ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಈ ಮೂಲಕ ಕೃಷಿಕರು ಉಚಿತ ಬೋರ್ವೆಲ್ (subsidy for borewell) ಪಡೆದುಕೊಳ್ಳಲು ಸಾಧ್ಯವಿದೆ
ರಾಜ್ಯ ಸರ್ಕಾರ (State government) ರಾಜ್ಯದಲ್ಲಿ ವಾಸಿಸುವ ಕೃಷಿಕರಿಗೆ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದ್ದು ರಾಜ್ಯ ಸರ್ಕಾರದ ವಿವಿಧ ನಿಗಮದ ಅಡಿಯಲ್ಲಿ ಕೃಷಿಕರಿಗೆ (farmers) ಅನುಕೂಲವಾಗುವಂತಹ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ.
ಈ ಲೇಖನವನ್ನು ಸಂಪೂರ್ಣ ಮಾಹಿತಿ ಓದಿ ತಿಳಿದುಕೊಂಡು ಕೂಡಲೇ ಅರ್ಜಿ ಸಲ್ಲಿಸಿ (apply soon) ಕೇವಲ ಎರಡು ದಿನಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಗಂಗಾ ಕಲ್ಯಾಣ ಯೋಜನೆ! (Ganga Kalyan Yojana)
ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ನಿಗಮಗಳಿಗೆ ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಈ ಮೂಲಕ ಕೃಷಿಕರು ಉಚಿತ ಬೋರ್ವೆಲ್ (subsidy for borewell) ಪಡೆದುಕೊಳ್ಳಲು ಸಾಧ್ಯವಿದೆ.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಎರಡು ದಿನ ಮಾತ್ರ ಬಾಕಿ!
ಫಲಾನುಭವಿ ಕೃಷಿಕರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ನವೆಂಬರ್ 30 2018 ಕೊನೆಯ ದಿನಾಂಕ ಎಂದು ಹೇಳಲಾಗಿತ್ತು ಆದರೆ ಕೃಷಿಕರ ಒತ್ತಾಯದ ಮೇರೆಗೆ ಈ ದಿನಾಂಕದ ವಿಸ್ತರಣೆ ಮಾಡಲಾಗಿದ್ದು ಡಿಸೆಂಬರ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (December 15th is last date) ವಾಗಿದೆ. ಇನ್ನು ಕೇವಲ ಎರಡು ದಿನಗಳು ಮಾತ್ರ ಕಾಲಾವಕಾಶವಿದ್ದು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾದರಿಂದ ಅರ್ಜಿ ಸಲ್ಲಿಸಿ.
ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನಗಳು!
Karnataka Ganga Kalyana Yojana
ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. 1.25 ಎಕರೆಯಿಂದ 5 ಎಕರೆಯವರೆಗೆ ಜಮೀನು ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು ಸರ್ಕಾರದ ಯಾವುದೇ ಹುದ್ದೆಗಳಲ್ಲಿ ಕೆಲಸ ಮಾಡುವವರು ಆಗಿರಬಾರದು. 18 ರಿಂದ 55 ವರ್ಷ ವಯಸ್ಸಿನ ರೈತರು ಅರ್ಜಿ ಸಲ್ಲಿಸಬಹುದು.
ಕೊಳವೆ ಬಾವಿ ಕೊರೆದು ಬೋರ್ವೆಲ್ ಮೂಲಕ ವಿದ್ಯುತ್ ಸಹಾಯದಿಂದ ಪಂಪ್ ಸೆಟ್ (pump set) ಓಡಿಸಲು ಸರ್ಕಾರದಿಂದ ಸಂಪೂರ್ಣ ಸಹಾಯಧನ (subsidy) ಸಿಗುತ್ತದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಿಗೆ ನಾಲ್ಕು ಲಕ್ಷ ರೂಪಾಯಿ ಹಾಗೂ ಇತರ ಜಿಲ್ಲೆಗಳಿಗೆ ಮೂರು ಲಕ್ಷ ರೂಪಾಯಿಗಳನ್ನು ಸರ್ಕಾರ ಸಹಾಯಧನವಾಗಿ ನೀಡುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents for apply)
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಕೃಷಿಕರು ತಮ್ಮ ಆಧಾರ್ ಸಂಖ್ಯೆ, ಪಹಣಿ ಪತ್ರ, ಭೂ ದಾಖಲೆ, ಬ್ಯಾಂಕು ಖಾತೆಯ ವಿವರ, ಪಾಸ್ ಪೋರ್ಟ್ ಅಳತೆಯ ಫೋಟೋ, ಸ್ವಯಂ ಘೋಷಣಾ ಪ್ರಮಾಣ ಪತ್ರ ಒದಗಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಪಂಪ್ ಸೆಟ್ ಪಡೆದುಕೊಳ್ಳಲು ರೈತರು https://kmdc.karnataka.gov.in/31/ganga-kalyana-schmeme/en ಲಿಂಕ್ ಮೇಲೆ ಕ್ಲಿಕ್ ಮಾಡಿ ಗಂಗಾ ಕಲ್ಯಾಣ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಅಲ್ಲಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ನಿಗಮದ ಅಡಿಯಲ್ಲಿ ಬರುವ ಸಮುದಾಯದವರು ಅರ್ಜಿ ಸಲ್ಲಿಸಬಹುದು. ಇನ್ನು ಕೇವಲ ಎರಡು ದಿನ ಮಾತ್ರ ಬಾಕಿ ಇದ್ದು ಅರ್ಹರು ತಕ್ಷಣವೇ ಅರ್ಜಿ ಸಲ್ಲಿಸಿ.