಸೆಕ್ಷನ್‌ ಆಫೀಸರ್ (ಎಎಸ್‌ಒ) : 05

ಆಡಿಟ್ ಅಸಿಸ್ಟಂಟ್ :12

ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್ : 04

ಲೀಗಲ್ ಅಸಿಸ್ಟಂಟ್ : 01

ಸ್ಟೆನೋಗ್ರಾಫರ್ : 23

ಕಂಪ್ಯೂಟರ್ ಆಪರೇಟರ್ : 02

ಕ್ಯಾಟರಿಂಗ್ ಸೂಪರ್‌ವೈಸರ್ : 78

ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (HQ / RO Cadre) : 21

ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (ಜೆಎಸ್‌ಎ) : 360

ಇಲೆಕ್ಟ್ರೀಷಿಯನ್ ಕಮ್ ಪ್ಲಂಬರ್ : 128

ಲ್ಯಾಬ್‌ ಅಟೆಂಡಂಟ್ : 161

ಮೆಸ್‌ ಹೆಲ್ಪರ್ : 442

ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಎಂಟಿಎಸ್) : 19

ಹುದ್ದೆವಾರು ವಿದ್ಯಾರ್ಹತೆ

ಸ್ಟಾಫ್‌ ನರ್ಸ್‌ : B.Sc ನರ್ಸಿಂಗ್.

ಅಸಿಸ್ಟಂಟ್ ಸೆಕ್ಷನ್‌ ಆಫೀಸರ್ (ಎಎಸ್‌ಒ) : ಯಾವುದೇ ಪದವಿ ಪಾಸ್.

ಆಡಿಟ್ ಅಸಿಸ್ಟಂಟ್ : ಬಿ.ಕಾಂ ಪಾಸ್.

ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್ : ಸಂಬಂಧಿತ ವಿಷಯದಲ್ಲಿ ಪಿಜಿ ಪಾಸ್.

ಲೀಗಲ್ ಅಸಿಸ್ಟಂಟ್ : ಕಾನೂನು ಪದವಿ ಪಾಸ್.

ಸ್ಟೆನೋಗ್ರಾಫರ್ : 2nd PUC ಜತೆಗೆ ಟೈಪಿಂಗ್ ಸ್ಕಿಲ್ ಇರಬೇಕು.

ಕಂಪ್ಯೂಟರ್ ಆಪರೇಟರ್ : ಸಿಎಸ್‌, ಐಟಿ ವಿಷಯಗಳಲ್ಲಿ BE / B.tech / BCA/ BSC ಪಾಸ್.

ಕ್ಯಾಟರಿಂಗ್ ಸೂಪರ್‌ವೈಸರ್ : ಹೋಟೆಲ್‌ ಮ್ಯಾನೇಜ್ಮೆಂಟ್ ಡಿಗ್ರಿ.

ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (HQ / RO Cadre) : 2nd PUC ಜತೆಗೆ ಟೈಪಿಂಗ್ ಸ್ಕಿಲ್ ಇರಬೇಕು.

ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (ಜೆಎಸ್‌ಎ) : 2nd PUC ಜತೆಗೆ ಟೈಪಿಂಗ್ ಸ್ಕಿಲ್ ಇರಬೇಕು.

ಇಲೆಕ್ಟ್ರೀಷಿಯನ್ ಕಮ್ ಪ್ಲಂಬರ್ : ITI ಇನ್‌ ಇಲೆಕ್ಟ್ರೀಷಿಯನ್ and ವೈರಿಂಗ್.

ಲ್ಯಾಬ್‌ ಅಟೆಂಡಂಟ್ : SSLC / PUC ಜತೆಗೆ ಲ್ಯಾಬೋರೇಟರಿ ಟೆಕ್ನಿಕಲ್ ಸ್ಕಿಲ್‌.

ಮೆಸ್‌ ಹೆಲ್ಪರ್ : SSLC ಪಾಸ್.

ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಎಂಟಿಎಸ್) : SSLC ಪಾಸ್.

ಅಪ್ಲಿಕೇಶನ್‌ ಶುಲ್ಕ ವಿವರ

ಸ್ಟಾಫ್‌ ನರ್ಸ್‌ ಹುದ್ದೆಗೆ ಅಪ್ಲಿಕೇಶನ್‌ ಶುಲ್ಕ ರೂ.1500.

ಸ್ಟಾಫ್‌ ನರ್ಸ್‌ ಹುದ್ದೆಗಳಿಗೆ ಅರ್ಜಿ ಹಾಕುವ SE, ST / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.500.

ಇತರೆ ಹುದ್ದೆಗಳಿಗೆ ಅರ್ಜಿ ಹಾಕುವ ಸಾಮಾನ್ಯ/ OBC ಕೆಟಗರಿಯವರಿಗೆ ರೂ.1000.

ಇತರೆ ಕೆಟಗರಿಯವರಿಗೆ ರೂ.500.

ಅರ್ಜಿ ಸಲ್ಲಿಸುವ ವಿಧಾನ

ಈ ಮೇಲಿನ ಹುದ್ದೆಗಳಿಗೆ ಶೀಘ್ರದಲ್ಲೇ Online ಅರ್ಜಿ ಲಿಂಕ್‌ ಅನ್ನು ನವೋದಯ ವಿದ್ಯಾಲಯ ಸಮಿತಿಯು ಬಿಡುಗಡೆ ಮಾಡಲಿದೆ. ಆಸಕ್ತರು https://navodaya.gov.in/nvs/en/Home1 ವೆಬ್‌ಸೈಟ್‌ನಲ್ಲಿ ಅರ್ಜಿ ಲಿಂಕ್ ಪಡೆದುಕೊಳ್ಳುತ್ತಾರೆ.

ನವೋದಯ ವಿದ್ಯಾಲಯ ಸಮಿತಿಯು ದೇಶದಾದ್ಯಂತ 650 ಕ್ಕೂ ಹೆಚ್ಚು ರೀಜನಲ್ ಆಫೀಸ್‌ನ್ನು ಹೊಂದಿದ್ದು, ಇಲ್ಲಿ ಈ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.

Post a Comment

Previous Post Next Post
CLOSE ADS
CLOSE ADS
×