UPSC CSE Notification 2024: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ 2024ನೇ ಸಾಲಿನ ನಾಗರೀಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ವರ್ಷ ಒಟ್ಟು 1056 ಸಿವಿಲ್ ಸೇವೆಗೆ ಈ ನೇಮಕ ಪ್ರಕ್ರಿಯೆ ನಡೆಸಲಿದೆ.
ಕೇಂದ್ರ ಲೋಕಸೇವಾ ಆಯೋಗವು ಪ್ರತಿ ವರ್ಷವು ಸಹ ಭಾರತ ಸರ್ಕಾರದ ಇಲಾಖೆ, ಸಚಿವಾಲಯ, ಸಂಸ್ಥೆಗಳ ಗ್ರೂಪ್ ಎ ನಾಗರೀಕ ಸೇವೆ ಹುದ್ದೆಗಳ ಭರ್ತಿಗೆ ಪರೀಕ್ಷೆ ನೋಟಿಫಿಕೇಶನ್ ಬಿಡುಗಡೆ ಮಾಡುತ್ತದೆ. ಅಂತೆಯೇ ಇದೀಗ 2024ನೇ ಸಾಲಿನ ಯುಪಿಎಸ್‌ಸಿ ಸಿಎಸ್‌ಇ ಪ್ರಿಲಿಮ್ಸ್ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಒಟ್ಟು 1056 ಸಿವಿಲ್ ಸೇವೆಗಳಿಗೆ ಈ ಭಾರಿಯ ನೇಮಕ ಪ್ರಕ್ರಿಯೆ ನಡೆಸಲಿದೆ. ಅರ್ಜಿಗೆ ಇತರೆ ಹೆಚ್ಚಿನ ವಿವರಗಳನ್ನು ಕೆಳಗಿನಂತೆ ತಿಳಿಸಲಾಗಿದೆ.
Overview
- ನೇಮಕಾತಿ ಪರೀಕ್ಷಾ ಪ್ರಾಧಿಕಾರ : ಕೇಂದ್ರ ಲೋಕಸೇವಾ ಆಯೋಗ
- ಪರೀಕ್ಷೆ ಹೆಸರು : ಸಿವಿಲ್ ಸರ್ವೀಸೆಸ್ ಪ್ರಿಲಿಮ್ಸ್ ಪರೀಕ್ಷೆ 2024
- ಭರ್ತಿ ಮಾಡುವ ಹುದ್ದೆಗಳ ಸಂಭಾವ್ಯ ಸಂಖ್ಯೆ: 1056
ಶೈಕ್ಷಣಿಕ ಅರ್ಹತೆ :
ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಯಾವುದೇ ವಿಷಯ / ವಿಭಾಗದಲ್ಲಿ ಪದವಿ ಪಾಸ್ ಮಾಡಿರಬೇಕು.
ವಯಸ್ಸಿನ ಅರ್ಹತೆ:-
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 32 ವರ್ಷ ವಯಸ್ಸು ಮೀರಿರಬಾರದು.
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
- ಒಬಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಪ್ರಮುಖ ದಿನಾಂಕಗಳು
- ಅಪ್ಲಿಕೇಶನ್ ಸಲ್ಲಿಸಲು ಆರಂಭ ದಿನಾಂಕ : 14-02-2024
- ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 05-03-2024 (18-00 PM)
- ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ: 06-03-2024 ರಿಂದ 12-03-2024
- ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ದಿನಾಂಕ : 26-05-2024
- ಅಭ್ಯರ್ಥಿಗಳು ಯುಪಿಎಸ್‌ಸಿ ನೇಮಕಾತಿಗೆ ಅರ್ಜಿ ಹಾಕಲು ವೆಬ್‌ಸೈಟ್ upsconline.nic.in ಗೆ ಭೇಟಿ ನೀಡಿ.
UPSC CSE Prelims Exam 2024 Notification
Tags:
Recruitment
