₹500 ರೂಪಾಯಿ ನೋಟುಗಳ ಬಗ್ಗೆ ಮಹತ್ವದ ಆದೇಶ; ಬಳಕೆಗೂ ಮೊದಲು ನಿಯಮ ತಿಳಿದುಕೊಳ್ಳಿ

₹500 ರೂಪಾಯಿ ನೋಟುಗಳ ಬಗ್ಗೆ ಮಹತ್ವದ ಆದೇಶ; ಬಳಕೆಗೂ ಮೊದಲು ನಿಯಮ ತಿಳಿದುಕೊಳ್ಳಿ

 ಬ್ಯಾಂಕಿಂಗ್ ಸೆಕ್ಟರ್ (banking sector) ನಲ್ಲಿ ಆರ್ ಬಿ ಐ (RBI) ಗ್ರಾಹಕರಿಗೆ ಅನುಕೂಲವಾಗುವಂತೆ ಸಾಕಷ್ಟು ಬಾರಿ ನಿಯಮಗಳನ್ನು ಬದಲಾಯಿಸುತ್ತದೆ ಅದರಲ್ಲೂ ಪ್ರತಿ ತಿಂಗಳು ಆರಂಭವಾಗುತ್ತಿದ್ದ ಹಾಗೆ ಬ್ಯಾಂಕ್ನ (Bank) ಕೆಲವು ನಿಯಮಗಳಲ್ಲಿ ಬದಲಾವಣೆ ತರಲಾಗುತ್ತದೆ.



ಬ್ಯಾಂಕಿಂಗ್ ಸೆಕ್ಟರ್ (banking sector) ನಲ್ಲಿ ಆರ್ ಬಿ ಐ (RBI) ಗ್ರಾಹಕರಿಗೆ ಅನುಕೂಲವಾಗುವಂತೆ ಸಾಕಷ್ಟು ಬಾರಿ ನಿಯಮಗಳನ್ನು ಬದಲಾಯಿಸುತ್ತದೆ ಅದರಲ್ಲೂ ಪ್ರತಿ ತಿಂಗಳು ಆರಂಭವಾಗುತ್ತಿದ್ದ ಹಾಗೆ ಬ್ಯಾಂಕ್ನ (Bank) ಕೆಲವು ನಿಯಮಗಳಲ್ಲಿ ಬದಲಾವಣೆ ತರಲಾಗುತ್ತದೆ.

ಮೊದಲೇ ಗೊತ್ತಿರುವ ಹಾಗೆ 2000 ನೋಟುಗಳನ್ನು ಕಳೆದ ತಿಂಗಳು ಅಮಾನ್ಯಗೊಳಿಸಲಾಗಿದೆ. (Note ban); ಈಗ ಅತಿ ದೊಡ್ಡ ನೋಟು ಎನಿಸಿಕೊಂಡಿರುವುದು 500 ರೂಪಾಯಿ.

ಹಾಗಾಗಿ ಇದರ ವಹಿವಾಟು ಕೂಡ ಇತ್ತೀಚಿನ ದಿನಗಳಲ್ಲಿ ಜಾಸ್ತಿ ಆಗುತ್ತಿದೆ. ಆದರೆ ದುರದೃಷ್ಟವಶಾತ್ ಒಂದು ನೋಟಿನ ಚಲಾವಣೆ ಜಾಸ್ತಿ ಆಗುತ್ತಿದ್ದ ಹಾಗೆ ಅದರಲ್ಲಿ ನಕಲಿ ನೋಟುಗಳ (fake currency) ಹಾವಳಿಯೂ ಕೂಡ ಆರಂಭವಾಗುತ್ತದೆ. ಹಾಗಾಗಿ ಇಂತಹ ನೋಟುಗಳ ಬಳಕೆಯ ಬಗ್ಗೆ ಎಚ್ಚರಿಕೆಯನ್ನುವಹಿಸಬೇಕು ಎಂಬುದಾಗಿ ಆರ್‌ಬಿಐ ತಿಳಿಸಿದೆ.

ನೋಟು ವಿಂಗಡಣೆ ಯಂತ್ರ ಪರಿಶೀಲನೆಗೆ ಆದೇಶ

ಪ್ರತಿ ನೋಟಿನ ನಿಖರತೆ ಹಾಗೂ ಅದರ ಸ್ಥಿತಿ ಪರಿಶೀಲನೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ನೋಟು ವಿಂಗಡಣೆ ಯಂತ್ರವನ್ನು ಬದಲಾಯಿಸಬೇಕು ಅಥವಾ ಪರಿಶೀಲಿಸಬೇಕು ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ ಮಾಡಿದೆ. ನೋಟುಗಳ ಸ್ಥಿತಿ ಪರಿಶೀಲನೆಗೆ ವಿವಿಧ ಮಾನದಂಡಗಳನ್ನು ಕೂಡ ಆರ್‌ಬಿಐ ಹೇಳಿದೆ. ಹಾಗೆಯೇ ಇನ್ನು ಮುಂದೆ ನೋಟುಗಳ ಪರಿಶೀಲನ ಯಂತ್ರದ ಬದಲಿಗೆ ನೋಟ್ ಫಿಟ್ ಯಂತ್ರಗಳನ್ನು ಬಳಸಲು ಆದೇಶ ಹೊರಡಿಸಿದೆ.

ಏನಿದು ನೋಟ್ ಫಿಟ್ ಯಂತ್ರ?

ಈ ಒಂದು ಯಂತ್ರದಿಂದ ಬ್ಯಾಂಕ್ ನಲ್ಲಿ ಫಿಟ್ ಹಾಗೂ ಅನ್ ಫಿಟ್ (fit and unfit currency) ನೋಟುಗಳನ್ನು ಪತ್ತೆ ಹಚ್ಚಬಹುದು. ಅಂದರೆ ಫಿಟ್ ನೋಟು ಯಾವುದು, ಅದರ ಮೌಲ್ಯ ಎಷ್ಟು ಎಂಬುದನ್ನು ತಿಳಿಯಬಹುದು, ಹಾಗೂ ಆ ನೋಟುಗಳು ಮರು ಬಳಕೆಗೆ ಉತ್ತಮವಾಗಿವೆ ಎಂಬುದನ್ನು ಈ ಯಂತ್ರಗಳ ಮೂಲಕ ಸ್ಪಷ್ಟಪಡಿಸಬಹುದು. ಇನ್ನು ಅನ್ ಫಿಟ್ ನೋಟುಗಳು ಅವುಗಳ ಬೌತಿಕ ಸ್ಥಿತಿಯಲ್ಲಿನ ಬದಲಾವಣೆಯಿಂದಾಗಿ ಮರುಬಳಕೆಗೆ ಸೂಕ್ತವಲ್ಲ ಎಂಬುದನ್ನು ತಿಳಿಯಬಹುದು.

ಆರ್ ಬಿ ಐ ಹೊರಡಿಸಿದ ಹೊಸ ಸುತ್ತೋಲೆ!

ಆರ್ ಬಿ ಐ ತಿಳಿಸಿರುವ ಮಾಹಿತಿಯ ಪ್ರಕಾರ ಪ್ರತಿ ಬ್ಯಾಂಕ್ ಗಳು (Banks) ಕೂಡ ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಬಳಿ ಇರುವ ನೋಟುಗಳ ಫಿಟ್ನೆಸ್ ವರದಿಯನ್ನು (currency fitness statement) ಸಲ್ಲಿಸಬೇಕು.

ಎಷ್ಟು ನೋಟುಗಳು ಬಳಕೆಗೆ ಅನರ್ಹವಾಗಿವೆ ಹಾಗೂ ಎಷ್ಟು ನೋಟುಗಳನ್ನು ನಿರ್ವಹಣೆಯ ನಂತರ ಮತ್ತೆ ಮರು ಬಳಕೆ ಮಾಡಬಹುದು ಎನ್ನುವ ಮಾಹಿತಿಯನ್ನು ಆರ್ ಬಿ ಐ ಗೆ ಸಲ್ಲಿಸಬೇಕು. ಇದರ ಆಧಾರದ ಮೇಲೆ ಆರ್ಬಿಐ ನೋಟುಗಳ ಮುದ್ರಣದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಿದೆ.

ಇನ್ನು 500 ರೂಪಾಯಿಗಳ ನಕಲಿ ನೋಟುಗಳು ಕೂಡ ಮಾರುಕಟ್ಟೆಯಲ್ಲಿ ಜನರ ಕೈಯಿಂದ ಕೈಗೆ ವರ್ಗಾವಣೆಯಾಗುತ್ತಿದೆ. ಹಾಗಾಗಿ ಇಂತಹ ಫೇಕ್ ನೋಟುಗಳ (fake currency) ಬಗ್ಗೆ ಎಚ್ಚರಿಕೆ ವಹಿಸಿ ಎಂದು ಆರ್ ಬಿಐ ಸಾರ್ವಜನಿಕರಿಗೆ ಮನವಿ ಮಾಡಿದೆ.

ಯಾವುದೇ ಹಂತದಲ್ಲಿ ನಿಮ್ಮ ಬಳಿ ಇರುವ ನೋಟುಗಳು ಫೇಕ್ ಎಂದು ಅನಿಸಿದರೆ ತಕ್ಷಣವೇ ಅದನ್ನ ಹತ್ತಿರದ ಬ್ಯಾಂಕ್ ಶಾಖೆಗೆ ತೆಗೆದುಕೊಂಡು ಹೋಗಿ ಪರಿಶೀಲನೆ ಮಾಡಿಕೊಳ್ಳಬಹುದು.

Post a Comment

Previous Post Next Post

Top Post Ad

CLOSE ADS
CLOSE ADS
×