Tirumala: ತಿಮ್ಮಪ್ಪನ ಭಕ್ತರಿಗೆ ಟಿಟಿಡಿಯಿಂದ ಗುಡ್​ನ್ಯೂಸ್! ಇನ್ಮುಂದೆ ಈ ದರ್ಶನಕ್ಕೆ ಕ್ಯೂ ನಿಲ್ಲುವ ಅಗತ್ಯವಿಲ್ಲ

Tirumala: ತಿಮ್ಮಪ್ಪನ ಭಕ್ತರಿಗೆ ಟಿಟಿಡಿಯಿಂದ ಗುಡ್​ನ್ಯೂಸ್! ಇನ್ಮುಂದೆ ಈ ದರ್ಶನಕ್ಕೆ ಕ್ಯೂ ನಿಲ್ಲುವ ಅಗತ್ಯವಿಲ್ಲ

 ತಿರುಮಲ (Tirumala) ವೆಂಕಟರಮಣ ಸ್ವಾಮಿ ದರ್ಶನಕ್ಕಾಗಿ ಟಿಟಿಡಿ ಮಂಡಳಿ ಭಕ್ತರಿಗೆ ವಿವಿಧ ಮಾರ್ಗಗಳನ್ನು ಒದಗಿಸುತ್ತದೆ. ಇವುಗಳಲ್ಲಿ ಸರ್ವದರ್ಶನ, ವಿಶೇಷ ಪ್ರವೇಶ ದರ್ಶನ, ವರ್ಚುವಲ್ ಸೇವಾ ದರ್ಶನ, ಆರ್ಜಿತ ಸೇವಾ ದರ್ಶನ, ವಿಐಪಿ ಬ್ರೇಕ್ ದರ್ಶನಗಳು ಸೇರಿವೆ.



ತಿರುಮಲ (Tirumala) ವೆಂಕಟರಮಣ ಸ್ವಾಮಿ ದರ್ಶನಕ್ಕಾಗಿ ಟಿಟಿಡಿ ಮಂಡಳಿ ಭಕ್ತರಿಗೆ ವಿವಿಧ ಮಾರ್ಗಗಳನ್ನು ಒದಗಿಸುತ್ತದೆ. ಇವುಗಳಲ್ಲಿ ಸರ್ವದರ್ಶನ, ವಿಶೇಷ ಪ್ರವೇಶ ದರ್ಶನ, ವರ್ಚುವಲ್ ಸೇವಾ ದರ್ಶನ, ಆರ್ಜಿತ ಸೇವಾ ದರ್ಶನ, ವಿಐಪಿ ಬ್ರೇಕ್ ದರ್ಶನಗಳು ಸೇರಿವೆ

ಸಾಮಾನ್ಯ ಭಕ್ತರಿಗೂ ತಿಮ್ಮಪ್ಪನ ಆರ್ಜಿತ ಸೇವಾ ಭಾಗ್ಯ ಕಲ್ಪಿಸಲು ಲಕ್ಕಿ ಡಿಪ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇತ್ತೀಚೆಗೆ, ಲಕ್ಕಿಡಿಪ್ ಮೂಲಕ ಸೇವಾ ಟಿಕೆಟ್ ಪಡೆಯುವ ವಿಧಾನದಲ್ಲಿ ಟಿಟಿಡಿ ಸ್ವಲ್ಪ ಬದಲಾವಣೆಗಳನ್ನು ಮಾಡಿದೆ. ವಿಐಪಿ ಬ್ರೇಕ್ ದರ್ಶನದಲ್ಲೂ ಬದಲಾವಣೆ ಮಾಡಿದೆ.

ತಿರುಮಲದಲ್ಲಿ ಆಫ್‌ಲೈನ್ ವಿಧಾನದಲ್ಲಿ ಬಾಲಾಜಿ ಆರ್ಜಿತ ಸೇವೆಗಳು, ಬ್ರೇಕ್ ದರ್ಶನಕ್ಕೆ ಬರುವ ಭಕ್ತರಿಗೆ ಸೇವಾ ಟಿಕೆಟ್ ಪಡೆಯುವುದನ್ನ ಮತ್ತಷ್ಟು ಸುಲಭ ಮಾಡುವುದಕ್ಕೆ ತಿರುಮಲದಲ್ಲಿ TTD ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ.

"ಪೇ ಲಿಂಕ್" SMS ಮೂಲಕ, ಭಕ್ತರು ಕೌಂಟರ್‌ಗಳಿಗೆ ಹೋಗದೆ ಆನ್‌ಲೈನ್‌ನಲ್ಲಿ ಪಾವತಿಸಿ ಸೇವಾ ಟಿಕೆಟ್‌ಗಳನ್ನು ಪ್ರಿಂಟ್​ ತೆಗೆದುಕೊಳ್ಳಬಹುದು

ಸಿಆರ್‌ಒನಲ್ಲಿ ಲಕ್ಕಿಡಿಪ್ ಮೂಲಕ ಅರ್ಜಿತ ಸೇವಾ ಟಿಕೆಟ್‌ಗಳನ್ನು ಭಕ್ತರಿಗೆ ಹಂಚಿಕೆ ಮಾಡಲಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಈ ವ್ಯವಸ್ಥೆಯಲ್ಲಿ ಟಿಕೆಟ್ ಪಡೆದ ಭಕ್ತರು ಕೌಂಟರ್​ಗೆ ಬಂದು ಹಣ ಪಾವತಿಸಿ ಟಿಕೆಟ್ ಪಡೆಯಬೇಕಿತ್ತು. ಹೊಸ ವ್ಯವಸ್ಥೆಯಲ್ಲಿ, ಪೇ ಲಿಂಕ್ ಅನ್ನು SMS ಮೂಲಕ ಕಳುಹಿಸಲಾಗುತ್ತದೆ.

ಭಕ್ತರು ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು UPI ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು ಮತ್ತು ಸೇವಾ ಟಿಕೆಟ್‌ಗಳ ಪ್ರಿಂಟ್ ತೆಗೆದುಕೊಳ್ಳಬಹುದು. ಈ ಹೊಸ ವ್ಯವಸ್ಥೆಯನ್ನು ಪ್ರಸ್ತುತ CRO ನಲ್ಲಿರುವ ಲಕ್ಕಿಡಿಪ್ ಕೌಂಟರ್‌ಗಳಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.

ಶೀಘ್ರದಲ್ಲೇ ಈ ವ್ಯವಸ್ಥೆಯನ್ನು MBC-34 ಕೌಂಟರ್‌ನಲ್ಲಿ ವಿವೇಚನಾ ಕೋಟಾದಲ್ಲಿ ಸೇವಾ ಟಿಕೆಟ್‌ಗಳು ಮತ್ತು ಬ್ರೇಕ್ ದರ್ಶನ ಟಿಕೆಟ್‌ಗಳಿಗೂ ಕೂಡ ಜಾರಿ ತರಲಾಗುವುದು. ಹೊಸ ವ್ಯವಸ್ಥೆಯಿಂದ ಅರ್ಜಿತ ಸೇವೆ ಹಾಗೂ ಬ್ರೇಕ್ ದರ್ಶನ ಟಿಕೆಟ್ ಪಡೆಯುವ ಭಕ್ತರಿಗೆ ತೊಂದರೆಯಾಗುವುದಿಲ್ಲ


Post a Comment

Previous Post Next Post
CLOSE ADS
CLOSE ADS
×