ಪ್ರಮುಖ ಇ ಕಾಮರ್ಸ್ ವೆಬ್‌ಸೈಟ್ ಆಗಿರುವ ಫ್ಲಿಪ್‌ಕಾರ್ಟ್ ಹಬ್ಬದ ಅಂಗವಾಗಿ ಇದೀಗ ಬಿಗ್ ಬಿಲಿಯನ್ ಡೇಸ್ ಸೇಲ್ ಆಯೋಜಿಸಿ ಶಾಪಿಂಗ್ ಪ್ರಿಯರು ಹುಬ್ಬೇರಿಸುವಂತೆ ಮಾಡಿದೆ. ಈ ಮಾರಾಟದಲ್ಲಿ ಎಂಟ್ರಿ ಲೆವೆಲ್ ಮಾದರಿಯ ಮೊಬೈಲ್‌ಗಳು ಜಬರ್ದಸ್ತ್ ರಿಯಾಯಿತಿ ಪಡೆದಿದ್ದು, ಆ ಪೈಕಿ ಮೊಟೊರೊಲಾ e13 ಮೊಬೈಲ್ ಭರ್ಜರಿ ಆಫರ್ ಬೆಲೆಗೆ ಖರೀದಿಗೆ ಲಭ್ಯ ಇದೆ.
ಹೌದು, ಫ್ಲಿಪ್‌ಕಾರ್ಟ್ ತಾಣದ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಮೊಟೊರೊಲಾ e13 ಮೊಬೈಲ್ ಶೇ. 31% ರಷ್ಟು ನೇರ ಡಿಸ್ಕೌಂಟ್ ಹೊಂದಿದ್ದು, 8 GB RAM + 128 GB ವೇರಿಯಂಟ್ ಫೋನ್ 7,499ರೂ. ಗಳ ದರದಲ್ಲಿ ಲಭ್ಯ ಇದೆ. ಇದಲ್ಲದೇ ಆಯ್ದ ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ಕೊಡುಗೆ ಹಾಗೂ ಇತರೆ ಆಫರ್ ಸಹ ಲಭ್ಯ ಇವೆ.
ಇನ್ನು ಮೊಟೊ ಸಂಸ್ಥೆಯ ಈ ಫೋನ್ ಯುನಿಸಾಕ್ T606 (Unisoc T606) ಪ್ರೊಸೆಸರ್ ಪವರ್ ಆಯ್ಕೆ ಪಡೆದಿದೆ. ಹಾಗೆಯೇ ಇದು 2GB RAM + 64GB, 4GB RAM + 64GB ಮತ್ತು 8 GB RAM + 128 GB ಸ್ಟೋರೇಜ್ ಆಯ್ಕೆ ಸಹ ಪಡೆದುಕೊಂಡಿದೆ. ಹಾಗಾದರೇ ಇನ್ನುಳಿದಂತೆ ಮೊಟೊರೊಲಾ e13 ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
LCD ಡಿಸ್‌ಪ್ಲೇ ರಚನೆ ಮತ್ತು ಆಕರ್ಷಕ ವಿನ್ಯಾಸ
ಮೊಟೊ e13 ಮೊಬೈಲ್ 6.5 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, ವಾಟರ್‌ಡ್ರಾಪ್ ನಾಚ್ ವಿನ್ಯಾಸವನ್ನು ಪಡೆದಿದೆ. ಹಾಗೆಯೇ ಡಿಸ್‌ಪ್ಲೇ ಅನುಪಾತವು 20:9 ಆಗಿದೆ.
ಪ್ರೊಸೆಸರ್ ಪವರ್ ಹೀಗಿದೆ
ಮೊಟೊ e13 ಮೊಬೈಲ್ ಯುನಿಸಾಕ್ T606 (Unisoc T606) ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 2GB RAM + 64GB, 4GB RAM + 64GB ಮತ್ತು 8 GB RAM + 128 GB ಸ್ಟೋರೇಜ್ ಸಾಮರ್ಥ್ಯ ಆಯ್ಕೆಗಳನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಸಾಧ್ಯ.
ರಿಯರ್ ಸಿಂಗಲ್ ಕ್ಯಾಮೆರಾ ಆಯ್ಕೆ
ಮೊಟೊ e13 ಮೊಬೈಲ್ ಎಂಟ್ರಿ ಲೆವೆಲ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದು, ಇದರ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಇದೆ. ಈ ಮೊಬೈಲ್ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದ್ದು, ಎಲ್‌ಇಡಿ ಫ್ಲ್ಯಾಷ್ ಸೌಲಭ್ಯ ಸಹ ಹೊಂದಿದೆ. ಇದಲ್ಲದೆ ಈ ಮೊಬೈಲ್ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಮತ್ತು ಇತರೆ ಆಯ್ಕೆ ಹೀಗಿದೆ
ಮೊಟೊ ಕಂಪನಿಯ ಈ ಮೊಟೊರೊಲಾ e13 ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸೌಲಭ್ಯವನ್ನು ಕೂಡಾ ಪಡೆದಿದೆ.
ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್ 5.0, ಜಿಪಿಎಸ್, ಫೇಸ್ ಅನ್‌ಲಾಕ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್, ಡಾಲ್ಬಿ ಅಟ್ಮಾಸ್ ಬೆಂಬಲ, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಪಿ52 ಸ್ಪ್ಲಾಶ್-ರೆಸಿಸ್ಟೆಂಟ್ ಕೋಟಿಂಗ್ ಆಯ್ಕೆಗಳ ಅನ್ನು ಇದು ಪಡೆದಿದೆ. ಇದು ಗ್ರೀನ್, ಬ್ಲ್ಯಾಕ್ ಹಾಗೂ ವೈಟ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.