Scholarship For UG, PG, Diploma Students : ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುವ Piaggio ಸ್ಕಾಲರ್‌ಶಿಪ್ ಪ್ರೋಗ್ರಾಮ್‌ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ, ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ.
ಪಿಯಾಜಿಯೋ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ಪ್ರತಿಭಾವಂತ ಮತ್ತು ಬಡಕುಟುಂಬದ ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕಾಗಿ ನೀಡುವ 'ಶಿಕ್ಷಾ ಸೆ ಸಂವೃದ್ಧಿ' ಸ್ಕಾಲರ್‌ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪದವಿ, ಯಾವುದೇ ಸ್ನಾತಕೋತ್ತರ ಪದವಿ, ಡಿಪ್ಲೊಮ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿನಿಯರು ಈ ಸ್ಕಾಲರ್‌ಶಿಪ್ ಸೌಲಭ್ಯವನ್ನು ಪಡೆಯಬಹುದು.
▶️ವಿದ್ಯಾರ್ಥಿವೇತನದ ಹೆಸರು : 'ಶಿಕ್ಷಾ ಸೆ ಸಂವೃದ್ಧಿ' ಸ್ಕಾಲರ್‌ಶಿಪ್
▶️ವಿದ್ಯಾರ್ಥಿವೇತನ ಸೌಲಭ್ಯ : ರೂ.15,000 - 20,000.
▶️ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 07-01-2024
ಅರ್ಹತೆಗಳು
▶️ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮ ಕೋರ್ಸ್ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು.
▶️ಈ ಶಿಕ್ಷಣಗಳಿಗಾಗಿ ಅಂತಿಮ ವರ್ಷದಲ್ಲಿ ಪ್ರವೇಶ ಪಡೆದು, ಅಧ್ಯಯನ ಮುಂದುವರೆಸಿರುವ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಬೇಕು.
▶️ತಮ್ಮ ಹಿಂದಿನ ಶಿಕ್ಷಣದಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಪಾಸ್ ಆಗಿರಬೇಕು.
▶️ವಿದ್ಯಾರ್ಥಿನಿಯ ಕುಟುಂಬದ ವಾರ್ಷಿಕ ಆದಾಯ ರೂ.4 ಲಕ್ಷ ಮೀರಿರಬಾರದು.
▶️ಪಿಯಾಜಿಯೋ ಮತ್ತು Buddy4Study ಸಿಬ್ಬಂದಿಗಳು ಅರ್ಜಿ ಸಲ್ಲಿಸುವಂತಿಲ್ಲ.
ಅಪ್ಲಿಕೇಶನ್ ಸಲ್ಲಿಸಲು ಬೇಕಾದ ದಾಖಲೆಗಳು / ಮಾಹಿತಿಗಳು
▶️ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
▶️ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಹಿಂದಿನ ವರ್ಷದ ಶೈಕ್ಷಣಿಕ ದಾಖಲೆಗಳು
▶️ಆಧಾರ್ ಕಾರ್ಡ್
▶️ಆದಾಯ ಪ್ರಮಾಣ ಪತ್ರ
▶️ಪ್ರಸ್ತುತ ವರ್ಷ ಶಿಕ್ಷಣಕ್ಕೆ ಪ್ರವೇಶ ಪಡೆದ ದಾಖಲೆ / ಪ್ರವೇಶ ಶುಲ್ಕ ಪಾವತಿಯ ದಾಖಲೆ
▶️ವಿದ್ಯಾರ್ಥಿಯ ಬ್ಯಾಂಕ್ ಖಾತೆ ಜೆರಾಕ್ಸ್ ಪ್ರತಿ
ಆಸಕ್ತರು ಮತ್ತು ಅರ್ಹತೆ ಇರುವವರು ಈ ಕೆಳಗಿನ ಡೈರೆಕ್ಟ್ ಲಿಂಕ್ ಕ್ಲಿಕ್ ಮಾಡಿ. 'ಶಿಕ್ಷಾ ಸೆ ಸಂವೃದ್ಧಿ' ಸ್ಕಾಲರ್‌ಶಿಪ್ ಪ್ರೋಗ್ರಾಮ್‌ನ ಮಾಹಿತಿ ಇರುತ್ತದೆ. ಓದಿಕೊಳ್ಳಿ. ಸ್ಕ್ರಾಲ್‌ಡೌನ್ ಮಾಡಿದಾಗ ಮತ್ತೆ 'Apply Online' ಎಂದಿರುವ ಲಿಂಕ್ ಕ್ಲಿಕ್ ಮಾಡಿ. ಇಮೇಲ್, ಜಿಮೇಲ್, ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ, ರಿಜಿಸ್ಟ್ರೇಷನ್ ಪಡೆದು ಅರ್ಜಿ ಸಲ್ಲಿಸಿ.