ಗೃಹಲಕ್ಷ್ಮಿ ನೋಂದಣಿಗೂ ಆರಂಭದಲ್ಲೇ ವಿಘ್ನ- ಅರ್ಜಿ ಸಲ್ಲಿಕೆಗೆ ಸರ್ವರ್ ಪ್ರಾಬ್ಲಂ

ಗೃಹಲಕ್ಷ್ಮಿ ನೋಂದಣಿಗೂ ಆರಂಭದಲ್ಲೇ ವಿಘ್ನ- ಅರ್ಜಿ ಸಲ್ಲಿಕೆಗೆ ಸರ್ವರ್ ಪ್ರಾಬ್ಲಂ

 ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Govt) ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಆರಂಭದಲ್ಲೇ ಸರ್ವರ್ ಸಮಸ್ಯೆ (Server Problem) ವಿಘ್ನ ತಂದೊಡ್ಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತಾಂತ್ರಿಕ ಸಮಸ್ಯೆ ಕಾಡಿದೆ. ಗೃಹಲಕ್ಷ್ಮಿಗೆ ನೋಂದಣಿ ಮಾಡಿಕೊಳ್ಳಲು ಮುಂದಾದ ಮಹಿಳೆಯರು ಸರ್ವರ್ ಸಮಸ್ಯೆಯಿಂದ ಪರದಾಡಿದ್ದಾರೆ.



ಹೌದು, ಮೊನ್ನೆ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಗುರುವಾರ ಅರ್ಜಿ ಸಲ್ಲಿಕೆ ಆರಂಭ ಆಗಿದ್ದು, ಆರಂಭದಲ್ಲೇ ಸರ್ವರ್ ಸಮಸ್ಯೆ ಎದುರಾಗಿದೆ. ಜೊತೆಗೆ ಪಡಿತರ ಚೀಟಿಗೆ ನೀಡಿರುವ ಮೊಬೈಲ್ ಸಂಖ್ಯೆಗೆ (Mobile nUmber) ನೋಂದಣಿಯ ದಿನಾಂಕ ಸ್ಥಳದ ಸಂದೇಶ ಬರುತ್ತೆ. ಸಂದೇಶ ಬರದಿದ್ದರು, ಜನ ಬೆಂಗಳೂರು ಒನ್ ಕೇಂದ್ರಗಳಿಗೆ ಬಂದು ಪರದಾಡಿದ ಸ್ಥಿತಿ ಕಂಡುಬಂತು.

ಬೆಂಗಳೂರು (Bengaluru) ಅಷ್ಟೇ ಅಲ್ಲ, ದಾವಣಗೆರೆ, ಚಿಕ್ಕೋಡಿ, ಮಡಿಕೇರಿ, ರಾಮನಗರ, ಚಿಕ್ಕಬಳ್ಳಾಪುರ ಸೇರಿ ಹಲವು ಜಿಲ್ಲೆಗಳಲ್ಲಿ ನೋಂದಣಿ ಮಾಡಿಸಲು ಮಹಿಳೆಯರು ಪರದಾಡಿದ್ದಾರೆ. ಗ್ರಾಮ ಒನ್, ಕರ್ನಾಟಕ ಒನ್, ಸ್ಥಳೀಯ ಸಂಸ್ಥೆಗಳ ಬಳಿ ಬೆಳಗ್ಗೆಯಿಂದ ಸರತಿ ಸಾಲಲ್ಲಿ ನಿಂತಿದ್ದವರು ಸರ್ವರ್ ಪ್ರಾಬ್ಲಂನಿಂದ ನಿರಾಸೆಗೊಂಡ್ರು. ಬಳಿಕ ಮನೆಗೆ ವಾಪಸ್ ಆದರು.

ಗೃಹಲಕ್ಷಿ ನೋಂದಣಿಗೆ ಇಲಾಖೆಯಿಂದ ಮೆಸೇಜ್ ಬರಬೇಕು. ಆದರೆ ಯಾವಾಗ ಬರುತ್ತೆ ಅನ್ನೋದು ಗೊತ್ತಾಗದೇ ಬಹುತೇಕರು ಮಹಿಳೆಯರು ತಲೆಕೆಡಿಸಿಕೊಂಡಿದ್ದಾರೆ. ನಾಳೆಯಾದ್ರೂ ಈ ಎಲ್ಲಾ ಸಮಸ್ಯೆ ಕ್ಲಿಯರ್ ಆಗುತ್ತಾ ಅಥವಾ ಇದೇ ಥರ ಪರದಾಡಬೇಕಾಗುತ್ತಾ ಕಾದು ನೋಡಬೇಕಿದೆ.


Post a Comment

Previous Post Next Post
CLOSE ADS
CLOSE ADS
×