ಗೃಹಲಕ್ಷ್ಮಿ ಯೋಜನೆ: 4,449 ಕೋಟಿ ರೂ. ಬಿಡುಗಡೆ | Gruha Lakshmi Scheme Amount Release

Gruha Lakshmi Scheme Amount Release

ಈ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ರೂ. 2,000 ಧನಸಹಾಯ ನೀಡಲಾಗುತ್ತಿದೆ. ರಾಜ್ಯದ 1.08 ಕೋಟಿ ಮಹಿಳೆಯರಿಗೆ ಈಗಾಗಲೇ ಎರಡು ತಿಂಗಳ ಹಣ ಜಮೆಯಾಗಿದ್ದು, ಈ ಉದ್ದೇಶಕ್ಕಾಗಿ ಸರ್ಕಾರವು ರೂ. 4,449 ಕೋಟಿ ಅನುದಾನ ಬಳಕೆ ಮಾಡಿದೆ.



ಸ್ತ್ರೀಶಕ್ತಿ ಆರಾಧನೆಯ ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಮ್ಮ ಸರ್ಕಾರವು ಸ್ತ್ರೀಸಬಲೀಕರಣಕ್ಕೆ ಬದ್ಧವಾಗಿ ಶ್ರಮಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರೂ.70,427 ಕೋಟಿ ಹಣವನ್ನು ಮೀಸಲಿಟ್ಟು, ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ನವಯುಗಕ್ಕೆ ನಾಂದಿ ಹಾಡಿದ್ದೇವೆ ಎಂದು ಸಿಎಂ ಟ್ವೀಟ್‌ ಮಾಡಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯ ಮೊದಲ ತಿಂಗಳ ಹಣ ಜಮಾ ಆಗಿರುವವರಿಗೆ ಸದ್ಯದಲ್ಲೇ ನಿಮ್ಮ ಖಾತೆಗೆ ಎರಡನೇ ಕಂತಿನ ಹಣ ಜಮಾ ಆಗಬಹುದು. ಇನ್ನೂ ತಾಂತ್ರಿಕ ದೋಷದಿಂದ ಮೊದಲ ಕಂತಿನ ದುಡ್ಡು ಜಮಾ ಆಗದೆ ಇದ್ದಲ್ಲಿ ಎರಡೂ ಕಂತಿನ ಒಟ್ಟು 4 ಸಾವಿರ ರೂ. ಜಮಾ ಆಗಲಿದೆ.

Highlights

ಈವರೆಗೆ 1.16 ಕೋಟಿ ಮಹಿಳೆಯರಿಂದ ಅರ್ಜಿ ಸಲ್ಲಿಕೆ

1.08 ಕೋಟಿ ಮಹಿಳೆಯರಿಗೆ ಹಣ ಜಮೆ

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಹಾಯಧನದ ಪಾವತಿಗಾಗಿ ಒಟ್ಟು ರೂ.4,449 ಕೋಟಿ ಹಣ ಬಿಡುಗಡೆ

ಇತರೆ ಮಾಹಿತಿಗಳನ್ನು ಓದಿ

Previous Post Next Post