JOBS: ಭಾರತೀಯ ನೌಕಾದಳದಲ್ಲಿ 254 ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಾರ್ಚ್ 10, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.



Indian Navy Recruitment 2024: ಭಾರತೀಯ ನೌಕಾದಳ(Indian Navy) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 254 ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್ 10, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್ಸೈಟ್ www.indiannavy.nic.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:

  • ಜನರಲ್ ಸರ್ವೀಸ್- 50
  • ಪೈಲಟ್-20
  • ನೇವಲ್ ಏರ್ ಆಪರೇಶನ್ಸ್ ಆಫೀಸರ್- 18
  • ಏರ್ ಟ್ರಾಫಿಕ್ ಕಂಟ್ರೋಲರ್-8
  • ಲಾಜಿಸ್ಟಿಕ್ಸ್- 30
  • ನೇವಲ್ ಅರ್ಮಾಮೆಂಟ್ ಇನ್ಸ್ಪೆಕ್ಟರೇಟ್ ಕೇಡರ್ (NAIC)- 10
  • ಎಜುಕೇಷನ್-18
  • ಎಂಜಿನಿಯರಿಂಗ್ ಬ್ರಾಂಚ್ (ಜನರಲ್ ಸರ್ವೀಸ್)- 30
  • ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವೀಸ್)- 5
  • ನೇವಲ್ ಕನ್ಸ್ಟ್ರಕ್ಟರ್-20

ವಿದ್ಯಾರ್ಹತೆ:

  • ಜನರಲ್ ಸರ್ವೀಸ್, ಪೈಲಟ್, ನೇವಲ್ ಏರ್ ಆಪರೇಶನ್ಸ್ ಆಫೀಸರ್, ಏರ್ ಟ್ರಾಫಿಕ್ ಕಂಟ್ರೋಲರ್- ಬಿಇ/ಬಿ.ಟೆಕ್
  • ಲಾಜಿಸ್ಟಿಕ್ಸ್- ಬಿ.ಎಸ್ಸಿ, ಬಿ.ಕಾಂ, ಬಿಇ/ಬಿ.ಟೆಕ್, ಎಂಸಿಎ, ಎಂ.ಎಸ್ಸಿ, ಎಂಬಿಎ, ಸ್ನಾತಕೋತ್ತರ ಪದವಿ
  • ನೇವಲ್ ಅರ್ಮಾಮೆಂಟ್ ಇನ್ಸ್ಪೆಕ್ಟರೇಟ್ ಕೇಡರ್ (NAIC)- ಬಿಇ/ಬಿ.ಟೆಕ್
  • ಎಜುಕೇಷನ್-ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂ.ಎಸ್ಸಿ, ಎಂ.ಟೆಕ್
  • ಎಂಜಿನಿಯರಿಂಗ್ ಬ್ರಾಂಚ್ (ಜನರಲ್ ಸರ್ವೀಸ್), ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವೀಸ್), ನೇವಲ್ ಕನ್ಸ್ಟ್ರಕ್ಟರ್- ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂ.ಎಸ್ಸಿ, ಎಂ.ಟೆಕ್

ವಯೋಮಿತಿ:

ನಿಗದಿಪಡಿಸಿಲ್ಲ. ನಿಯಮಾನುಸಾರ ಇರುತ್ತದೆ. ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:

ಮಾಸಿಕ ₹ 56,100

ಉದ್ಯೋಗದ ಸ್ಥಳ:

ಭಾರತದಲ್ಲಿ ಎಲ್ಲಿ ಬೇಕಾದರೂ

ಅರ್ಜಿ ಶುಲ್ಕ:

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ:

  • ಮೆರಿಟ್ ಲಿಸ್ಟ್
  • ದಾಖಲಾತಿ ಪರಿಶೀಲನೆ

ಆಯ್ಕೆ ಪ್ರಕ್ರಿಯೆ:

  • ಮೆರಿಟ್ ಲಿಸ್ಟ್
  • ದಾಖಲಾತಿ ಪರಿಶೀಲನೆ
  • ಮೆಡಿಕಲ್ ಟೆಸ್ಟ್
  • ಸಂದರ್ಶನ

ಅರ್ಜಿ ಹಾಕೋದು ಹೇಗೆ?

  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/02/2024
  • ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 10, 2024

Previous Post Next Post