ಕರ್ನಾಟಕ ರೈತರಿಗೆ ನಿರಂತರ 5 ಗಂಟೆ ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ಧ: ಇಂಧನ ಸಚಿವ | Govt Committed To Provide 5 Hours of Uninterrupted Power Supply to Farmers: Energy Minister

ಕರ್ನಾಟಕದಲ್ಲಿ ವಿದ್ಯುತ್ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ಅನಧಿಕೃತ ಲೋಡ್ ಶೆಡ್ಡಿಂಗ್ ಹೇರಲಾಗಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತ ರಾಜ್ಯ ಇಂಧನ ಸಚಿವ ಕೆಜೆ ಜಾರ್ಜ್‌ ಅವರು ರೈತರಿಗೆ 5 ಗಂಟೆಗಳ ನಿರಂತರ ವಿದ್ಯುತ್ ಸರಬರಾಜು ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.




ಮಂಗಳವಾರ ಬೆಂಗಳೂರಿನಲ್ಲಿ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ 5 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆಗೆ ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ಅವರು ವಿವರಿಸಿದರು.

5-hours-of-uninterrupted-power-supply-to-farmers

ಪ್ರಸ್ತುತದಲ್ಲಿ ರಾಜ್ಯ 1,500 MW ಕೊರತೆ ಎದುರಿಸುತ್ತಿದೆ. ರಾಜ್ಯದ ರೈತರಿಗೆ ನಮ್ಮ ಸರ್ಕಾರ ಮೂರು ಪಾಳಿಗಳಲ್ಲಿ ನಿರಂತರವಾಗಿ ಹಗಲು ಇಲ್ಲವೇ ರಾತ್ರಿ ಪಾಳಿಯಲ್ಲಿ ಐದು ಗಂಟೆಗಳ ವಿದ್ಯುತ್ ಪೂರೈಸಲು ಬದ್ಧರಾಗಿದ್ದೆವೆ. ಯಾವಾಗ ವಿದ್ಯುತ್ ಪೂರೈಕೆ ಎಂಬುದರ ಸಮಯದ ಬಗ್ಗೆ ಸುದ್ದಿ ವಾಹಿನಿ/ರೇಡಿಯೋ ಮೂಲಕ ತಿಳಿಸುತ್ತೇವೆ.

ವಿದ್ಯುತ್ ಕೊರತೆ ಇದ್ದರೂ ಸಹಿತ ಬೇಡಿಕೆ ಹೆಚ್ಚಾಗುತ್ತಿದೆ. ಈ ಸಂಬಂಧ ಅಗತ್ಯ ಪೂರೈಕೆಗಾಗಿ ನಾವು ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲಿದ್ದೇವೆ ಎಂದರು.

ನಿರಂತರ ವಿದ್ಯುತ್ ಪೂರೈಕೆ ಸಮರ್ಥ ಕ್ರಮ

ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ವ್ಯವಸ್ಥಾಪಕ ನಿರ್ದೇಶಕರ ಜತೆಗೆ ಸಚಿವರು ಪರಿಶೀಲನಾ ಸಭೆ ನಡೆಸಿದರು. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸಿಕೊಳ್ಳಲು ಸಮರ್ಥ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅವರು ಸೂಚಿಸಿದರು.

ಅಗತ್ಯ ಸೂಚನೆಯಂತೆ ತಡೆ ರಹಿತ ನಿರಂತರ 5 ಗಂಟೆಗಳ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ಮೇರೆಗೆ ಮೇಲ್ವಿಚಾರಣೆ ಮಾಡುವ ಮುಖ್ಯ ಎಂಜಿನಿಯರ್‌ಗಳಲ್ಲಿ ಜಿಲ್ಲಾವಾರು ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ.

ವಿದ್ಯುತ್ ಕೊರತೆ ನೀಗಿಸಲು ಖರೀದಿಗೆ ನಿರ್ಧಾರ

KERC ಅನುಮೋದನೆ ಪಡೆದು ಅಲ್ಪಾವಧಿ ವಿದ್ಯುತ್ ಖರೀದಿಗೆ ಕ್ರಮ ಕೈಗೊಳ್ಳಲಿದ್ದೇವೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದಕರಿಂದ ವಿದ್ಯುತ್ ಖರೀದಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಅಡಿಯಲ್ಲಿ ಮುಂದಾಗಿದ್ದು, ಈ ಮೂಲಕ ವಿದ್ಯುತ್ ಕೊರತೆಯನ್ನು ನೀಗಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಈ ಮಧ್ಯೆ ವಿದ್ಯುತ್ ಬೇಡಿಕೆ ಏರಿಕೆ ಆಗಿದೆ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ತಕ್ಕಂತೆ ಪೂರೈಸಲು ಸರ್ಕಾರವು ರಾಜ್ಯದ ಒಳಗೆ ಮತ್ತು ಹೊರಗಿನಿಂದ ವಿದ್ಯುತ್ ಖರೀದಿಸುವ ಚಿಂತನೆ ಯಲ್ಲಿದೆ. ಈ ಸಂಬಂಧ ಆದೇಶ ಹೊರಡಿಸಲಾಗಿದೆ. ಇನ್ನೂ ವಿದ್ಯುತ್ ಕೊರತೆಗೆ ಬರಗಾಲ, ಪವನ ಶಕ್ತಿಯ ಕೊರತೆ ಮತ್ತು ಮೋಡದ ಹೊದಿಕೆ ಸೇರಿದಂತೆ ನೈಸರ್ಗಿಕ ವಿಕೋಪಗಳು ಕೊರತೆಗೆ ಕಾರಣವಾಗಿವೆ ಎಂದು ಅವರು ಹೇಳಿದರು.

ವಿದ್ಯುತ್ ಕೊರತೆ ಸಮಸ್ಯೆ ನೀಗಿಸಲು ನಾವು 400 ಉಪ ಕೇಂದ್ರಗಳನ್ನು ಗುರುತಿಸಿದ್ದೇವೆ. ಈ ಪೈಕಿ 230 ಪ್ರಗತಿಯಲ್ಲಿವೆ. ಡಿಸೆಂಬರ್ 1 ರೊಳಗೆ ಕುಡಗಿಯಿಂದ ವಿದ್ಯುತ್ ಸಂಗ್ರಹಿಸಲಾಗುವುದು. ಇತರ ರಾಜ್ಯಗಳನ್ನು ಸಂಪರ್ಕಿಸಿದ್ದು, ಅಲ್ಲಿಂದಲೂ ವಿದ್ಯುತ್ ಖರೀದಿಸಲಿದ್ದೇವೆ.

ಇದೇ ವರ್ಷ 2024ರ ಏಪ್ರಿಲ್ 23ರಿಂದ ಅಕ್ಟೋಬರ್ 15ರವರೆಗೆ 1627 MU 1102 ಕೋಟಿ ಮೊತ್ತದ ವಿದ್ಯುತ್ ಅನ್ನು ಖರೀದಿಸಲಾಗಿದೆ. ಅದೇ ಅವಧಿಯಲ್ಲಿ, IEX ಮೂಲಕ ಒಟ್ಟು 636 MU ವಿದ್ಯುತ್ ಮಾರಾಟವಾಗಿದೆ. ವಿದ್ಯುತ್ ಖರೀದಿ ಮೂಲಕ ರಾಜ್ಯ ಕತ್ತಲೆಯಲ್ಲಿದೆ ಎಂಬ ತಪ್ಪು ಕಲ್ಪನೆ ಹೋಗಲಾಡಿಸಲಿದ್ದೇವೆ. ಪಾವಗಡ ಸೋಲಾರ್ ಪಾರ್ಕ್ ಅನ್ನು ಇನ್ನಷ್ಟು ವಿಸ್ತರಣೆ ಮಾಡಲಿದ್ದೇವೆ ಎಂದು ತಿಳಿಸಿದರು.

Previous Post Next Post