Ration: ಆಗಸ್ಟ್ 1 ರಿಂದ ಇಂತಹವರ ರೇಷನ್ ಬಂದ್! ಕೊನೆ ಕ್ಷಣದಲ್ಲಿ ನಿರ್ಧಾರ ಪ್ರಕಟ

Ration: ಆಗಸ್ಟ್ 1 ರಿಂದ ಇಂತಹವರ ರೇಷನ್ ಬಂದ್! ಕೊನೆ ಕ್ಷಣದಲ್ಲಿ ನಿರ್ಧಾರ ಪ್ರಕಟ

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರಕಾರವು ಈಗಾಗಲೇ ರಾಜ್ಯದ ಪಡಿತರರಿಗೆ 10kg ಅಕ್ಕಿ ಭಾಗ್ಯ ವಿತರಣೆಯ ಬಗ್ಗೆ ಮಾತನಾಡಿದ್ದು ಈ ಮೂಲಕ ಕೇಂದ್ರ ಸರಕಾರದ ಸಹಕಾರ ಕೊರತೆ ಬೇಕಾದ ಪ್ರಮಾಣದಲ್ಲಿ ಅಕ್ಕಿ ಸೌಲಭ್ಯ ಇಲ್ಲದಿರುವ ಕಾರಣಕ್ಕೆ ಅನ್ನಭಾಗ್ಯ ಯೋಜನೆ (Anna Bhagya Yojana) ಯಲ್ಲಿ ಅಕ್ಕಿಗೆ ಪರ್ಯಾಯವಾಗಿ ಐದು ಕೆ.ಜಿ ಯಷ್ಟು ಅಕ್ಕಿಯ ಬದಲಿಗೆ ಕೆಜಿಗೆ 34 ರೂ. ನಂತೆ 170 ರೂ. ನೀಡಲು ಸರಕಾರ ಮುಂದಾಗಿದೆ.



ಈ ಮೂಲಕ ಪಡಿತರ ಚೀಟಿಯ (Ration Card) ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ (BPL Card) ಗಳ ಕುಟುಂಬದ ಮುಖ್ಯಸ್ಥರಿಗೆ ಈ ಸೌಲಭ್ಯ ಒದಗಿಸಲಾಗುತ್ತಿದ್ದು ಕುಟುಂಬದ ಎಲ್ಲ ಸದಸ್ಯರ ತಲಾ 5kg ಅಕ್ಕಿಯ ಹಣ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮಾವಣೆಯಾಗಲಿದೆ. ಆದರೆ ಈಗ ಎಲ್ಲ ಕುಟುಂಬಕ್ಕೂ ಈ ಹಣ ಬರದಿರುವ ಸಾಧ್ಯತೆ ಇದ್ದು ಈ ಬಗ್ಗೆ ಸರಕಾರ ಸ್ಪಷ್ಟನೆ ನೀಡಿದೆ.

ನಿಯಮ ಇದೆ:

ಅಂತ್ಯೋದಯ ಕಾರ್ಡ್ (Antyodaya Card) ಬಳಕೆದಾರರು ಇದ್ದಲ್ಲಿ ಈ ಅನ್ನಭಾಗ್ಯ ಧನಸಹಾಯವು ಆ ಕಾರ್ಡ್ ಇರುವವರು ಕನಿಷ್ಠ ಮೂರು ಮಂದಿಯಾದರೂ ಇರಬೇಕು ಇಲ್ಲವಾದರೆ ಅಂತವರಿಗೆ ಧನಲಾಭ ಇರಲಾದರು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಇರುವ ಅಂತ್ಯೋದಯ ಕಾರ್ಡ್ ದಾರರಲ್ಲಿ ಕುಟುಂಬದ ಹಿರಿಯರ ಕಾರ್ಡ್ ಗೆ ಬ್ಯಾಂಕ್ ಲಿಂಕ್ ಇರುವ ಆಧಾರ್ ನಂಬರ್ ರೇಶನ್ ಕಾರ್ಡ್ ಜೊತೆ ಜೋಡಣೆ ಉಳ್ಳವರಿಗೆ ಈ ಒಂದು ಯೋಜನೆಯ ಲಾಭ ಸಿಗಲಿದೆ. ಅದೇ ರೀತಿ ನೀವು ಕನಿಷ್ಟ ಮೂರು ತಿಂಗಳಾದರೂ ಈ ರೇಶನ್ ಕಾರ್ಡಿನಿಂದ ಆಹಾರ ಧಾನ್ಯ ಪಡೆದಿರಬೇಕು ಕಳೆದ ಮೂರು ತಿಂಗಳಿಂದ ಆಹಾರ ಧಾನ್ಯ ಪಡೆಯದೇ ಈ ಬಾರಿ ಪಡೆಯಲು ಬಂದರೂ ಹಣ ಕಾಸಿನ ಸೌಲಭ್ಯ ಇರಲಾರದು.


ಅದೇ ರೀತಿ ನಿಮ್ಮ ಆಧಾರ್ ಕಾರ್ಡ್ (Aadhaar Card) ತಪ್ಪಾಗಿ ನಮೂದಿಸಿರುವ ಅಥವಾ ಲಿಂಕ್ ಆಗದಿರುವುದು ಇತರ ಸಮಸ್ಯೆ ಇದ್ದರೂ ಕೂಡ , ಆಧಾರ್ ಸಂಖ್ಯೆ ತಪ್ಪಾಗಿದ್ದು ಕಂಡುಬಂದರೂ ಈಗಲೇ ಆ ಸಮಸ್ಯೆ ಬಗೆಹರಿಸಿಕೊಳ್ಳಿ ಯಾಕೆಂದರೆ ಮುಂದೆ ಬಗೆಹರಿಸುತ್ತೇನೆಂದರೂ ಈ ಸಮಸ್ಯೆ ಮಾತ್ರ ನಿಮಗೆ ಧನ ಆಗಮನ ಆಗದಿರುವ ರೀತಿಯೂ ಮಾಡಬಹುದು.

ಯಾವಾಗ ಬರುತ್ತದೆ?

ದಾಖಲೆ ಸರಿ ಇದ್ದ ಪಡಿತರಿಗೆ ಆಗಸ್ಟ್ ನಲ್ಲಿ ಹಣ ಬರಲಿದೆ ಆದರೆ ದಾಖಲೆ ಸರಿ ಇಲ್ಲದೇ ಮತ್ತು ಇಕೆವೈಸಿ ಮಾಡಿಸದೇ ಇರುವ ಪಡಿತರಿಗೆ ಆಗಸ್ಟ್ ನಲ್ಲಿ ಆಹಾರ ಧಾನ್ಯ ನೀಡುವ ಮತ್ತು ನಗದು ಹಣ ನೀಡುವುದು ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ. ಬಯೋಮೆಟ್ರಿಕ್ ಬದಲಿಗೆ ಬಂದ ಮೊಬೈಲ್ ಒಟಿಪಿ ವ್ಯವಸ್ಥೆ ಇನ್ನು ಎರಡು ತಿಂಗಳಲ್ಲಿ ನಿಲ್ಲಲಿದೆ ಎಂದು ಮಾಹಿತಿ ಮೂಲಗಳು ತಿಳಿಸಿದೆ.


ನ್ಯಾಯಬೆಲೆ ಅಂಗಡಿಯಲ್ಲಿ ಪರಿಶೀಲನೆ:

ಪಡಿತರ (Ration) ಕುಟುಂಬದ ಮುಖ್ಯಸ್ಥರ ವಿವರ ತಪ್ಪಾಗಿದ್ದರೆ, ಆಧಾರ್ ಜೋಡಣೆ ಆಗದಿದ್ದರೆ, ಆಧಾರ್ ಹಾಗೂ ರೇಶನ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಇನ್ನಿತರ ಸಮಸ್ಯೆಗಳಿಗೆ ನ್ಯಾಯಬೆಲೆ ಅಂಗಡಿ ಮೂಲಕ ಉತ್ತರ ಕಂಡುಕೊಳ್ಳಲಾಗುವುದು. ಅಂದರೆ ನ್ಯಾಯಬೆಲೆ ಅಂಗಡಿಯಲ್ಲಿ ಅನೇಕ ಮಾಹಿತಿ ಪರಿಶೀಲನೆ ಮಾಡಿಯೇ ಹಣ ವರ್ಗಾವಣೆ ಆಗಲಿದ್ದು ಇಂತಹ ಸಮಸ್ಯೆ ಮೊದಲೇ ಬಗೆಹರಿದ ಬಳಿಕವೇ ಕುಟುಂಬದ ಮುಖ್ಯಸ್ಥರಿಗೆ ಹಣ ಜಮಾವಣೆಯಾಗಲಿದೆ. ಹಾಗಾಗಿ ಸಮಸ್ಯೆ ಇದ್ದರೆ ಮೊದಲೆ ಬಗೆಹರಿಸಿಕೊಳ್ಳುವುದು ಅತ್ಯಗತ್ಯ.

Post a Comment

Previous Post Next Post
CLOSE ADS
CLOSE ADS
×