Karnataka Politics: ಜಾರಕಿಹೊಳಿ-ಹೆಬ್ಬಾಳ್ಕರ್ ಮುಸುಕಿನ ಗುದ್ದಾಟಕ್ಕೆ ಇದೇ ಕಾರಣ ಎಂದ ಬಿಜೆಪಿ

Sastish Jarkiholi Vs BJP: ಬೆಳಗಾವಿ (Belagavi) ಜಿಲ್ಲೆಯ ಕಲೆಕ್ಷನ್‌ನ ಪಾಲು ಹಂಚಿಕೆ ವಿಚಾರದಲ್ಲಿ ಈಗ ಸತೀಶ್‌ ಜಾರಕಿಹೋಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್‌ ನಡುವಿನ ಜಗಳ ತಾರಕಕ್ಕೇರಿದೆ.




ಸತೀಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್

ಅಧಿಕಾರಕ್ಕೋಸ್ಕರ ಮತ್ತು ರಾಜಕೀಯಕ್ಕಾಗಿ ನಾವು ಈ ಕೆಲಸ ಮಾಡುತ್ತಿಲ್ಲ; ಡಿಕೆ ಶಿವಕುಮಾರ್

ಕಸಬ್, ಅಬ್ಜಲ್ ಗುರು ಇದ್ದ ತಿಹಾರ್​​​ ಜೈಲಿನಲ್ಲಿ ಡಿಕೆಶಿ, ಪಿ. ಚಿದಂಬರಂ: ನಳೀನ್ ಕುಮಾರ್ ಕಟೀಲ್

ಸಚಿವರಾದ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ನಡುವಿನ ಶೀತಲ ಸಮರಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಪ್ರತಿಕ್ರಿಯೆ ನೀಡಿದೆ. ಸೋಶಿಯಲ್ ಮೀಡಿಯಾ ಎಕ್ಸ್​ ನಲ್ಲಿ ಟ್ವೀಟ್ ಮಾಡಿ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದೆ. ಕೈ ಪಾರ್ಟಿಯಲ್ಲಿ ಒಳಗೊಳಗೇ ನಡೆಯುತ್ತಿರುವ ಹೊಯ್‌ಕೈಗೆ ಕೊನೆಯೇ ಇಲ್ಲ. ಬೆಳಗಾವಿ (Belagavi) ಜಿಲ್ಲೆಯ ಕಲೆಕ್ಷನ್‌ನ ಪಾಲು ಹಂಚಿಕೆ ವಿಚಾರದಲ್ಲಿ ಈಗ ಸತೀಶ್‌ ಜಾರಕಿಹೋಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್‌ ನಡುವಿನ ಜಗಳ ತಾರಕಕ್ಕೇರಿದೆ. ಇಬ್ಬರ ಜಗಳದಿಂದಾಗಿ, ಹೈಕಮಾಂಡ್‌ಗೆ ತಾವು ಕಳಿಸುವ ಕಲೆಕ್ಷನ್‌ನಲ್ಲಿ ಇಳಿಕೆಯಾಗಬಹುದು ಎಂಬುದು ಡಿಕೆ ಶಿವಕುಮಾರ್ ಅವರಿಗೆ ಇರುವ ಭಯ ಎಂದು ಟ್ವೀಟ್ ಮಾಡಿದೆ.

ಹಾಗಾಗಿ ಕಲೆಕ್ಷನ್‌ನಲ್ಲಿ ಇಬ್ಬರಿಗೂ ಒಂದೊಂದು ಪಾಲು ನೀಡಿ ದೆಹಲಿಗೆ ಕಳಿಸುವ ಪಾಲಿನಲ್ಲಿ ಯಾವುದೇ ಇಳಿಕೆಯಾಗದಂತೆ ನೋಡಿಕೊಳ್ಳುವ ಪ್ರಮುಖ ಜವಾಬ್ದಾರಿ ಡಿ.ಕೆ. ಸಾಹೇಬರ ಹೆಗಲಿನಲ್ಲಿದೆ ಎಂದು ಬಿಜೆಪಿ ಹೇಳಿದೆ.

ಕುರ್ಚಿ ಮೇಲೆ ಕಲೆಕ್ಷನ್ ಮಾಸ್ಟರ್

ರಾಜ್ಯದಲ್ಲಿ ಎಟಿಎಂ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಲೆಕ್ಷನ್,‌ ಕಮಿಷನ್ ದಂಧೆ ಶಿಕ್ಷಣ ವ್ಯವಸ್ಥೆಗೂ ವಿಸ್ತರಿಸಿದೆ. ಲಂಚದ ಕಲೆಕ್ಷನ್‌ಗಾಗಿಯೇ ಸಿದ್ದರಾಮಯ್ಯ ಅವರ ಸರ್ಕಾರ ಹೊಸ ಹುದ್ದೆಗಳನ್ನು ಸೃಷ್ಟಿಸಿರುವುದೇ ಇದಕ್ಕೆ ನಿದರ್ಶನ.

ಸರ್ಕಾರದ್ದೇ ಅಂಗಸಂಸ್ಥೆಯಾದ ಚಿತ್ರಕಲಾ ಪರಿಷತ್ತಿಗೆ ಬೆಂಗಳೂರು ವಿವಿ ಪರಿಶೀಲನಾ ಸಮಿತಿ ಅಧ್ಯಕ್ಷರು ಲಂಚಕ್ಕೆ ಬೇಡಿಕೆಯಿಟ್ಟಿರುವುದು ಈ ಸರ್ಕಾರದ ಭ್ರಷ್ಟ ಬೇರುಗಳು ಎಲ್ಲೆಲ್ಲೂ ಹಬ್ಬಿರುವುದರ ಸೂಚನೆ. ಕಲೆಕ್ಷನ್ ಮಾಸ್ಟರ್‌ಗಳೇ ಕುರ್ಚಿ ಮೇಲೆ ಕೂತಿರುವಾಗ ಕಲೆಕ್ಷನ್‌ ಶಿಷ್ಯಂದಿರಿಗೆ ಕಡಿವಾಣ ಬೀಳುವುದು ಅಸಾಧ್ಯ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಡಿಕೆ ಶಿವಕುಮಾರ್ ಸ್ವಾಗತಕ್ಕೆ ಬಾರದ ಸಚಿವರು

ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನದ ನಡುವೆಯೇ ಇಂದು ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಗೆ ಆಗಮಿಸಿದ್ದಾರೆ. ಉಪ ಮುಖ್ಯಮಂತ್ರಿಗಳಿಗೂ ಜಿಲ್ಲೆಗೆ ಬಂದ್ರೂ ಅವರ ಸ್ವಾಗತಕ್ಕೆ ಗೈರಾಗುವ ಮೂಲಕ ಸತೀಶ್ ಜಾರಕಿಹೊಳಿ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರ ಹಾಕಿದ್ದಾರೆ. ಇತ್ತ ಜಿಲ್ಲೆಯ ಮತ್ತೋರ್ವ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಗೈರಾಗಿದ್ದಾರೆ.

ಡಿಕೆ ಶಿವಕುಮಾರ್ ಮಾತ್ರ ಸಚಿವರ ಗೈರನ್ನು ಸಮರ್ಥಿಸಿಕೊಂಡು ಇದು ಪೂರ್ವ ನಿಯೋಜಿತ ಕಾರ್ಯಕ್ರಮವಲ್ಲ. ನಿನ್ನೆ ರಾತ್ರಿ ಬೆಳಗಾವಿಗೆ ಬರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯ್ತು ಎಂದಿದ್ದಾರೆ.



Previous Post Next Post