Post Office Scheme : ನೀವು ಸೇಫ್ ಆಗಿ ಉಳಿತಾಯ ಮಾಡಲು ಬಯಸಿದರೆ ಬ್ಯಾಂಕ್ (Bank) ಅಥವಾ ಅಂಚೆ ಕಚೇರಿ (Post Office) ಉತ್ತಮ ಆಯ್ಕೆಯಾಗಲಿವೆ.
Post Office Scheme : ನೀವು ಹಣ ಉಳಿತಾಯ (savings) ಮಾಡಲು ಬಯಸಿದರೆ ಹಣ ಉಳಿತಾಯ ಮಾಡಲು ಸಾಕಷ್ಟು ಮಾರ್ಗಗಳು ಇವೆ. ಅದರಲ್ಲಿ ಸರಿಯಾದ ಮಾರ್ಗವನ್ನು ಆಯ್ದುಕೊಂಡು ಹೆಚ್ಚು ಲಾಭ ಬರುವಂತೆ ಮಾಡಿಕೊಳ್ಳಬಹುದು.
ಉದಾಹರಣೆಗೆ ಮ್ಯೂಚುವಲ್ ಫಂಡ್ (mutual fund) ಎಸ್ ಐ ಪಿ (SIP) ಮೊದಲಾದ ಕಡೆ ನೀವು ಹೂಡಿಕೆ ಮಾಡಿದರೆ ಇದರಲ್ಲಿ ಲಾಭ ಅಧಿಕ ಆದರೆ ಅಷ್ಟೇ ಅಪಾಯದ ಮಟ್ಟವು ಇರುತ್ತದೆ, ಹಾಗಾಗಿ ನೀವು ಸೇಫ್ ಆಗಿ ಉಳಿತಾಯ ಮಾಡಲು ಬಯಸಿದರೆ ಬ್ಯಾಂಕ್ (Bank) ಅಥವಾ ಅಂಚೆ ಕಚೇರಿ (Post Office) ಉತ್ತಮ ಆಯ್ಕೆಯಾಗಲಿವೆ.
ಅಂಚೆ ಕಚೇರಿಯ ಯೋಜನೆ (Post office savings scheme)
ಭಾರತೀಯ ಅಂಚೆ ಕಚೇರಿಯಲ್ಲಿ ಉಳಿತಾಯ ಯೋಜನೆ ಆರಂಭಿಸುವುದಾದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಉತ್ತಮ ಆಫರ್ ಕೂಡ ನೀಡಲಾಗುತ್ತಿದೆ. ಉಳಿತಾಯ ಯೋಜನೆಗಳ ಮೇಲೆ ಬಡ್ಡಿ ದರವನ್ನು (interest rate increased) ಕೂಡ ಹೆಚ್ಚಿಸಲಾಗಿದ್ದು ಹೆಚ್ಚು ಆದಾಯ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಅದು ಅಲ್ಲದೆ 2023ರ ಕೇಂದ್ರ ಬಜೆಟ್ (Central budget) ನಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಹೂಡಿಕೆ ಯೋಜನೆಗಳನ್ನು ಪೋಸ್ಟ್ ಆಫೀಸ್ ನಲ್ಲಿ ಪರಿಚಯಿಸಲಾಗಿದೆ ಇದರ ಜೊತೆಗೆ ಈಗಾಗಲೇ ಇರುವ ಯೋಜನೆಗಳ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (Post office monthly income scheme)
Post office Scheme
ಅಂಚೆ ಕಚೇರಿಯಲ್ಲಿ ನೀವು ಮಾಸಿಕ ಆದಾಯ ಯೋಜನೆ ಆರಂಭಿಸಿದರೆ ಹೆಚ್ಚು ಲಾಭಗಳಿಸಿಕೊಳ್ಳಬಹುದು. ಈ ಹಿಂದೆ ಈ ಯೋಜನೆಯ ಹೂಡಿಕೆ ಮಿತಿ 4.5 ಲಕ್ಷ ರೂಪಾಯಿಗಳಷ್ಟು ಇತ್ತು ಈಗ ಇದನ್ನು 9 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ ಜಂಟಿ ಖಾತೆಯ ಮೇಲೆ 15 ಲಕ್ಷ ರೂಪಾಯಿಗಳವರೆಗಿನ ಹೂಡಿಕೆಗೆ (investment) ಅವಕಾಶ ಮಾಡಿಕೊಡಲಾಗಿದೆ ಎಂದು ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಹಿರಿಯ ನಾಗರಿಕರಿಗೆ ಸಿಗಲಿದೆ ಹೆಚ್ಚಿನ ಬಡ್ಡಿ
ಈ ಯೋಜನೆಗೆ ಹೆಚ್ಚಾಗಿ ಹಿರಿಯ ನಾಗರಿಕರೇ ಹೂಡಿಕೆ ಮಾಡುತ್ತಾರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 7.1% ನಷ್ಟು ಬಡ್ಡಿ ದರ ಸಿಗುತ್ತದೆ. ಪ್ರತಿ ತಿಂಗಳು ಬಡ್ಡಿ ಆದಾಯ ಪಡೆಯಬಹುದು. ತಿಂಗಳು ಸಿಗುವ ಈ ಬಡ್ಡಿ ಮೊತ್ತವನ್ನು ನೀವು ಹಿಂಪಡೆಯದೇ ಇದ್ದರೆ ಅದರ ಮೇಲೆ ಹೆಚ್ಚಿನ ಬಡ್ಡಿದರ ಸಿಗುವುದಿಲ್ಲ. ಹಾಗಾಗಿ ನೀವು 5 ವರ್ಷಗಳ ಅವಧಿ ಯೋಜನೆ ಮುಗಿದ ತಕ್ಷಣ ಪ್ರತಿ ತಿಂಗಳು ಹಣ ಹಿಂಪಡೆಯುವುದು ಸೂಕ್ತ.
ಉಳಿತಾಯ ಹೂಡಿಕೆಯ ಲೆಕ್ಕಾಚಾರ! (Calculation of investment)
ಒಂದು ಲಕ್ಷ ರೂಪಾಯಿಗಳ ಹೂಡಿಕೆ ಮೇಲೆ, ಪ್ರತಿ ತಿಂಗಳು ನಿಮಗೆ 592 ರೂಪಾಯಿ ಪಡೆಯಬಹುದು. ಹಾಗೆಯೇ 2 ಲಕ್ಷ ರೂ. ಹೂಡಿಕೆ ಮಾಡಿದ್ದೀರಿ ಎಂದು ಭಾವಿಸಿ, ಪ್ರತಿ ತಿಂಗಳು 1183 ರೂ. ಸಿಗುತ್ತದೆ. 3 ಲಕ್ಷಕ್ಕೆ ಹೂಡಿಕೆ ಮಾಡಿದ್ರೆ ಸಿಗುವ ಮೊತ್ತ 1,775 ರೂ. ಹಾಗೂ ಗರಿಷ್ಠ 15 ಲಕ್ಷ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 8,875 ರೂಪಾಯಿ ಸಿಗಲಿದೆ. ಇಂದು ಜಂಟಿ ಖಾತೆ ಹೊಂದಿರುವವರಿಗೆ ಪ್ರಯೋಜನಕಾರಿಯಾಗಿದೆ. 10 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ