ಗಂಡಸರಿಗೂ ₹3000 ಕೊಡಲು ಮುಂದಾದ ಸರ್ಕಾರ, ಇಂದೇ ಅರ್ಜಿ ಸಲ್ಲಿಸಿ! ಬಂಪರ್ ಸ್ಕೀಮ್ ಮಿಸ್ ಮಾಡ್ಕೋಬೇಡಿ

ಗಂಡಸರಿಗೂ ₹3000 ಕೊಡಲು ಮುಂದಾದ ಸರ್ಕಾರ, ಇಂದೇ ಅರ್ಜಿ ಸಲ್ಲಿಸಿ! ಬಂಪರ್ ಸ್ಕೀಮ್ ಮಿಸ್ ಮಾಡ್ಕೋಬೇಡಿ

 ಈಗ ಕೇಂದ್ರ ಸರ್ಕಾರ ಗಂಡಸರಿಗೆ ಹೊಸ ಯೋಜನೆ ತಂದಿದ್ದು, ಈ ಯೋಜನೆಯಲ್ಲಿ ತಿಂಗಳಿಗೆ ₹3000 ಸಿಗುತ್ತದೆ, ಈ ಯೋಜನೆಯ ಸಂಪೂರ್ಣ ಮಾಹಿತಿ ತಿಳಿಯೋಣ



ನಮ್ಮ ರಾಜ್ಯ ಸರ್ಕಾರ ಈಗ ರಾಜ್ಯದ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojane) ಮೂಲಕ ಅವರ ಬ್ಯಾಂಕ್ ಅಕೌಂಟ್ ಗೆ (Bank Account) ತಿಂಗಳಿಗೆ ₹2000 ಹಾಕುತ್ತಿದೆ ಎನ್ನುವ ವಿಷಯ ಗೊತ್ತೇ ಇದೆ. ಹೆಣ್ಣುಮಕ್ಕಳಿಗೆ ಶಕ್ತಿ ಯೋಜನೆಯನ್ನು (Shakti Yojane) ಜಾರಿಗೆ ತರಲಾಗಿದೆ.

ಹೀಗಿದ್ದಾಗ ಗಂಡಸರು ತಮಗಾಗಿ ಯಾವ ಯೋಜನೆಯು ಇಲ್ಲ ಎಂದು ಬೇಸರ ಪಟ್ಟುಕೊಂಡಿದ್ದರು. ಈಗ ಕೇಂದ್ರ ಸರ್ಕಾರ ಗಂಡಸರಿಗೆ ಹೊಸ ಯೋಜನೆ (New Scheme) ತಂದಿದ್ದು, ಈ ಯೋಜನೆಯಲ್ಲಿ ತಿಂಗಳಿಗೆ ₹3000 ಸಿಗುತ್ತದೆ. ಆದರೆ ಈ ಯೋಜನೆ ಕೆಲಸ ಮಾಡುವುದೇ ಬೇರೆ ರೀತಿ ಆಗಿದ್ದು, ಅದು ಹೇಗೆ ಎಂದು ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ..


ಇಂದು ನಿಮಗೆ ತಿಳಿಸುತ್ತಿರುವುದು ಕೇಂದ್ರ ಸರ್ಕಾರದ ಇಶ್ರಮ್ (E-Shram Card) ಯೋಜನೆಯ ಬಗ್ಗೆ. ಇದು ದೇಶದ ಕಾರ್ಮಿಕ ವರ್ಗದವರಿಗೆ ನೀಡುವ ಕಾರ್ಡ್ ಆಗಿದೆ. ಇಶ್ರಮ್ ಕಾರ್ಡ್ ಇರುವವರಿಗೆ ಕೇಂದ್ರ ಸರ್ಕಾರದ ವತಿಯಿಂದ ಹಣಕಾಸಿನ ಸಹಾಯ ಕೂಡ ಸಿಗುತ್ತದೆ.

ಈ ಕಾರ್ಡ್ ಹೊಂದಿರುವವರು ಸಾಕಷ್ಟು ರೀತಿಯಲ್ಲಿ ಕೇಂದ್ರ ಸರ್ಕಾರದಿಂದ ಹಣಕಾಸಿನ ಪ್ರಯೋಜನ ಪಡೆಯಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರ ಪಿಎಮ್ ಕಿಸಾನ್ ಯೋಜನೆಯ ಹಣವನ್ನು ಬಿಡುಗಡೆ ಮಾಡಿ, ರೈತರಿಗೆ (Farmers) ಸಹಾಯ ಮಾಡಲಾಗಿದ್ದು, ಇದೀಗ ಇಶ್ರಮ್ ಕಾರ್ಡ್ ಹೊಂದಿರುವವರಿಗು ಕೂಡ ಸಹಾಯ ಆಗುತ್ತದೆ.

ನಮ್ಮ ದೇಶದಲ್ಲಿ ಸಾಕಷ್ಟು ಮಂದಿ ಸಂಘಟಿತ ಕಾರ್ಮಿಕರು ಇದ್ದಾರೆ. ಅವರಿಗೆ ಸರಿಯಾದ ಸಂಬಳ ಸಿಗುವುದಿಲ್ಲ. ಅಂಥವರಿಗೆ ಯಾವುದೇ ಆರ್ಥಿಕವಾಗಿ ಸಪೋರ್ಟ್ ಕೂಡ ಇಲ್ಲ. ಹಾಗಾಗಿ ಅವರ ಬದುಕಿಗೆ ಭರವಸೆ ನೀಡಲು ಕೇಂದ್ರ ಸರ್ಕಾರ ಇಶ್ರಮ್ ಕಾರ್ಡ್ ಸೌಲಭ್ಯವನ್ನು ಹೊರತಂದಿತು.


ಈ ಕಾರ್ಡ್ ಇರುವವರಿಗೆ ಕೇಂದ್ರ ಸರ್ಕಾರ ಸಾಕಷ್ಟು ರೀರಿಯಲ್ಲಿ ಸಹಾಯ ಮಾಡುತ್ತಿದೆ. ಇದೀಗ ಇಶ್ರಮ್ ಕಾರ್ಡ್ ಇಂದ ಹಣಕಾಸಿನ ಸಹಾಯ ಮಾಡಲು ನಿರ್ಧರಿಸಿದ್ದು, ಇಶ್ರಮ್ ಕಾರ್ಡ್ ಇರುವವರಿಗೆ ಲೈಫ್ ಇನ್ಷುರೆನ್ಸ್ ಮಾಡಿಸಿ, ಆ ಮೂಲಕ ಆರ್ಥಿಕ ಸಹಾಯ ಮಾಡುವ ಪ್ಲಾನ್ ಹೊಂದಿದೆ.

ಇಶ್ರಮ್ ಕಾರ್ಡ್ ಇರುವವರಿಗೆ ಲೈಫ್ ಇನ್ಷುರೆನ್ಸ್ ಮಾಡಿಸಲಾಗುತ್ತಿದ್ದು, ಇದರಿಂದಾಗಿ 2 ಲಕ್ಷ ರೂಪಾಯಿಯವರೆಗು ಅವರ ಪ್ರಾಣಕ್ಕೆ ವಿಮೆ ಸಿಗುತ್ತದೆ. ಹಾಗೆಯೇ ವಯಸ್ಸಾದ ಕಾಲದಲ್ಲಿ ತಿಂಗಳಿಗೆ ₹3000 ರೂಪಾಯಿ ಪೆನ್ಶನ್ ಬರುವಂಥ ಪ್ಲಾನ್ ಆಗಿದೆ.


ಈ ಯೋಜನೆಯಲ್ಲಿ ನೀವು ಪ್ರತಿತಿಂಗಳು ಬಹಳ ಕಡಿಮೆ ಅಂದರೆ ದಿನಕ್ಕೆ ಕೇವಲ 2 ರೂಪಾಯಿ ಉಳಿತಾಯ ಮಾಡಿದರು ಸಹ, ದಿನಕ್ಕೆ 2 ರೂಪಾಯಿ ಹಾಗೆ ಉಳಿತಾಯ ಶುರು ಮಾಡಿ ತಿಂಗಳಿಗೆ 55 ರೂಪಾಯಿ ಪ್ರೀಮಿಯಂ ಕಟ್ಟುತ್ತಾ ಬಂದರೆ, ವಯಸ್ಸಾದ ಕಾಲದಲ್ಲಿ ತಿಂಗಳಿಗೆ 3000 ಪೆನ್ಶನ್ ಬರುತ್ತದೆ.

18 ವರ್ಷ ಮೇಲ್ಪಟ್ಟ ವ್ಯಕ್ತಿ ಈ ಯೋಜನೆಯನ್ನು ಶುರು ಮಾಡಬಹುದು. ಅವರ ವಾರ್ಷಿಕ ಆದಾಯ ₹36,000ಕ್ಕಿಂತ ಕಡಿಮೆ ಇರಬೇಕು. 40 ವರ್ಷ ಮೇಲ್ಪಟ್ಟ ವ್ಯಕ್ತಿ ಈ ಯೋಜನೆ ಶುರು ಮಾಡಿದರೆ, ತಿಂಗಳಿಗೆ ₹200 ರೂಪಾಯಿ ಉಳಿಸಬೇಕು

ಇಶ್ರಮ್ ಕಾರ್ಡ್ ಹೊಂದಿದ್ದು, 15 ರಿಂದ 60 ವರ್ಷಗಳ ಒಳಗಿರುವವರು ಈ ಯೋಜನೆಯ ಲಾಭ ಪಡೆಯಬಹುದು. ಇಶ್ರಮ್ ಕಾರ್ಡ್ ಅನ್ನು ಸ್ವೀಪರ್ ಗಳು, ಮನೆ ಕೆಲಸ ಮಾಡುವವರು ಹಾಗೂ ಇನ್ನಿತರ ಕಾರ್ಮಿಕರು ಪಡೆಯಬಹುದು.


ಆದರೆ ಈಗಾಗಲೇ PF ನಲ್ಲಿ ಹೂಡಿಕೆ ಮಾಡುತ್ತಿರುವವರು ಮತ್ತು ಸರ್ಕಾರದ ಬೇರೆ ಪೆನ್ಶನ್ ಪಡೆಯುತ್ತಿರುವವರಿಗೆ ಈ ಸೌಲಭ್ಯ ಸಿಗುವುದಿಲ್ಲ. ಇಶ್ರಮ್ ನ ಅಧಿಕೃತ ವೆಬ್ಸೈಟ್ eshram.gov.in ಇಲ್ಲಿಗೆ ಭೇಟಿ ನೀಡಿ, ಪೂರ್ತಿ ಮಾಹಿತಿ ಪಡೆದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Post a Comment

Previous Post Next Post
CLOSE ADS
CLOSE ADS
×