ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿದ್ರು ಬಿಲ್ ಬಂತಾ? ಹೀಗೆ ಮಾಡಿ ಜೀರೋ ಬಿಲ್ ಬರುತ್ತೆ

ಸಾಮಾನ್ಯವಾಗಿ ವಿದ್ಯುತ್ ಬಿಲ್ ಜಾಸ್ತಿ (Electricity Bill) ಬಂದೇ ಬರುತ್ತದೆ. ನೀವು ಈಗ ನಾವು ಹೇಳುವ ರೀತಿ ಮಾಡುವುದರಿಂದ ವಿದ್ಯುತ್ ಬಿಲ್ ಕಡಿಮೆಯಾಗಲಿದೆ



🧧ಈಗ ಐದು ನಿಮಿಷಗಳ ಕಾಲ ವಿದ್ಯುತ್ ಇಲ್ಲ ಎಂದರೆ ಬದುಕಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ನಾವು ವಿದ್ಯುತ್ (electricity)ನ್ನು ಅವಲಂಬಿಸಿದ್ದೇವೆ. ಮೊದಲೆಲ್ಲ ನಮ್ಮ ಹಿರಿಯರು ಎಷ್ಟೋ ಕೆಲಸಗಳನ್ನು ತಮ್ಮ ಕೈಯಾರೆ ಮಾಡುತ್ತಿದ್ದರು.

🧧ಈಗ ಅದನ್ನೇಲ್ಲ ಮಷಿನ್ಗಳು (machine) ಆಕ್ರಮಿಸಿಕೊಂಡಿವೆ. ಯಂತ್ರಗಳ ಮೂಲಕ ಕೆಲಸ ಮಾಡಲು ವಿದ್ಯುತ್ ಅವಶ್ಯ. ಹಾಗಾಗಿ ನಾವು ವಿದ್ಯುತ್ ಅನ್ನು ತುಂಬಾನೆ ಅವಲಂಬಿಸಿದ್ದೇವೆ.

🧧ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ (Congress government) ವಿದ್ಯುತ್ ಬಳಕೆ ದರವನ್ನು ಏರಿಸಿದೆ. ಗೃಹಜ್ಯೋತಿ ಯೋಜನೆ (Gruha Jyothi scheme) ಫಲಾನುಭವಿಗಳಿಗೆ ಈ ಬಿಸಿ ದೊಡ್ಡದಾಗಿ ತಟ್ಟದಿದ್ದರೂ ಫಲಾನುಭವಿಗಳಾಗದಿದ್ದವರು ಭಾರಿ ಹೊರೆ ಅನುಭವಿಸುವಂತಾಗಿದೆ. ಇದರಿಂದ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

🧧ಆದರೆ ನೀವು ಕೆಲವೊಂದು ಕ್ರಮಗಳನ್ನು ಕೈಗೊಳ್ಳುವುದರಿಂದ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು. ಈಗ ಪ್ರತಿಯೊಬ್ಬರ ಮನೆಯಲ್ಲೂ ಇನ್ವರ್ಟರ್, ಎಸಿ, ವಾಷಿಂಗ್ ಮಷಿನ್, ಫ್ಯಾನ್, ಕೂಲರ್, ಮಿಕ್ಸಿ, ಗ್ರ್ಯಾಂಡರ್, ಇಸ್ತ್ರಿ ಪೆಟ್ಟಿಗೆ, ಫ್ರಿಜ್ ಹೀಗೆ ಅನೇಕ ವಿದ್ಯುತ್ ಬಳಕೆಯಾಗುವ ವಸ್ತುಗಳು ಇರುತ್ತವೆ. ಇವುಗಳ ಬಳಕೆಯಿಂದ ಸಾಮಾನ್ಯವಾಗಿ ವಿದ್ಯುತ್ ಬಿಲ್ ಜಾಸ್ತಿ (Electricity Bill) ಬಂದೇ ಬರುತ್ತದೆ. ನೀವು ಈಗ ನಾವು ಹೇಳುವ ರೀತಿ ಮಾಡುವುದರಿಂದ ವಿದ್ಯುತ್ ಬಿಲ್ ಕಡಿಮೆಯಾಗಲಿದೆ.

ವಿದ್ಯುತ್ ಬಿಲ್ ಕಡಿಮೆ ಮಾಡುವ ಉಪಾಯಗಳು: (how to reduce electricity bill)

*Tips to Reduce Electricity Bill

ಎಲ್ಇಡಿ ಬಲ್ಬ್ ಗಳಿಗೆ ಆದ್ಯತೆ ನೀಡಿ: (use LED bulb)

ನೀವು ಮನೆಯಲ್ಲಿ ಹೆಚ್ಚಿನದಾಗಿ ಟ್ಯೂಬ್ಲೈಟ್ ಬಳಕೆ ಮಾಡುತ್ತಿದ್ದರೆ ಅದನ್ನು ಮೊದಲು ಬಿಡಬೇಕು. ಇದರ ಬದಲು ಎಲ್ಇಡಿ ಬಲ್ಬ್ ಬಳಕೆ ಮಾಡಬೇಕು. ಈಗ ಮಾರುಕಟ್ಟೆಯಲ್ಲಿ 2 ವ್ಯಾಟ್ನಿಂದ 40 ವ್ಯಾಟ್ಗಳ ವರೆಗೆ ಎಲ್ಇಡಿ ಬಲ್ಪ್ಗಳು ಸಿಗುತ್ತವೆ. ನಿಮ್ಮ ಮನೆಗೆ ಎಷ್ಟು ವ್ಯಾಟ್ ಬಲ್ಪ್ ಅಗತ್ಯವಿದೆಯೋ ಅದನ್ನು ಖರೀದಿಸಿ ಬಳಕೆ ಮಾಡಬೇಕು. ಇದರಿಂದ ವಿದ್ಯುತ್ ಉಳಿತಾಯವಾಗಲಿದೆ.

ಫ್ರಿಜ್ ಖಾಲಿಯಾದಾಗ ಬಂದ್ ಮಾಡಿ ಇಡಿ: (switch off the refrigerator switch)

ಸಾಮಾನ್ಯವಾಗಿ ಈಗ ಎಲ್ಲರ ಮನೆಯಲ್ಲೂ ಫ್ರಿಜ್ ಇದ್ದೇ ಇರುತ್ತದೆ. ಒಮ್ಮೆ ಅದನ್ನು ಚಾಲು ಮಾಡಿ ಇಟ್ಟರೆ ಅದನ್ನು ಬಂದ್ ಮಾಡುವ ಗೋಜಿಗೆ ಹೋಗುವುದಿಲ್ಲ. ಇದು ಸರಿಯಾದ ಕ್ರಮವಲ್ಲ.

ನಿಮ್ಮ ಮನೆಯ ಫ್ರಿಜ್ ಖಾಲಿಯಾಗಿದ್ದರೆ ಅದನ್ನು ಬಂದ್ ಮಾಡಿ ಇಡಿ. ತರಕಾರಿ, ಹಾಲು, ಮೊಸರನ್ನು ರೆಫ್ರಿಜರೇಟರ್ನಲ್ಲಿ ಇಡುವುದು ಸೂಕ್ತ. ಇದರಿಂದ ಅವು ಕೆಡುವುದಿಲ್ಲ. ಇದರಿಂದಲೂ ವಿದ್ಯುತ್ ನೀವು ಕಡಿಮೆ ಬಳಕೆ ಮಾಡಬಹುದಾಗಿದೆ.

ದೀಪ ಆರಿಸಿ ಮಲಗಿ: (switch off the light when you are sleeping)

ಹೆಚ್ಚಿನ ಮನೆಗಳಲ್ಲಿ ರಾತ್ರಿ ಮಲಗುವಾಗಲು ಬಲ್ಪ್ ಹಚ್ಚಿಟ್ಟೇ ಮಲಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ಮುಂದೆ ಎಲ್ಲ ಬಲ್ಪಗಳನ್ನು ಆರಿಸಿ ಮಲಗಿಕೊಳ್ಳಿ.

ಹೊಸ ಫ್ಯಾನ್ ಬಳಕೆ ಮಾಡಿ: (new fan usage)

ನೀವು ಮನೆಯಲ್ಲಿ ಹಳೆಯ ಫ್ಯಾನ್ಗಳನ್ನು ಬಳಕೆ ಮಾಡುತ್ತಿದ್ದರೆ ಅದನ್ನು ಮೊದಲು ಬದಲಾಯಿಸಿ. ಈಗ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನದ ಬಿಎಲ್ಡಿಎಸ್ ಫ್ಯಾನ್ಗಳು ಬಂದಿವೆ. ಅವುಗಳನ್ನು ನಿಮ್ಮ ಮನೆಗೆ ಹಾಕಿಸಿಕೊಳ್ಳಿ. ಇದರಿಂದಲೂ ನೀವು ವಿದ್ಯುತ್ ಉಳಿತಾಯ ಮಾಡಬಹುದಾಗಿದೆ.

ನೀವು ಆರ್ಥಿಕವಾಗಿ ಸ್ಥಿತಿವಂತರಾಗಿದ್ದರೆ ಮನೆಗೆ ಸೌರ ವಿದ್ಯುತ್ ವ್ಯವಸ್ಥೆ (solar electricity system) ಮಾಡಿಕೊಳ್ಳುವುದು ಉತ್ತಮ. ಇದರಿಂದ ತುಂಬಾನೆ ವಿದ್ಯುತ್ ಉಳಿತಾಯವಾಗಲಿದೆ.


ನೀವು ಉಚಿತವಾಗಿ ಬಳಸಿಕೊಳ್ಳುವುದು ಮಾತ್ರವಲ್ಲದೆ ನಿಮಗೆ ಹೆಚ್ಚಾದ ವಿದ್ಯುತ್ ಅನ್ನು ಸರ್ಕಾರ ಖರೀದಿಸಲಿದೆ. ಇದರಿಂದ ನೀವು ಲಾಭವನ್ನು ಗಳಿಸಬಹುದು. ಜೊತೆ ಮನೆಯಲ್ಲಿ ವಿದ್ಯುತ್ ಬಿಲ್ (Electricity Bill) ಬಾರದಂತೆಯೂ ತಡೆಯಬಹುದಾಗಿದೆ.

Previous Post Next Post