JioBook Laptop: ಜಿಯೋ ಲ್ಯಾಪ್‌ಟಾಪ್ ಬಿಡುಗಡೆಗೆ ಸಜ್ಜು: ಬೆಲೆ ಎಷ್ಟು ಗೊತ್ತಾ?

 ರಿಲಯನ್ಸ್ ಜಿಯೋ ಈಗ ಲ್ಯಾಪ್‌ಟಾಪ್‌ ಬಿಡುಗಡೆಗೆ ಸಜ್ಜಾಗಿದೆ. ಕೈಗೆಟುಕುವ ಬೆಲೆಯಲ್ಲಿ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲಿದ್ದು, ಈ ತಿಂಗಳ ಅಂತ್ಯದಿಂದ ಮಾರಾಟ ಆರಂಭಿಸಲಿದೆ. ಜುಲೈ ಅಂತ್ಯದಲ್ಲಿ ಈ ಲ್ಯಾಪ್‌ಟಾಪ್ ಬಿಡುಗಡೆಯಾಗುವ ಸಾಧ್ಯತೆ ಇದೆ.



ಜಿಯೋ ಲ್ಯಾಪ್‌ಟಾಪ್ ಹೇಗಿರುತ್ತೆ ಎನ್ನುವ ಬಗ್ಗೆ ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ ಟೀಸರ್ ಕೂಡ ಬಿಡುಗಡೆಯಾಗಿದೆ. ಜುಲೈ 31ರಂದು ಬಹು ನಿರೀಕ್ಷಿತ ಲ್ಯಾಪ್‌ಟಾಪ್ ಬಿಡುಗಡೆಯಾಗುತ್ತದೆ ಎಂದು ಅಮೆಜಾನ್ ತಿಳಿಸಿದೆ.

'ನಿಮ್ಮ ಅಂತಿಮ ಕಲಿಕೆಯ ಪಾಲುದಾರ' ಎನ್ನುವ ಅಡಿಬರಹದೊಂದಿಗೆ ಬಿಡುಗಡೆಯಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಜಿಯೋಬುಕ್‌ನ ನವೀಕರಿಸಿದ ಆವೃತ್ತಿಯಾಗಿರಬಹುದು ಎಂದು ಹೇಳಲಾಗಿದೆ. 2022ರಲ್ಲಿ ಜಿಯೋಬುಕ್‌ ಅನ್ನು 15,799 ರೂಪಾಯಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಇದು ರಿಲಯನ್ಸ್ ಡಿಜಿಟಲ್ ಸ್ಟೋರ್ ಮೂಲಕ ಮಾತ್ರ ಲಭ್ಯವಿತ್ತು.


ಜಿಯೋಬುಕ್‌ನ ವಿಶೇಷತೆಗಳೇನು?

ಅಮೆಜಾನ್ ಟೀಸರ್ ಹೊಸ ಜಿಯೋ ಬುಕ್‌ ಬಗ್ಗೆ ಕೆಲವು ವಿವರಗಳನ್ನು ನೀಡಿದೆ. ಇದು ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ ಮತ್ತು ನೀಲಿ ಬಣ್ಣವನ್ನು ಒಳಗೊಂಡಿದೆ. ಅಕ್ಟೋಬರ್‌ನಲ್ಲಿ ಘೋಷಿಸಿದ ಅದೇ ವಿನ್ಯಾಸವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಎಲ್ಲಾ ವಯಸ್ಸಿನ ಬಳಕೆದಾರರಿಗೆ ವ್ಯವಹಾರ, ಮನರಂಜನೆ ಮತ್ತು ಗೇಮಿಂಗ್ ಅಗತ್ಯಗಳನ್ನು ಪೂರೈಸಲು ಜಿಯೋಬುಕ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅಮೇಜಾನ್ ಹೇಳಿಕೊಂಡಿದೆ. ಇದು 4ಜಿ ಸಂಪರ್ಕವನ್ನು ಬೆಂಬಲಿಸುತ್ತದೆ ಮತ್ತು ಹೈ-ಡೆಫಿನಿಷನ್ ವೀಡಿಯೋ ಸ್ಟ್ರೀಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು ವಿವಿಧ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಶಕ್ತಿಯುತ ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ.

1 ಕೆ.ಜಿ. ಗಿಂತ ಕಡಿಮೆ ತೂಕ

ಟೀಸರ್ ಪ್ರಕಾರ, ಹೊಸ ಜಿಯೋ ಲ್ಯಾಪ್‌ಟಾಪ್ ಹಗುರ ತೂಕ ಹೊಂದಿರುತ್ತದೆ, ಸುಮಾರು 990 ಗ್ರಾಂ ತೂಕವಿರುತ್ತದೆ. ಅಮೆಜಾನ್‌ನ ಹಕ್ಕುಗಳ ಪ್ರಕಾರ ಇಡೀ ದಿನದ ಬ್ಯಾಟರಿ ಅವಧಿಯನ್ನು ಹೊಂದಲಿದೆ. ಹೆಚ್ಚಿನ ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ ಮತ್ತು ಜುಲೈ 31 ರಂದು ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಅನಾವರಣಗೊಳ್ಳುವ ಸಾಧ್ಯತೆಯಿದೆ.


ಜಿಯೋಬುಕ್ ಲ್ಯಾಪ್‌ಟಾಪ್ Adreno 610 GPU, 2 GB LPDDR4X RAM ಮತ್ತು 32 ಜಿಬಿ eMMC ಸ್ಟೋರೆಜ್‌ ಹೊಂದಿದ್ದು, ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 665 ಪ್ರೊಸೆಸರ್‌ ಜೊತೆ ಕಾರ್ಯ ನಿರ್ವಹಿಸಲಿದೆ. 11.6 ಇಂಚಿನ ಹೆಚ್‌ಡಿ ಪರದೆ ಹೊಂದಿದೆ. 2 ಎಂಪಿ ವೆಬ್‌ಕ್ಯಾಮ್‌, ಇನ್‌ಬಿಲ್ಟ್‌ ಮೈಕ್ರೋಫೋನ್, 5000 ಎಂಎಹೆಚ್‌ ಬ್ಯಾಟರಿಯನ್ನು ಒಳಗೊಂಡಿದೆ.

ಹೆಡ್‌ಫೋನ್ ಜ್ಯಾಕ್, ಒಂದು ಯುಎಸ್‌ಬಿ 2.0 ಪೋರ್ಟ್, ಒಂದು ಯುಎಸ್‌ಬಿ 3.0 ಪೋರ್ಟ್ ಮತ್ತು ಒಂದು ಹೆಚ್‌ಡಿಎಂಐ ಪೋರ್ಟ್ ಸೇರಿವೆ. ಈ ಲ್ಯಾಪ್‌ಟಾಪ್ ಬ್ಲೂಟೂತ್ v5.0, Wi-Fi 802.11ac ಮತ್ತು 4ಜಿ ಬೆಂಬಲ ಕೂಡ ಹೊಂದಿದೆ. ಹೊಸ ಲ್ಯಾಪ್‌ಟಾಪ್ ಬೆಲೆ 20,000 ರೂಪಾಯಿ ಆಸುಪಾಸಿನಲ್ಲಿರಬಹುದು ಎಂದು ಅಂದಾಜಿಸಲಾಗಿದೆ.

Previous Post Next Post