ಗೃ ಹಲಕ್ಷ್ಮಿ ಯೋಜನೆ ನೋಂದಣಿಯ ಮಿತಿ ರದ್ದುಗೊಳಿಸಿರುವ ಬೆನ್ನಲ್ಲೇ ಸರಕಾರಇದೀಗ ಎಸ್‌ಎಂಎಸ್ ವ್ಯವಸ್ಥೆಯನ್ನೂ ತೆರವುಗೊಳಿಸಿ ನೇರ ನೋಂದಣಿಗೆ ಅವಕಾಶ ನೀಡಲಾಗಿದೆ...
ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ
ನೋಂದಣಿ ಇದೀಗ ಮತ್ತಷ್ಟು ಸರಳಗೊಂಡಿದೆ. ದಿನಕ್ಕೆ 60
ನೋಂದಣಿಯ ಮಿತಿ ರದ್ದುಗೊಳಿಸಿರುವ ಬೆನ್ನಲ್ಲೇ ಸರಕಾರ
ಇದೀಗ ಎಸ್‌ಎಂಎಸ್ ವ್ಯವಸ್ಥೆಯನ್ನೂ ತೆರವುಗೊಳಿಸಿ ನೇರ
ನೋಂದಣಿಗೆ ಅವಕಾಶ ನೀಡಲಾಗಿದೆ.
ಫಲಾನುಭವಿಗಳು ತಮಗೆ ಹತ್ತಿರದ ಗ್ರಾಮ ಒನ್, ಗ್ರಾಮಪಂಚಾಯತಿ ಕಚೇರಿಯ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕಒನ್, ನಗರದ ವಾರ್ಡ್ ಕಚೇರಿಗಳಲ್ಲಿ ನೇರವಾಗಿ ಹೋಗಿ ಯೋಜನೆಗೆ ಉಚಿತವಾಗಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಎಸ್‌ಎಂಎಸ್ ವ್ಯವಸ್ಥೆ ಸ್ಥಗಿತ
ಇದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮೊಬೈಲ್
ಸಂಖ್ಯೆಗೆ ಮೆಸೇಜ್ (ಶೆಡ್ಯೂಲಿಂಗ್) ಬಂದರಷ್ಟೇ ನೋಂದಣಿ
ಕೇಂದ್ರಗಳಿಗೆ ತೆರಳಬೇಕಿತ್ತು. ಇದೀಗ ಎಸ್‌ಎಂಎಸ್
ಅವಲಂಭಿಸದೇ ನೇರವಾಗಿ ನೋಂದಣಿ ಕೇಂದ್ರಗಳಿಗೆ
ದಾಖಲಾತಿಗಳೊಂದಿಗೆ ತೆರಳಿ ತಮ್ಮ ಹೆಸರನ್ನು
ನೋಂದಾಯಿಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.
ಸರ್ವರ್ ಸಮಸ್ಯೆಯಿಂದಾಗಿ ಯೋಜನೆ ಫಲಾನುಭವಿಗಳಿಗೆ
ಸರಿಯಾಗಿ ಎಸ್‌ಎಂಎಸ್ ಬರುತ್ತಿರಲಿಲ್ಲ. ಆದ್ದರಿಂದ
ನೋಂದಣಿ ವಿಳಂಬವಾಗುತ್ತಿದೆ ಎಂಬ ಆರೋಪವಿತ್ತು.
ಮಹಿಳೆಯರು ನೋಂದಣಿಗೆ ಕೇಂದ್ರಕ್ಕೆ ಆಗಮಿಸಿ
ತಾಸುಗಟ್ಟಲೇ ಕಾದು ವಾಪಸ್ ಆಗುತ್ತಿದ್ದರು.
ಯೋಜನೆಯ ನೋಂದಣಿಗೆ ಆಧಾರ್, ರೇಷನ್ ಕಾರ್ಡ್ ಸೇರಿಎಲ್ಲಾ ದಾಖಲೆ ಹಿಡಿದು ಹೋದರೂ ಸಹ ಎಸ್‌ಎಂಎಸ್ ಸಂದೇಶ ಬಂದಿಲ್ಲ ಎಂದು ನೋಂದಣಿ ಮಾಡಿಕೊಳ್ಳುತ್ತಿರಲಿಲ್ಲ.
50 ಲಕ್ಷಕ್ಕೂ ಅಧಿಕ ನೋಂದಣಿ
ಯೋಜನೆಗೆ ಜುಲೈ 19ರಂದು ಚಾಲನೆ ನೀಡಲಾಗಿದ್ದು; ಜುಲೈ
20ರಿಂದ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಈ 7
ದಿನಗಳಲ್ಲೇ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗಳು ತಮ್ಮ
ಹೆಸರು ನೋಂದಾಯಿಸಿಕೊ೦ಡಿದ್ದಾರೆ ಎಂದು ಸಚಿವೆ ಲಕ್ಷ್ಮಿ
ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಗೃಹ ಲಕ್ಷ್ಮಿ ನೋಂದಣಿಗೆ ಹಣ ಪಡೆದರೆ ಕ್ರಿಮಿನಲ್
ಕೇಸ್ ದಾಖಲಿಸಲಾಗುವುದು. ಸೇವಾ ಕೇಂದ್ರಗಳಲ್ಲಿ ಅಸಡ್ಡೆ
ತೋರಿದರೆ ಅಂತಹವರ ವಿರುದ್ಧವೂ ಕಠಿಣ ಕ್ರಮ
ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ
ಕಲ್ಯಾಣ ಇಲಾಖೆ ಸಚಿವರು ಎಚ್ಚರಿಸಿದ್ದಾರೆ.