ರಾಜ್ಯ ಸರಕಾರವು ಕಾರ್ಮಿಕ ವರ್ಗದ ಅಭಿವೃದ್ಧಿಗೆ ಹಾಗೂ ಜೀವನ ಶೈಲಿಗೆ ಸಹಕಾರಿಯಾಗಲೆಂದು ಅನೇಕ ಯೋಜನೆಗಳನ್ನು ಆಗಾಗ ಜಾರಿಗೆ ತರುತ್ತಲೇ ಇರುತ್ತದೆ. ಈ ಮೂಲಕ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡುವುದು ಇದರ ಒಂದು ಮೂಲ ಉದ್ದೇಶ ಎಂದರೂ ತಪ್ಪಾಗಲಾರದು ಆದರೆ ಇಲ್ಲೋಂದು ಯೋಜನೆಗೆ ಕಾರ್ಮಿಕರು ಅನರ್ಹರಾದರೆ ಏನಾಗುತ್ತೆ ಇನ್ನಿತರ ಮಾಹಿತಿಯ ಬಗ್ಗೆ ತಿಳಿಸಲಿದ್ದೇವೆ.
ಸರಕಾರದಿಂದ ಒಂದು ಸೌಲಭ್ಯ ಸಿಗುತ್ತದೆ ಎಂದಾದರೆ ಅದು ಸದುಪಯೋಗ ಆಗುವುದಕ್ಕಿಂತಲೂ ದುರುಪಯೋಗ ಆಗುವ ಪ್ರಮಾಣ ಇಂದು ಅಧಿಕವಾಗಿದೆ ಕಾರ್ಮಿಕರ (Labours development) ಅಭಿವೃದ್ಧಿಗೆ ಅವರಿಗೆ ನೆರವಾಗಲು ನೀಡುವ ಸರಕಾರಿ ಸೌಲಭ್ಯ ಅನರ್ಹರಪಾಲಾಗುವುದನ್ನು ಗಮನಿಸಿ ಅರ್ಜಿ ಪರಿಶೀಲಿಸಲಾಗಿ ಈಗ ಬಹುತೇಕರು ಅನರ್ಹರೆಂದೇ ಘೋಷಣೆಯಾಗಿದೆ.
ಸಚಿವರ ನಿರ್ಣಯ:
ಬಿಜೆಪಿ ಸದಸ್ಯರಾದ ಡಿ. ಎಸ್. ಅರುಣ್ (DS Arun) ಅವರು ಕಾರ್ಮಿಕ ಕಲ್ಯಾಣ ಯೋಜನೆಯ ಮೂಲಕ ಕಟ್ಟಡ ಮತ್ತು ಇತರ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿಸೆ ಆದರೆ ಈಗ ಈ ಯೋಜನೆ ಅನರ್ಹರ ಪಾಲಾಗುವ ಬಗ್ಗೆ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ. ಆಗ ಕಾರ್ಮಿಕ ಸಚಿವರಾದ ಸಂತೋಷ್ ಲಾರ್ಡ್ (Santhosh lard) ಅವರು ಈ ಪ್ರಶ್ನೆಗೆ ಸಮಂಜಸ ಉತ್ತರ ನೀಡಿದ್ದಾರೆ. 44ಲಕ್ಷ ಕಾರ್ಮಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಸುಮಾರು 24000ಕ್ಕೂ ಅಧಿಕ ನಕಲಿ ಕಾರ್ಮಿಕರು ಯೋಜನೆಯ ಫಲಕ್ಕಾಗಿ ಅರ್ಜಿ ಸಲ್ಲಿಸಿರುವುದು ಪರಿಶೀಲನೆಯ ವೇಳೆ ತಿಳಿದು ಬಂದಿದೆ. ಅಂತಹ ಅರ್ಜಿಗಳು ಸ್ವೀಕಾರವಾಗಲಾರದು ಮತ್ತು ಅಂತವರು ಈ ಯೋಜನೆಗೆ ಅನರ್ಹರು ಎಂದು ಅವರು ಹೇಳಿದ್ದಾರೆ.
ನಕಲಿ ಕಾರ್ಮಿಕರ ಪತ್ತೆಗೆ ಇಲಾಖೆ ಈಗಾಗಲೇ ಹಲವು ಹಂತದ ಪರಿಶೀಲನೆ ಮಾಡಲಾಗಿದ್ದು24ಸಾವಿರ ನಕಲಿ (forgery document) ಕಾರ್ಮಿಕರು ಕಂಡುಬಂದಿದ್ದಾರೆ. ಹಾಗಾಗಿ ಅವರ ಅರ್ಜಿಗಳನ್ನು ರದ್ದು ಮಾಡಲಾಗಿದ್ದು ಸುಳ್ಳು ದಾಖಲಾತಿ ನೀಡಿದವರ ವಿರುದ್ಧ ಮುಂದಿನ ದಿನದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ಇದೇ ಸಂದರ್ಭದಲ್ಲಿ ಸೂಚನೆ ನೀಡಿದ್ದಾರೆ.
ಕಟ್ಟಡ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು ಅವರಿಗೆ ದುರಂತ ಆದಾಗ ಅಥವಾ ಇತರ ಸಂದರ್ಭದಲ್ಲಿ ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣ, ಕುಟುಂಬ ಭದ್ರತೆ ಇನ್ನು ಹಲವು ವಿಧದ ಸೌಲಭ್ಯವನ್ನು ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಮಾಡಲಾಗುತ್ತಿದ್ದು ಶ್ರಮಿಕ ಕಾರ್ಡ್ ಕೂಡ ಜಾರಿಗೆ ತರಲಾಗಿದೆ. ಈ ಯೋಜನೆಗೆ ಅರ್ಹ ಇರುವವರಿಗಷ್ಟೇ ಮುಂದಿನ ದಿನದಲ್ಲಿ ಆಧ್ಯತೆ ಸಿಗುವುದಾಗಿ ತಿಳಿಸಿದ್ದಾರೆ.