IBPS PO Recruitment 2023: ಐಬಿಪಿಎಸ್ ಪಿಒ ಎಂಟಿ ಹುದ್ದೆಗಳ ನೇಮಕಾತಿಗೆ ನಡೆಸುವ ಪರೀಕ್ಷೆ ಅಧಿಸೂಚನೆಯನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪದವಿ ಪಾಸ್ ವಿದ್ಯಾರ್ಹತೆ.
ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು 2024-25 ನೇ ಸಾಲಿಗೆ ವಿವಿಧ ಬ್ಯಾಂಕ್‌ಗಳಲ್ಲಿ ನೇಮಕಾತಿ ಮಾಡಬೇಕಾದ ಸಂಭಾವ್ಯ 3049 ಪ್ರೊಬೇಷನರಿ ಆಫೀಸರ್ ಹಾಗೂ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ಇದೀಗ ಪರೀಕ್ಷೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸದರಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮುಂದಿನ ಸೆಪ್ಟೆಂಬರ್ ಹಾಗೂ ಅಕ್ಟೋಬರ್ 2023 ಮತ್ತು ನವೆಂಬರ್ 2023 ರಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರೊಬೇಷನರಿ ಆಫೀಸರ್ ಹಾಗೂ ಮ್ಯಾನೇಜ್ಮೆಂಟ್ ಟ್ರೈನಿ ಪೋಸ್ಟ್‌ಗಳಲ್ಲಿ ಆಸಕ್ತಿ ಇರುವವರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ನೇಮಕಾತಿ ಪ್ರಾಧಿಕಾರ : ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ
ಹುದ್ದೆಗಳ ಹೆಸರು : ಪ್ರೊಬೇಷನರಿ ಆಫೀಸರ್ ಹಾಗೂ ಮ್ಯಾನೇಜ್ಮೆಂಟ್ ಟ್ರೈನಿ
ಹುದ್ದೆಗಳ ಸಂಖ್ಯೆ : 3049
ವಿದ್ಯಾರ್ಹತೆ : ಯಾವುದೇ ಪದವಿ ಪಾಸ್
ವಯೋಮಿತಿ ಅರ್ಹತೆಗಳು (ದಿನಾಂಕ 01-08-2023 ಕ್ಕೆ)
ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದ್ದು, ವರ್ಗಾವಾರು ಈ ಕೆಳಗಿನಂತೆ ಚೆಕ್ ಮಾಡಿಕೊಳ್ಳಿ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ.
ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ.
IBPS PO/MT Exam 2023 : ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-08-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 21-08-2023
ಆನ್‌ಲೈನ್ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ : 21-08-2023
ಪರೀಕ್ಷೆ ಪೂರ್ವಭಾವಿ ತರಬೇತಿಗೆ ಪ್ರವೇಶ ಪತ್ರ ಬಿಡುಗಡೆ: ಸೆಪ್ಟೆಂಬರ್ 2023
ಪರೀಕ್ಷೆ ಪೂರ್ವ ತರಬೇತಿ ನಡೆಸುವ ಅವಧಿ : ಸೆಪ್ಟೆಂಬರ್ 2023
ಪೂರ್ವ ಭಾವಿ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ : ಸೆಪ್ಟೆಂಬರ್ 2023
ಪ್ರಿಲಿಮ್ಸ್ ಆನ್‌ಲೈನ್ ಪರೀಕ್ಷೆ ದಿನಾಂಕ : ಸೆಪ್ಟೆಂಬರ್ / ಅಕ್ಟೋಬರ್ 2023
ಆನ್‌ಲೈನ್ ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶ ದಿನಾಂಕ: ಅಕ್ಟೋಬರ್ 2023
ಪಿಒ / ಎಂಟಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ
ಪಿಒ/ಎಂಟಿ ಆನ್‌ಲೈನ್ ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ : ಅಕ್ಟೋಬರ್ /ನವೆಂಬರ್ 2023
ಆನ್‌ಲೈನ್ ಮುಖ್ಯ ಪರೀಕ್ಷೆ ದಿನಾಂಕ : ನವೆಂಬರ್ 2023
ಮುಖ್ಯ ಪರೀಕ್ಷೆ ಫಲಿತಾಂಶ ದಿನಾಂಕ: ಡಿಸೆಂಬರ್ 2023
ಸಂದರ್ಶನಕ್ಕೆ ಪ್ರವೇಶ ಪತ್ರ ಬಿಡುಗಡೆ ದಿನಾಂಕ: ಜನವರಿ / ಫೆಬ್ರುವರಿ 2024
ಸಂದರ್ಶನ ನಡೆಸುವ ದಿನಾಂಕ: ಜನವರಿ / ಫೆಬ್ರುವರಿ 2024
ಪ್ರಾವಿಷನಲ್ ಅಲಾಟ್ಮೆಂಟ್ : ಏಪ್ರಿಲ್ 2024
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಲಿಂಕ್ ಕೆಳಗಿನಂತಿದೆ.
IBPS PO/MT Exam 2023 - Apply Online
ಅರ್ಜಿ ಶುಲ್ಕ ವಿವರ
ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ ರೂ.850.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.850.
SC / ST / PWD ಅಭ್ಯರ್ಥಿಗಳಿಗೆ ರೂ.175.
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಕ್ಯಾಶ್ ಕಾರ್ಡ್ ಇತರೆ ಮಾರ್ಗಗಳಲ್ಲಿ ಪಾವತಿಸಬಹುದು
ಐಬಿಪಿಎಸ್ ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್ ಟ್ರೈನಿ ಪೋಸ್ಟ್‌ಗಳಿಗೆ ಅಭ್ಯರ್ಥಿಗಳ ಆಯ್ಕೆಯ ಪರೀಕ್ಷೆ ವಿಧಾನ ಕೆಳಗಿನಂತಿರುತ್ತದೆ.
ಪರೀಕ್ಷೆ ವಿಧಾನ
ಐಬಿಪಿಎಸ್ ಪಿಒ / ಎಂಟಿ ಹುದ್ದೆಗಳಿಗೆ ಈ ಕೆಳಗಿನ ಮಾದರಿಯ ಮೂರು ಹಂತದ ಪರೀಕ್ಷೆ ನಡೆಸಲಾಗುತ್ತದೆ.
ಆನ್‌ಲೈನ್ ಪ್ರಿಲಿಮಿನರಿ ಪರೀಕ್ಷೆ - ಟೈಯರ್ -1
ಆನ್‌ಲೈನ್ ಮೇನ್ಸ್ ಪರೀಕ್ಷೆ - ಟೈಯರ್ - 2
ಸಂದರ್ಶನ ಪರೀಕ್ಷೆ (ಆಯಾ ಬ್ಯಾಂಕ್‌ಗಳಲ್ಲಿ ಅಥವಾ ನೋಡಲ್ ಕೇಂದ್ರಗಳಲ್ಲಿ)
ಪರೀಕ್ಷೆ ಭಾಷೆ
ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕ ಅಭ್ಯರ್ಥಿಗಳು ಕನ್ನಡ, ಕೊಂಕಣಿ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಯಾವುದಾದರೂ ಒಂದರಲ್ಲಿ ಪರೀಕ್ಷೆ ಬರೆಯಬಹುದು. ಅರ್ಜಿ ಸಲ್ಲಿಸುವಾಗಲೇ ಪರೀಕ್ಷೆ ಭಾಷೆ ಆಯ್ಕೆ ಮಾಡಿಕೊಳ್ಳಬೇಕು