ನಮಸ್ಕಾರ ಸ್ನೇಹಿತರೆ ಕ್ಷಣಕ್ಕೊಂದು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತದೆ ಅದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬ ಗೊಂದಲಕ್ಕೆ ಸಾಕಷ್ಟು ಜನರು ಒಳಗಾಗುತ್ತಾರೆ ಅದರಂತೆ ಇತ್ತೀಚಿಗೆ ಗಾಂಧೀಜಿಯವರ ಬದಲಾಗಿ 500 ರೂಪಾಯಿ ನೋಟುಗಳ ಮೇಲೆ ಶ್ರೀ ರಾಮನ ಫೋಟೋವನ್ನು ಅಳವಡಿಸಲಾಗುತ್ತದೆ ಎನ್ನುವ ಸುದ್ದಿಯು ಕೂಡ ವೈರಲಾಗಿತ್ತು ಅದಾದ ನಂತರದಲ್ಲಿ ಈ ಸುದ್ದಿಯ ಕುರಿತು ಫ್ಯಾಕ್ಟ್ ಚೆಕ್ ಮಾಡಿದಾಗ ಈ ಸುದ್ದಿ ಸಂಪೂರ್ಣವಾಗಿ ಸುಳ್ಳು ಆಗಿದೆ ಎಂದು ತಿಳಿದು ಬಂದಿದೆ.
100 rupee note ban in country RBI’s clarification
ಅದರಂತೆ ಇದೀಗ ಮತ್ತೊಂದು ಸುದ್ದಿ ವೈರಲ್ ಆಗಿದೆ. ಅದೇನೆಂದರೆ, ಇದೀಗ ಹಳೆಯ ನೂರು ರೂಪಾಯಿ ನೋಟನ್ನು ಆರ್‌ಬಿಐ ಬ್ಯಾನ್ ಮಾಡುವ ಬಗ್ಗೆ ವೈರಲ್ ಸುದ್ದಿಯು ವಾಟ್ಸಾಪ್ನಲ್ಲಿ ಸಾಕಷ್ಟು ಹರಿದಾಡುತ್ತಿದ್ದು ಈ ಬಗ್ಗೆ ಆರ್‌ಬಿಐ ಏನು ಹೇಳುತ್ತದೆ ಎಂಬುದನ್ನು ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು.
ಹಳೆ ನೂರು ರೂಪಾಯಿ ನೋಟು ಅಮಾನ್ಯ ಆಗಲಿದೆ :
ಸದ್ಯ ಇದೀಗ ಜನರಲ್ಲಿ ಹಳೆಯ ನೂರು ರೂಪಾಯಿ ನೋಟಿನ ಬಗ್ಗೆ ಚರ್ಚೆ ಶುರುವಾಗಿದೆ ಹೌದು ಏನೆಂದರೆ ಹಳೆಯ ನೂರು ರೂಪಾಯಿ ನೋಟು ಅಮಾನ್ಯವಾಗುತ್ತದೆ ಎನ್ನುವ ಬಗ್ಗೆ ಸಾಕಷ್ಟು ಸುದ್ದಿಗಳು ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಹಾಗಾಗಿ ನಿಮ್ಮ ಬಳಿ ಇರುವಂತಹ ನೂರು ರೂಪಾಯಿ ನೋಟನ್ನು ಆದಷ್ಟು ಬೇಗ ಖರ್ಚು ಮಾಡುವುದು ಅಥವಾ ಬ್ಯಾಂಕಿಗೆ ಹಿಂದಿರುಗಿಸುವುದು ಉತ್ತಮವಾಗಿದೆ ಎಂದು ಹೇಳಬಹುದು.
RBI ನಿಂದ ಸ್ಪಷ್ಟನೆ :
ಇದೀಗ 100 ರೂಪಾಯಿಯ ಹಳೆಯ ನೋಟು ಅಮಾನ್ಯವಾಗಿದ್ದು ಈ ನೂರು ರೂಪಾಯಿ ನೋಟನ್ನು ಮಾರ್ಚ್ 31 ರಂದು ವಿನಿಮಯ ಮಾಡಿಕೊಳ್ಳಲು ಕೊನೆಯ ದಿನಾಂಕವಾಗಿದೆ ಹಾಗಾಗಿ ತಮ್ಮ ಬಳಿ ಇರುವಂತಹ ನೂರು ರೂಪಾಯಿ ನೋಟನ್ನು ಬ್ಯಾಂಕುಗಳಲ್ಲಿ ನೀವು ವಿನಿಮಯ ಮಾಡಿಕೊಳ್ಳಬೇಕಾಗಿದೆ ಏಕೆಂದರೆ ಏಪ್ರಿಲ್ ಒಂದರಿಂದ ಈ ನೋಟುಗಳು ಮಾನ್ಯವಾಗಿರುವುದಿಲ್ಲ.
ಎಂಬ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದೊಂದು ಸುಳ್ಳು ಸುದ್ದಿ ಎಂದುRBI ಸ್ಪಷ್ಟನೆ ನೀಡಿದೆ. RBI ನೂರು ರೂಪಾಯಿ ನೋಟನ್ನು ಬ್ಯಾನ್ ಮಾಡುವ ಬಗ್ಗೆ ಯಾವುದೇ ರೀತಿಯ ಘೋಷಣೆಯನ್ನು ಹೊರಡಿಸಿಲ್ಲ ಎಂದು ಎಲ್ಲರಿಗೂ ಸ್ಪಷ್ಟಪಡಿಸಿದೆ.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಷಯಗಳು ಹರಿದಾಡುತ್ತಿದ್ದು ಇದೀಗ ಹಳೆಯ ನೂರು ರೂಪಾಯಿ ನೋಟು ಅಮಾನ್ಯವಾಗುತ್ತದೆ ಎಂಬ ಸುದ್ದಿಯು ಹರಿದಾಡುತ್ತಿದ್ದು ಇದೀಗ ಆ ಸುದ್ದಿ ಶುದ್ಧ ಸುಳ್ಳು ಎಂಬ ಮಾಹಿತಿಯು ಹೊರ ಬಿದ್ದಿದೆ.
ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಆರ್‌ಬಿಐ ಯಾವುದೇ ರೀತಿಯ ನೋಟ್ ಅಮನ್ಯವಾಗುವುದರ ಬಗ್ಗೆ ಹೇಳಿರುವುದರ ಬಗ್ಗೆ ತಿಳಿಸಿ. ಇದರಿಂದ ಅವರು ಯಾವುದೇ ರೀತಿಯಲ್ಲಿ ಬ್ಯಾಂಕಿಗೆ ಹೋಗುವಂತಹ ಕಷ್ಟ ಇಲ್ಲ ಎಂದು ತಿಳಿಸಿ ಧನ್ಯವಾದಗಳು.