ಗೃಹಲಕ್ಷ್ಮಿ ಹಣ ಕ್ರೆಡಿಟ್‌ ಮೆಸೇಜ್‌ ಬಂದಿದೆ! ಆದರೆ ಬ್ಯಾಂಕ್‌ ಖಾತೆಗೆ ಹಣ ಬಂದಿಲ್ವಾ? ಹಾಗಿದ್ರೆ ಏನು ಮಾಡಬೇಕು?

 ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಹಣ ಸಾಕಷ್ಟು ಜನರ ಖಾತೆಗೆ ಬಂದಿದೆ ಇನ್ನು ಸಾಕಷ್ಟು ಜನರ ಖಾತೆಗೆ ಬಂದಿಲ್ಲಾ, ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಫಲಾನುಭವಿ ಎನ್ನುವ ಮೆಸೇಜ್‌ ಬಂದಿದೆ ಆದರೆ ಹಣ ಬ್ಯಾಂಕ್‌ ಖಾತೆಗೆ ಜಮೆಯಾಗಿಲ್ಲ. ಹಣ ಬರತ್ತೊ ಇಲ್ವೋ ಎನ್ನುವ ಗೊಂದಲ ಸಾಕಷ್ಟು ಜನರಿಗೆ ಇದೆ ಯಾರಿಗೆಲ್ಲ ಈ ಗೊಂದಲವಿದಿಯೋ ಅಂಥವರು, ಮತ್ತು ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಓದಿ.



gruha lakshmi updates

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಈ ತಿಂಗಳು ನಿಮ್ಮ ಖಾತೆಗೆ 2000 ರೂ ಹಣ ಬಂತಾ? ಯಾಕೆ ಬಂದಿಲ್ಲ ಹಣ, ಕೆಲವರಿಗೆ ಬಂದಿದೆ ಆದರೆ ಬರಿ ಮೆಸೇಜ್‌ ಮಾತ್ರ ಬಂದಿದೆ, ಫಲಾನುಭವಿ ಹೆಸರಲ್ಲಿ ಆಯ್ಕೆ ಆಗಿದ್ದೀರಿ ಎಂದು ಮೆಸೇಜ್‌ ಬಂದಿದೆ ಆದರೆ ಅಕೌಂಟ್‌ಗೆ ಹಣ ಇನ್ನು ಬಂದಿಲ್ಲ ಅನ್ನುವವರ ಸಂಖ್ಯೆ ಹೆಚ್ಚಾಗಿದೆ. 

ಈ ರೀತಿ ಜನರಲ್ಲಿ ಸಾಕಷ್ಟು ಪ್ರಶ್ನೆಗಳಿವೆ, ಗೊಂದಲಗಳು ಕೂಡ ಇದೆ ಈ ವಿಷಯವಾಗಿ. ಇದು ಕಾಂಗ್ರೆಸ್‌ ಸರ್ಕಾರದ ಪ್ರಮುಖ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆ ಯಾಕೆಂದರೆ ಬಹಳ ದೊಡ್ಡದಾದಂತಹ ಯೋಜನೆ ಪ್ರತಿ ತಿಂಗಳು 1 ಕೋಟಿ 13 ಲಕ್ಷ ಇರುವಂತಹ ಫಲಾನುಭವಿಗಳಿಗೆ ಮನೆ ಒಡತಿಯರಿಗೆ ಪ್ರತಿ ತಿಂಗಳಿಗೆ 2000 ರೂ ಹಣವನ್ನು ಕೊಡಬೇಕು 2 ಸಾವಿರದ 1 ನೂರು ಕೋಟಿಯನ್ನು ಸರ್ಕಾರ ಪ್ರತಿ ತಿಂಗಳು ವಿನಿಯೋಗ ಮಾಡುತ್ತದೆ.


ಮೈಸೂರಿನಲ್ಲಿ ಉದ್ಘಾಟನೆ ಆದ ದಿನದಂದು ಸಾಕಷ್ಟು ಜನ ಮಹಿಳೆಯರಿಗೆ ಮೆಸೇಜ್‌ ಹೋಗಿದೆ. ಆ ಮೆಸೇಜ್‌ ನೋಡಿ ಬಹಳಷ್ಟು ಜನ ಹಣ ಬಂದಷ್ಟೆ ಖುಷಿ ಪಟ್ಟಿದ್ದಾರೆ. ಆದರೆ ಖಾತೆಗೆ ಹಣ ಬಂದರೆ ಮಾತ್ರ ಹಣ ಬಂದಿದೆ ಎಂದರ್ಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಲ್ಲವನ್ನು ಪರಿಶೀಲನೆ ಮಾಡಿ ಹಣವನ್ನು ಖಾತೆಗೆ ಹಾಕಲಾಗುತ್ತದೆ. Kyc Update ಆಗಿರಬೇಕು, 25000 ಜನಕ್ಕೆ ಈ ತಿಂಗಳು ಫಲಾನುಭವಿಗಳಾದರು ಈ ತಿಂಗಳು DBT ಹಣ ವರ್ಗಾವಣೆಯಾಗುವುದಿಲ್ಲ ಬರುತ್ತದೆ ಎಂದು ಆಶಾಭಾವನೆಯನ್ನು ಇಟ್ಟುಕೊಂಡಿದ್ದರು ಆದರೆ ಬರುವುದಿಲ್ಲ ಇದಕ್ಕೆ ಕಾರಣವೇನು? ಅಧಿಕಾರಿಗಳು ಹೇಳುತ್ತಿರುವುದು ಬ್ಯಾಂಕ್‌ಗೆ ಖಾತೆಗೆ ಆಧಾರ್‌ ಅಪ್ಡೇಟ್‌ ಆಗಿಲ್ಲ, ಕೆವೈಸಿ ಆಗಿಲ್ಲ 1 ಕಿಂತ ಹೆಚ್ಚು ಅಕೌಂಟ್‌ ಇದ್ದರೆ ಯಾವ ಅಕೌಂಟ್‌ಗೆ ಹಣ ಎಂದು ಸರಿಯಾದ ಮಾಹಿತಿಯನ್ನು ನೀಡಿಲ್ಲ ಇದೆಲ್ಲ ಗೊಂದಲದಿಂದಾಗಿ.

Previous Post Next Post