ಸರ್ಕಾರ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಶಿಕ್ಷಣವನ್ನ (primary and high school education) ಉತ್ತಮಗೊಳಿಸಲು ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಂಡಿದೆ.
ಸರ್ಕಾರ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಶಿಕ್ಷಣವನ್ನ (primary and high school education) ಉತ್ತಮಗೊಳಿಸಲು ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಅನುದಾನಿತ (government added school) ಶಾಲೆಗಳು ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಬಹಳ ಪ್ರಮುಖ ಸೌಲಭ್ಯ ವಂದನ ಪಡೆದುಕೊಳ್ಳಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಹಾಗೂ ಆಸಕ್ತಿಯಿಂದ ಶಾಲೆಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ.
ಅದರಲ್ಲೂ ವಿದ್ಯಾರ್ಥಿಗಳಿಗೆ (students) ಮೂಲಭೂತ ಸೌಲಭ್ಯಗಳು ಶಾಲೆಯಲ್ಲಿ ಸಿಕ್ಕಾಗ ಮಾತ್ರ ಅವರು ಬಹಳ ಮುತುವರ್ಜಿಯಿಂದ ವಿದ್ಯಾಭ್ಯಾಸ (Education) ಪಡೆದುಕೊಳ್ಳುತ್ತಾರೆ ಎನ್ನುವುದು ಸರ್ಕಾರದ ವಿಶ್ವಾಸ. ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಮತ್ತೊಂದು ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ.
ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳ ಒದಗಿಸುವಿಕೆ!
ಈಗಾಗಲೇ ವಿದ್ಯಾರ್ಥಿಗಳು ಹೆಚ್ಚಾಗಿ ಶಾಲೆಗೆ ಬರಬೇಕು ಎನ್ನುವ ಕಾರಣಕ್ಕೆ ಶಾಲೆಯಲ್ಲಿ ಪೌಷ್ಟಿಕ ಆಹಾರಗಳನ್ನು (nutrient food) ಕೂಡ ನೀಡಲಾಗುತ್ತಿದೆ. ಇತ್ತೀಚಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ಬಾರಿ ಮೊಟ್ಟೆ ಗಳನ್ನು ಕೂಡ ನೀಡಲಾಗುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವುದು ಸರ್ಕಾರದ ಉದ್ದೇಶವಾಗಿದೆ.
ಶಾಲೆಯಲ್ಲಿ ಅಡುಗೆಗೆ ಬಳಸುವ ನೀರು ಕೂಡ ಶುದ್ಧವಾಗಿರಬೇಕು ಅದರ ಜೊತೆಗೆ ವಿದ್ಯಾರ್ಥಿಗಳಿಗೆ ಶುದ್ಧವಾದ ಕುಡಿಯುವ ನೀರಿನ (clean water) ವ್ಯವಸ್ಥೆ ಆಗಬೇಕು. ಅದೇ ರೀತಿ ಶಾಲೆಗೆ ಸ್ವಚ್ಛತೆಯ ಕಾರಣಕ್ಕೆ ಕೂಡ ನೀರು ಬೇಕೇ ಬೇಕು ಇನ್ನು ಮಕ್ಕಳಿಗೆ ಅಗತ್ಯ ಇರುವ ನೀರು ಒದಗಿಸಲು ವಿದ್ಯುತ್ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಒಂದು ಮಹತ್ವದ ತೀರ್ಮಾನ ಕೈಗೊಂಡಿದ್ದು ಇನ್ನು ಮುಂದೆ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ನೀರು ಒದಗಿಸಲು ಸರ್ಕಾರ ಮುಂದಾಗಿದೆ.
ಮಕ್ಕಳಿಗೆ ಶುದ್ಧವಾದ ನೀರು ಸಿಗಬೇಕು ಹಾಗೂ ಶಾಲೆಗಳಲ್ಲಿ ಯಾವುದೇ ರೀತಿಯ ನೀರು ಅಥವಾ ವಿದ್ಯುತ್ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸರ್ಕಾರ ಈ ಸೌಲಭ್ಯವನ್ನು ವಿದ್ಯಾರ್ಥಿಗಳಿಗಾಗಿ ಒದಗಿಸಿ ಕೊಡಲಿದೆ.
ವಿದ್ಯಾರ್ಥಿಗಳ ಭಾರ ಇಳಿಸಿದ ಸರ್ಕಾರ!
ಕಳೆದ ನಾಲ್ಕು ತಿಂಗಳ ಹಿಂದೆ ಈ ಒಂದು ಹೊಸ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಮಕ್ಕಳು ಇನ್ಮುಂದೆ ಬೆನ್ನು ಬಾಗಿಸಿಕೊಂಡು ಭಾರವನ್ನು ಹೊರುವ ಅಗತ್ಯವಿಲ್ಲ. ಒಂದನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳ ವರೆಗೆ ಇಷ್ಟು ಕೆಜಿ ತೂಕದ ಬ್ಯಾಗ್ (Bag) ಮಾತ್ರ ಬರಬೇಕು ಅದಕ್ಕಿಂತ ಹೆಚ್ಚಿನ ಭಾರವನ್ನು ಹೊರುವಂತಿಲ್ಲ ಎಂದು ಸರ್ಕಾರ ತಿಳಿಸಿದೆ.
ಆಯಾ ತರಗತಿಗೆ ಇಷ್ಟೇ ಕೆಜಿ ತೂಕದ ಪಠ್ಯಪುಸ್ತಕಗಳನ್ನು ಬ್ಯಾಗ್ ನಲ್ಲಿ ತುಂಬಿಸಿಕೊಳ್ಳಬೇಕು ಎನ್ನುವ ಆದೇಶ ಹೊರಡಿಸಿದ್ದು ಯಾವುದೇ ಸರ್ಕಾರಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳು ಅಂತವರ ಶಾಲಾ ಪರವಾಗಿ ತೆಗೆದುಹಾಕಲಾಗುವುದು ಎಂದು ಸರ್ಕಾರ ತಿಳಿಸಿದೆ.
ಒಂದನೇ ತರಗತಿಯ ಮಕ್ಕಳು 1.5 ಕೆಜಿ ತೂಕದಷ್ಟೇ ಶಾಲೆಗೆ ತೆಗೆದುಕೊಂಡು ಹೋಗಬೇಕು. ಅದೇ ರೀತಿ 9ನೇ ಮಕ್ಕಳ ಬ್ಯಾಗ್ ತೂಕ 5 ಕೆಜಿ ಮೀರುವಂತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಒಂದಷ್ಟು ಹೆಗಲ ಭಾರ ಕಡಿಮೆಯಾಗಿದೆ ಎನ್ನಬಹುದು.