10ನೇ ತರಗತಿ ಪಾಸ್ ಆದವರಿಗೆ ಈ ಸರ್ಕಾರದಿಂದ ಸಿಗುತ್ತೆ ₹10,000 ಸ್ಕಾಲರ್ಶಿಪ್! ಇಂದೇ ಅರ್ಜಿ ಹಾಕಿ

10ನೇ ತರಗತಿ ಪಾಸ್ ಆದವರಿಗೆ ಈ ಸರ್ಕಾರದಿಂದ ಸಿಗುತ್ತೆ ₹10,000 ಸ್ಕಾಲರ್ಶಿಪ್! ಇಂದೇ ಅರ್ಜಿ ಹಾಕಿ

 ಸರ್ಕಾರ ವಿದ್ಯಾರ್ಥಿಗಳನ್ನು (Students) ಪ್ರೋತ್ಸಾಹಿಸಲು, ಕಷ್ಟದಲ್ಲಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ (Educations) ತೊಂದರೆ ಆಗದೆ ಇರಲು ಸಾಕಷ್ಟು ಯೋಜನೆಗಳನ್ನು (Schemes) ಜಾರಿಗೆ ತರುತ್ತಿದೆ. ಆ ಯೋಜನೆಗಳಿಂದ ಉತ್ತಮ ಅಂಕ ಪಡೆದ ಅಭ್ಯರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಕೊಡುವ ಮೂಲಕ ಅವರ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುಗತ್ತಿದೆ.



ಇದೀಗ ಬಿಹಾರ ಸರ್ಕಾರವು ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡುವ ಯೋಜನೆ ಪರಿಚಯಿಸಿದೆ, ಈ ಸ್ಕಾಲರ್ಶಿಪ್ (scholarship) ಪಡೆಯಲು ಯಾರಿಗೆಲ್ಲಾ ಅರ್ಹತೆ ಇದೆ, ಅರ್ಜಿ ಹಾಕುವುದು ಹೇಗೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಇದು ಮುಖ್ಯಮಂತ್ರಿ ವಿದ್ಯಾರ್ಥಿ ಉತ್ತೇಜನ ಯೋಜನೆ ಆಗಿದ್ದು, 8 ರಿಂದ 10 ಸಾವಿರದವರಿಗೂ ಸ್ಕಾಲರ್ಶಿಪ್ ಸಿಗುತ್ತದೆ..10ನೇ ತರಗತಿಯಲ್ಲಿ 60% ಗಿಂತ ಹೆಚ್ಚು ಮಾರ್ಕ್ಸ್ ತೆಗೆದಿರುವವರು ಈ ಸ್ಕಾಲರ್ಶಿಪ್ ಪಡೆಯಬಹುದು.

ಈ ಯೋಜನೆಗೆ 2,06,682 ವಿದ್ಯಾರ್ಥಿನಿಯರು, 2,73,333 ವಿದ್ಯಾರ್ಥಿಗಳು ಇದ್ದಾರೆ. ಇನ್ನು ಪಿಯುಸಿಯಲ್ಲಿ 50% ಅಥವಾ ಅದಕ್ಕಿಂತ ಜಾಸ್ತಿ ಮಾರ್ಕ್ಸ್ ಪಡೆದಿರುವ SC/ST ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗುತ್ತದೆ. ಇದರಲ್ಲಿ 2,11,623 ವಿದ್ಯಾರ್ಥಿಗಳಿದ್ದಾರೆ. ಎರಡು ಸೇರಿಸಿದರೆ, 6,86,238 ವಿದ್ಯಾರ್ಥಿಗಳು ಸಾಲಿನಲ್ಲಿದ್ದಾರೆ..


ಈ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳೇ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು, 10ನೇ ತರಗತಿಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಅದವರಿಗೆ ₹10,000 ರೂಪಾಯಿ ಸಹಾಯಧನ, ಪಿಯುಸಿಯಲ್ಲಿ ಸೆಕೆಂಡ್ ಕ್ಲಾಸ್ ನಲ್ಲಿಬ್ಆದ SC/ST ಅಭ್ಯರ್ಥಿಗಳಿಗೆ ₹8000 ಸ್ಕಾಲರ್ಶಿಪ್ ಸಿಗುತ್ತದೆ.

ಇದಷ್ಟೇ ಅಲ್ಲದೆ SC/ST ವಿದ್ಯಾರ್ಥಿನಿಯರಿಗೆ ಮತ್ತೊಂದು ಸೌಲಭ್ಯ ಇದೆ.. ಇಂಟರ್ ಮೀಡಿಯೆಟ್ ನಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆದ ವಿದ್ಯಾರ್ಥಿನಿಯರಿಗೆ ₹15,000 ಸ್ಕಾಲರ್ಶಿಪ್ ಸಿಗುತ್ತದೆ. ಈ ಬಾರಿ ಪಿಯುಸಿ ರಿಸಲ್ಟ್ಸ್ ಚೆನ್ನಾಗಿ ಬಂದಿರುವವರಿಂದ ಹೆಚ್ಚು ಜನರು ಸ್ಕಾಲರ್ಶಿಪ್ ಪಡೆಯುವ ಸಾಧ್ಯತೆ ಇದೆ.

ಈ ಸ್ಕಾಲರ್ಶಿಪ್ ಇಂದ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಆಗುತ್ತದೆ. ಹಲವು ವಿದ್ಯಾರ್ಥಿಗಳಿಗೆ ಓದಬೇಕು ಎಂದು ಆಸೆ, ಹಠ, ಛಲ ಇರುತ್ತದೆ ಆದರೆ ಆರ್ಥಿಕ ಸಮಸ್ಯೆಗಳಿಂದ, ಬಡತನದಿಂದ ಓದಲು ಸಾಧ್ಯ ಆಗದೆ ಇರುವವರಿಗೆ ಈ ರೀತಿ ಸಹಾಯ ಧನ ಕೊಟ್ಟರೆ, ಅವರ ಬದುಕಿಗೆ ಸಹಾಯ ಆಗುತ್ತದೆ..

ಈ ರೀತಿಯ ಯೋಜನೆ ಜಾರಿಗೆ ಬಂದಿರುವುದು ಬಿಹಾರ ನಲ್ಲಿ. ಈ ವರ್ಷ ಬಿಹಾರ ನಲ್ಲಿ 13 ಲಕ್ಷ ವಿದ್ಯಾರ್ಥಿಗಳು ಪಿಯುಸಿ ಪಾಸ್ ಆಗಿದ್ದಾರೆ. ಹಾಗಾಗಿ ಹೆಚ್ಚು ಜನರು ಈ ಸೌಲಬ್ಯ ಪಡೆಯಬಹುದು. ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಲು ಬೇಕಾಗುವ ದಾಖಲೆಗಳು ಹೀಗಿದೆ


*ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್

*IFSC ಕೋಡ್

*ಮೊಬೈಲ್ ನಂಬರ್

*ಆಧಾರ್ ಕಾರ್ಡ್ ನಂಬರ್

*ಇಮೇಲ್ ಐಡಿ ಹಾಗೂ ಇನ್ನಿತರ ದಾಖಲೆಗಳು ಬೇಕಾಗುತ್ತದೆ..

ಅರ್ಜಿ ಸಲ್ಲಿಕೆ ವೇಳೆ ನೆನಪಿಡಬೇಕಾದ ವಿಚಾರಗಳು..

*ಅರ್ಜಿ ಸಲ್ಲಿಸುವುದು ಅಧಿಕೃತ ಪೋರ್ಟಲ್ ಮೂಲಕ ಮಾತ್ರ.

*ವಿದ್ಯಾರ್ಥಿಯ ಹೆಸರು, ತಂದೆ ತಾಯಿ ಹೆಸರು, ಬ್ಯಾಂಕ್ ಅಕೌಂಟ್ ಡೀಟೇಲ್ಸ್, IFSC ಕೋರ್, ಆಧಾರ್ ನಂಬರ್, ಮೊಬೈಲ್ ನಂಬರ್, ಇಮೇಲ್ ಐಡಿ ಇದೆಲ್ಲವೂ ಬೇಕಾಗಿರುವ ದಾಖಲೆ ಆಗಿದೆ.

ಅಪ್ಲಿಕೇಶನ್ ಸಲ್ಲಿಸಿದ ನಂತರ ನಿಮಗೆ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬರುತ್ತದೆ. ಇದನ್ನು ಶೇರ್ ಮಾಡಬಾರದು. ಬ್ಯಾಂಕ್ ಅಕೌಂಟ್ ವಿದ್ಯಾರ್ಥಿಯ ಹೆಸರಲ್ಲೇ ಇರಬೇಕು.


ಸೂಚನೆ: ಈ ಯೋಜನೆ ಈಗ ಬಿಹಾರ ರಾಜ್ಯದಲ್ಲಿ (Bihar Government) ಜಾರಿಗೆ ಬಂದಿದ್ದು, ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಕೂಡ ಈ ಯೋಜನೆ ತರುವ ನಿರೀಕ್ಷೆ ಇದೆ. ಆದ್ದರಿಂದ ಗೊಂದಲಗೊಳ್ಳಬೇಡಿ.

Post a Comment

Previous Post Next Post
CLOSE ADS
CLOSE ADS
×