ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಅಲ್ಪಸಂಖ್ಯಾತ ಸಮುದಾಯದವರಿಗೆ ಇದು ಒಂದು ಸಿಹಿ ಸುದ್ದಿ ಎಂದು ಹೇಳಬಹುದಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಆಸಕ್ತಿಯನ್ನು ಹೊಂದಿರುತ್ತಾರೆ, ಆದರೆ ಅವರಿಗೆ ತರಬೇತಿಯು ಅವಶ್ಯಕವಾಗಿರುತ್ತದೆ. ಹೀಗೆ ಇಂತಹ ಸಿವಿಲ್ ಪೋಸ್ಟ್ ಗಳಾದ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಗವಹಿಸಲು ನೀವು ಪರೀಕ್ಷೆಗೆ ಪೂರ್ವ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಹಾಗಾದರೆ ಆ ಯೋಜನೆ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ :
ಐಎಎಸ್ ಕೆಎಎಸ್ ಪರೀಕ್ಷಾ ಪೂರ್ವ ತರಬೇತಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉಚಿತ ವಸತಿ ಸಹಿತ ನೀಡುವ ಯೋಜನೆಯೊಂದನ್ನು ಅಲ್ಪಸಂಖ್ಯಾತರಿಗಾಗಿ ಪ್ರಾರಂಭಿಸಿದೆ. ರಾಜ್ಯದ್ಯಂತ ಕೆಎಎಸ್ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿಗಳಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ರಾಜ್ ಭವನ ಬೆಂಗಳೂರಿನಲ್ಲಿ 2023 24ನೇ ಸಾಲಿನಲ್ಲಿ ವಸತಿ ಸಹಿತ ತರಬೇತಿಯನ್ನು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನೀಡಲಾಗುತ್ತಿದ್ದು ಸುಮಾರು 10 ತಿಂಗಳ ಅವಧಿಯನ್ನು ಈ ತರಬೇತಿಯು ಹೊಂದಿರುತ್ತದೆ. ದಿನಾಂಕ 16- 9 -2023 ಉಚಿತ ತರಬೇತಿಗಾಗಿ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ವಾಗಿದ್ದು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಉಚಿತ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಹತೆಗಳು :
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡುವ ಯೋಜನೆಗೆ ಸಂಬಂಧಿಸಿ ದಂತೆ ಕೆಲವೊಂದು ಅರ್ಹತೆಗಳನ್ನು ಹೊಂದಿದ್ದರೆ ಮಾತ್ರ ಅಭ್ಯರ್ಥಿಗಳು ಉಚಿತ ತರಬೇತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ, ಅವುಗಳೆಂದರೆ, ಮುಸ್ಲಿಂ, ಕ್ರಿಶ್ಚಿಯನ್, ಜೈನ ,ಬೌದ್ಧ , ಸಿಖ್ ಹಾಗೂ ಪಾರ್ಸಿ ಸಮುದಾಯಕ್ಕೆ ಅಭ್ಯರ್ಥಿಗಳು ಸೇರಿದವರಾಗಿರಬೇಕು. ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು ಅಭ್ಯರ್ಥಿಗಳು. ಪದವೀಧರರು ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಟ 21ರಿಂದ 35 ವರ್ಷವನ್ನು ಅಭ್ಯರ್ಥಿಯ ವಯಸ್ಸು ಮೀರಿರಬಾರದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಾಗಲೇ ಇಲಾಖೆ ಅಥವಾ ಖಾಸಗಿ ಸಂಸ್ಥೆಗಳಿಂದ ತರಬೇತಿ ಪಡೆದುಕೊಂಡು ಸ್ವಯಂ ಅಧ್ಯಯನ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಈ ಯೋಜನೆಯ ಮೂಲಕ ವಸತಿ ವ್ಯವಸ್ಥೆ ಅವಕಾಶವನ್ನು ಒದಗಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರಿಯನ್ನು ಹೊಂದಿರುವಂತಹ ಅಭ್ಯರ್ಥಿಗಳಿಗೆ ಈ ಯೋಜನೆಯ ಲಭ್ಯವಿರುವುದಿಲ್ಲ.
ಆಯ್ಕೆ ಮಾಡುವ ವಿಧಾನ :
ಕೆಇಎ ಅಥವಾ ಇಲಾಖೆ ವತಿಯಿಂದ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಸದರಿ ಅಭ್ಯರ್ಥಿಗಳಿಗೆ ನಡೆಸಿ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಂದರೆ ಮೆರಿಟ್ ಆಧಾರದ ಮೇಲೆ ಉಚಿತ ತರಬೇತಿಯನ್ನು ನೀಡಲು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರುವ ವಿಧಾನ :
ಅಲ್ಪಸಂಖ್ಯಾತ ಅಭ್ಯರ್ಥಿಗಳು ಉಚಿತ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಧಿಕೃತ ವೆಬ್ಸೈಟ್ಗಳೆಂದರೆ https://dom.karnataka.gov.in/ ಅಥವಾ http://sevasindhu.Karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
