ವಾಟ್ಸಪ್ ಸ್ಟೇಟಸ್ ಜವಾಬ್ದಾರಿಯುತವಾಗಿ ಹಾಕಿ – ಬಾಂಬೆ ಹೈಕೋರ್ಟ್

ವಾಟ್ಸಪ್ ಸ್ಟೇಟಸ್ ಜವಾಬ್ದಾರಿಯುತವಾಗಿ ಹಾಕಿ – ಬಾಂಬೆ ಹೈಕೋರ್ಟ್

 ಮುಂಬೈ: ವಾಟ್ಸಪ್ ಸ್ಟೇಟಸ್ (WhatsApp) ಮೂಲಕ ಇತರರಿಗೆ ಏನನ್ನಾದರೂ ತಿಳಿಸುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಬಾಂಬೆ ಹೈಕೋರ್ಟ್‍ನ (Bombay High Court) ನಾಗ್ಪುರ ಪೀಠ ಹೇಳಿದೆ.



ಧಾರ್ಮಿಕ ಗುಂಪಿನ ವಿರುದ್ಧ ದ್ವೇಷವನ್ನು ಹರಡಿದ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಹೇಳಿಕೆ ನೀಡಿದೆ. ಅಲ್ಲದೇ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಕೋರ್ಟ್ ನಿರಾಕರಿಸಿದೆ.

ಧಾರ್ಮಿಕ ಭಾವನೆ ಹಾಗೂ ನಂಬಿಕೆಯನ್ನು ಉದ್ದೇಶಪೂರ್ವಕವಾಗಿ ಘಾಸಿಗೊಳಿಸಿದ ಬಗ್ಗೆ ದಾಖಲಾಗಿರುವ ಎಫ್‍ಐಆರ್‍ನ್ನು ರದ್ದುಗೊಳಿಸುವಂತೆ 27 ವರ್ಷದ ಕಿಶೋರ್ ಲ್ಯಾಂಡ್ಕರ್ ಎಂಬ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಪೀಠವು ವಜಾಗೊಳಿಸಿದೆ. ನೀವು ಏನು ಮಾಡುತ್ತಿದ್ದೀರಿ, ಆಲೋಚಿಸುತ್ತೀರಿ ಅಥವಾ ನೀವು ನೋಡಿದ ಯಾವುದೋ ಚಿತ್ರ, ವೀಡಿಯೊ ಆಗಿರಬಹುದು, ಅದು 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ. ಇದು ವ್ಯಕ್ತಿಯ ಸಂಪರ್ಕದಲ್ಲಿರುವವರಿಗೆ ಏನನ್ನಾದರೂ ತಿಳಿಸುವ ಉದ್ದೇಶವಾಗಿದೆ. ಇದು ತಿಳಿದಿರುವ ವ್ಯಕ್ತಿಗಳೊಂದಿಗೆ ಸಂವಹನದ ವಿಧಾನವಲ್ಲದೆ ಬೇರೇನೂ ಅಲ್ಲ. ಇತರರೊಂದಿಗೆ ಸಂವಹನ ಮಾಡುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಆರೋಪಿ ಧಾರ್ಮಿಕ ಭಾವನೆ ಕೆರಳಿಸುವ ವಿಚಾರವನ್ನು ಸ್ಟೇಟಸ್‍ಗೆ ಹಾಕಿದ್ದು, ಈ ಬಗ್ಗೆ ಇಂಟರ್‌ನೆಟ್ ಹುಡುಕುವಂತೆ ಸೂಚಿಸಿದ್ದಾನೆ. ಇದನ್ನು ಹುಡುಕಾಟ ಮಾಡಿದವರ ಧಾರ್ಮಿಕ ಭಾವನೆಗೆ ತೊಂದರೆಯಾಗುವಂತಹ ವಿಷಯಗಳು ಸಿಕ್ಕಿತ್ತು. ಆದರೆ ಆರೋಪಿ ತನ್ನ ಉದ್ದೇಶ ಬೇರೆಯವರಿಗೆ ನೋವು ಕೊಡುವುದಾಗಿರಲಿಲ್ಲ ಎಂದು ವಾದಿಸಿದ್ದಾನೆ.


Post a Comment

Previous Post Next Post
CLOSE ADS
CLOSE ADS
×