ಟೆಲಿಕಾಂ ಮಾರುಕಟ್ಟೆಯಲ್ಲಿ ಆಕರ್ಷಕ ಕೊಡುಗೆಗಳನ್ನು ಘೋಷಣೆ ಮಾಡುತ್ತಾ ಮುನ್ನಡೆದಿರುವ ಜಿಯೋ ಸಂಸ್ಥೆಯು ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಟೆಲಿಕಾಂ ಕಂಪನಿಯಾಗಿದೆ. ಈಗಾಗಲೇ ಅಗ್ಗದ ಬೆಲೆಯಲ್ಲಿ ಪ್ರೀಪೇಯ್ಡ್ ಡೇಟಾ ಆಫರ್ ನೀಡಿರುವ ಜಿಯೋ ಸಂಸ್ಥೆಯು ಈಗ ಪೋಸ್ಟ್‌ಪೇಯ್ಡ್ ಚಂದಾದಾರರನ್ನು ಸೆಳೆಯಲು ಭರ್ಜರಿ ಆಫರ್‌ವೊಂದನ್ನು ಘೋಷಿಸಿದೆ.
ಹೌದು, ರಿಲಯನ್ಸ್ ಜಿಯೋ ಕಂಪನಿಯು ಇದೀಗ ಹೊಸ ಜಿಯೋ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಉಚಿತ ಪ್ರಾಯೋಗಿಕ ಆಫರ್ ಅನ್ನು ಪರಿಚಯಿಸಿದೆ. ಈ ಕೊಡುಗೆಯು ನೂತನ ಜಿಯೋ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯ ಆಗಿದೆ. ಈ ಕೊಡುಗೆಯಲ್ಲಿನ ಪೋಸ್ಟ್‌ಪೇಯ್ಡ್ ವೈಯಕ್ತಿಕ ಹಾಗೂ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಗಳು ಸೇರಿವೆ
ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಮೂರು ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ಉಚಿತ ಕೊಡುಗೆಯನ್ನು ನೀಡುತ್ತಿದೆ. ಅವುಗಳು ಕ್ರಮವಾಗಿ ಜಿಯೋ 399ರೂ ಮತ್ತು ಜಿಯೋ 699ರೂ. ಈ ಎರಡು ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಯೋಜನೆಗಳಾಗಿವೆ. ಹಾಗೆಯೇ ಜಿಯೋ 599ರೂ. ವೈಯಕ್ತಿಕ ಯೋಜನೆ ಆಗಿದೆ. ಇನ್ನುಳಿದಂತೆ ಜಿಯೋ ಪೋಸ್ಟ್‌ಪೇಯ್ಡ್ ಟ್ರಯಲ್ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.
ಜಿಯೋ ಪೋಸ್ಟ್‌ಪೇಯ್ಡ್ ಟ್ರಾಯಲ್ ಆಫರ್:
ಜಿಯೋ ತನ್ನ ಮೂರು ಜನಪ್ರಿಯ ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ಉಚಿತ ಪ್ರಯೋಗವನ್ನು ಘೋಷಿಸಿದೆ. ಜಿಯೋ ನೆಟ್‌ವರ್ಕ್ ಬಯಸುವ ನೂತನ ಗ್ರಾಹಕರು ಈ ಕೊಡುಗೆಯನ್ನು ಪ್ರಯತ್ನಿಸಬಹುದು. ಗ್ರಾಹಕರು ಜಿಯೋ 399ರೂ, ಜಿಯೋ 599ರೂ ಮತ್ತು ಜಿಯೋ 699ರೂ, ಈ ಪ್ರೀಪೇಯ್ಡ್ ಯೋಜನೆಗಳಲ್ಲಿ ಒಂದನ್ನು 30 ದಿನಗಳವರೆಗೆ ಉಚಿತವಾಗಿ ಬಳಕೆ ಮಾಡಬಹುದಾಗಿದೆ.
ಆಫರ್ ನೀಡಿರುವ ಮೂರು ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಲ್ಲಿ ಎರಡು ಫ್ಯಾಮಿಲಿ ಯೋಜನೆಗಳು ಇವೆ. ಇದ್ರಲ್ಲಿ ಗ್ರಾಹಕರು ತಮ್ಮ ಪ್ಲ್ಯಾನ್‌ನಲ್ಲಿ ಕುಟುಂಬ ಸದಸ್ಯರನ್ನು ಸೇರಿಸಬಹುದು. ಇನ್ನು ಆಫರ್‌ನಡಿ ಗ್ರಾಹಕರು ಉಚಿತ ಒಂದು ತಿಂಗಳು ಕಳೆದ ನಂತರ, ಅವರು ಜಿಯೋ ಟೆಲಿಕಾಂ ನೆಟ್‌ವರ್ಕ್ ನಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧಾರ ಮಾಡಬಹುದು.
ಜಿಯೋ ಟೆಲಿಕಾಂನ 699ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಸೌಲಭ್ಯ ಹೀಗಿವೆ : ಜಿಯೋ ಟೆಲಿಕಾಂನ 699ರೂ ಯೋಜನೆಯಲ್ಲಿ ಚಂದಾದಾರರಿಗೆ 100 GB ಡೇಟಾದೊಂದಿಗೆ ಅನ್ಲಿಮಿಟೆಡ್ ವಾಯಿಸ್ ಕರೆ ಮಾಡುವ ಪ್ರಯೋಜನ ಮತ್ತು ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ದೊರೆಯಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ 3 ಆಡ್ ಆನ್ ಫ್ಯಾಮಿಲಿ ಸಿಮ್‌ಗಳ ಆಯ್ಕೆ ಇದ್ದು, ಎಲ್ಲ ಸಿಮ್‌ಗಳಿಗೆ ತಲಾ 5 GB ಡೇಟಾ ಖಚಿತ ಲಭ್ಯ.
ಇನ್ನು ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಹೆಚ್ಚುವರಿಯಾಗಿ ಓಟಿಟಿ ಸದಸ್ಯತ್ವದ ಪ್ರಯೋಜನ ಪಡೆದಿದ್ದು, ಫ್ರಿ ಅಮೆಜಾನ್ ಪ್ರೈಮ್ ಸದಸ್ಯತ್ವ ಮತ್ತು ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯುತ್ತದೆ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.
ಜಿಯೋ ಟೆಲಿಕಾಂನ 399ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಸೌಲಭ್ಯ ಹೀಗಿವೆ : ಜಿಯೋ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 75 GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ದೊರೆಯಲಿದೆ. ಇದರ ಜೊತೆಗೆ ಈ ಯೋಜನೆಯಲ್ಲಿ 3 ಆಡ್ ಆನ್ ಫ್ಯಾಮಿಲಿ ಸಿಮ್‌ಗಳ ಆಯ್ಕೆ ಸಹ ಇದ್ದು, ಪ್ರತಿ ಸಿಮ್‌ಗೆ 5 GB ಡೇಟಾ ದೊರೆಯುತ್ತದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯ.
ಜಿಯೋ ಟೆಲಿಕಾಂನ 599ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಸೌಲಭ್ಯ ಹೀಗಿವೆ : ಜಿಯೋ ಟೆಲಿಕಾಂನ 599ರೂ. ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಅನಿಯಮಿತ ಡೇಟಾ ಸಿಗಲಿದ್ದು, ಜೊತೆಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ಸಹ ಗ್ರಾಹಕರಿಗೆ ಲಭ್ಯ. ಇದರ ಜೊತೆಗೆ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.