ಇತ್ತೀಚಿನ ದಿನಗಳಲ್ಲಿ ಮಕ್ಕಳು ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ
ಹೊರಗಡೆ ಹೋಗಿ ಕ್ರಿಕೆಟ್, ಪುಟ್‌ಬಾಲ್ ಇನ್ನಿತರ ಆಟವಾಡಿ ದೈಹಿಕವಾಗಿ ಸದೃಢವಾಗುವ ವಯಸ್ಸು, ಅದರೆ ಇಂತಹ ದೈಹಿಕ ಶಕ್ತಿ ಹೆಚ್ಚಿಸುವ ಆಟಗಳನ್ನು ಆಡುವ ಬದಲಿಗೆ ಸ್ಮಾರ್ಟ್ ಫೋನ್ ಹಿಡಿದುಕೊಂಡು ಮಕ್ಕಳು ಆಟ ಆಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‌ಗೆ ದಾಸರಾಗುತ್ತಿದ್ದು, ನಾನಾ ಸಮಸ್ಯೆಗಳಿಂದ ಕೂಡ ಬಳಲುತ್ತಿದ್ದಾರೆ. ಸ್ಮಾರ್ಟ್ ಫೋನ್ ಜನರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಮೊಬೈಲ್ ಫೋನ್ ಇಲ್ಲದೇ ಯಾರಿಗೂ ಜೀವನವನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ.
ಗೇಮಿಂಗ್, ಆನ್ಲೈನ್ ಶಾಪಿಂಗ್, ಸೋಶಿಯಲ್ ಮೀಡಿಯಾದಿಂದ ಹಿಡಿದು ಸಿಂಪಲ್ ಲೆಕ್ಕಾಚಾರ ಹಾಕಲು ಕೂಡ ಸ್ಮಾರ್ಟ್ ಫೋನ್ ಎಲ್ಲರಿಗೂ ಅತ್ಯಗತ್ಯವಾಗಿದೆ. ಪ್ರತಿಯೊಂದಕ್ಕೂ ಸ್ಮಾರ್ಟ್ ಫೋನ್ ಮೇಲೆ ಅವಲಂಬಿತವಾಗಿರುವ ಜನರಿಗೆ ತಮಗೆ ತಾವು ಟೈಂ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಈಗ ತಾನೇ ಅಂಬೆಗಾಲಿಡುತ್ತಿರುವ ಮಕ್ಕಳು ಕೂಡ ಸ್ಮಾರ್ಟ್ ಫೋನ್ ಬಳಸುತ್ತಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸುತ್ತಿದೆ.
ಮಕ್ಕಳು ಮೊಬೈಲ್ ಮುಟ್ಟಿದರೇ ರೇಗಾಡುತ್ತಿದ್ದ ಪೋಷಕರು, ಕೋವಿಡ್ ಕಾಲದಲ್ಲಿ ತಾವೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟರು. ಆದರೆ ಈಗ ಇದರ ಪರಿಣಾಮ ಸರಿ ಹೋಗುವ ಲಕ್ಷಣ ಕಾಣಿಸುತ್ತಿಲ್ಲ. ಮಕ್ಕಳು ಮೊಬೈಲ್‌ಗೆ ಅಡಿಕ್ಟ್ ಆಗಿದ್ದು, ಮಕ್ಳಳ ಮೊಬೈಲ್ ಚಟ ಬಿಡಿಸೋದು ವೈದ್ಯರಿಗೊಂದು ಸವಾಲಾಗಿ ಪರಿಣಮಿಸಿದೆ.
ಸ್ಮಾರ್ಟ್‌ಫೋನ್ ಮಕ್ಕಳ ಮೇಲೆ ಬೀಳುತ್ತಿರುವ ಪರಿಣಾಮ ಅಷ್ಟಿಟ್ಟಲ್ಲ. ಹುಟ್ಟಿ ಕೆಲವು ತಿಂಗಳಾದ ಮಗುವಿಗೆ ಮೊಬೈಲ್ ತೋರಿಸಿದರೆ ಇಷ್ಟವಾಗುತ್ತದೆ. ಕೆಲವು ಮಕ್ಕಳಿಗೆ ವರ್ಷವೂ ತುಂಬಿರುವುದಿಲ್ಲ, ಮೊಬೈಲ್‌ನಲ್ಲಿ ಯೂಟ್ಯೂಬ್ ಐಕಾನ್ ಯಾವುದು ಎಂಬುವುದು ಕೂಡ ಗೊತ್ತಿರುತ್ತದೆ.
ಬೇರೆ ಎಲ್ಲಾ ಆಟಿಕೆಗಳಿಗಿಂತ ಮಕ್ಕಳಿಗೆ ಮೊಬೈಲ್ ಅಂದರೆ ಅದೇನೋ ಸೆಳೆತ. ಇದೆ ಕಾರಣ ಗಳಿಗೆ ಈಗ ಮಕ್ಕಲ್ಲಿ ಮೈಯೋಪಿಯ ಕಾಯಿಲೆ ಬೆಂಬಿಡದೆ ಕಾಡುತ್ತಿದ್ದು, ಮಕ್ಕಳು ದೂರ ದೃಷ್ಟಿಯನ್ನು ಕಳೆದುಕೊಂಡು ಆಡುವ ವಯಸ್ಸಿನಲ್ಲೇ ನೋಡುವ ಕಣ್ಣುಗಳಿಗೆ ಕನ್ನಡಕ ಹಾಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಮೊಬೈಲ್, ಟಿವಿ ಮಕ್ಕಳಿಗೆ ಉಪಯೋಗಿಸಲು ಬಿಡಬಾರದು ಎಂಬ ಮಾತಿಗೆ ವಿರುದ್ಧವಾಗಿ ಅವರ ಕೈಗೆ ಮೊಬೈಲ್ ಬಂತು. ಇಂತಹ ಆನ್‌ಲೈನ್ ಶಿಕ್ಷಣದಿಂದ ಮಕ್ಕಳು ಮೊಬೈಲ್ ಗೇಮ್ಸ್ ಚಟಕ್ಕೆ ಒಳಗಾಗಿದ್ದಾರೆ. ಇದರ ಜೊತೆಗೆ ಮೊಬೈಲ್ ಗೀಳಿನಿಂದ ಸೈಲೆಂಟಾಗಿ ಮಕ್ಕಳಲ್ಲಿ ಮೈಯೋಫಿಯ ಹೆಚ್ಚಾಗುತ್ತಿದೆ.
ನೂರರಲ್ಲಿ 75 ರಷ್ಟು ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಿರುವವರ ಮಕ್ಕಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಮೊಬೈಲ್ ಬಳಕೆಯಿಂದ ಕಣ್ಣಿನ ಸೆಳೆತ, ನರಗಳ ಎಳೆತ ಶುರುವಾಗುತ್ತಿದ್ದು, ಆರಂಭದಲ್ಲಿ ಚಿಕ್ಕದಾಗಿರುವ ಸಮಸ್ಯೆ ಬಗೆಹರಿಸಲಾಗದಷ್ಟು ದೊಡ್ಡದಾಗುವ ಸಾಧ್ಯತೆ ಕೂಡ ಹೆಚ್ಚಾಗಿದೆ.
ಒಟ್ಟಿನಲ್ಲಿ ಚಿಕ್ಕ ಮಕ್ಕಳ ಮೇಲೆ ಮೊಬೈಲ್ ತೀರಾ ದುಷ್ಪರಿಣಾಮ ಬೀರುತ್ತಿದೆ. ಕಣ್ಣಿನ ಮೇಲೆ ಮಾತ್ರ ಅಲ್ಲದೇ ಮಕ್ಕಳ ಮಾನಸಿಕ ಆರೋಗ್ಯ, ಶಿಕ್ಷಣದ ಮೇಲೂ ರಿಣಾಮ ಬೀರಿದ್ದು. ಮಕ್ಕಳ ಮೊಬೈಲ್ ಡಿಅಡಿಕ್ಷನ್ ಸದ್ಯ ವೈದ್ಯಕೀಯ ಲೋಕಕ್ಕೆ ಹೊಸ ಸವಾಲಾಗಿ ಪರಿಣಮಿಸುತ್ತಿದೆ.