Smartphone: 7000 ರೂ ಗೆ ಬಂತು ಹೊಸ ಬೆಂಕಿ ಫೋನ್! 3 ದಿನ ಬ್ಯಾಟರಿ ಬ್ಯಾಕಪ್

Smartphone: 7000 ರೂ ಗೆ ಬಂತು ಹೊಸ ಬೆಂಕಿ ಫೋನ್! 3 ದಿನ ಬ್ಯಾಟರಿ ಬ್ಯಾಕಪ್

 ಬಹಳ ಹಿಂದಿನಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಫೋನಿಗೆ ಅತಿ ಹೆಚ್ಚಿನ ಬೇಡಿಕೆ ಇದೆ. ಆದರೆ ನೋಕಿಯಾ ಸ್ಮಾರ್ಟ್ಫೋನ್ ತಯಾರಿಸುವಲ್ಲಿ ಈ ಹಿಂದೆ ಸ್ವಲ್ಪ ಎಡವಿತ್ತು ಆದರೆ ಈಗ ನೋಕಿಯಾದ ಅತ್ಯುತ್ತಮವಾಗಿರುವ ಸ್ಮಾರ್ಟ್ ಫೋನ್ (Smartphone) ಕೂಡ ಮಾರುಕಟ್ಟೆಗೆ ಬಂದಿದೆ. ಅವುಗಳಲ್ಲಿ ಇತ್ತೀಚಿಗೆ ಬಿಡುಗಡೆಯಾದ ಒಂದು ಫೋನ್ ಕೇವಲ ಏಳು ಸಾವಿರ ರೂಪಾಯಿಗಳಿಗೆ ಲಭ್ಯವಿದೆ ಅಂದರೆ ನೀವು ನಂಬಲೇಬೇಕು



ನೋಕಿಯಾ ಕಂಪನಿಯ ಪ್ರವೇಶ ಮಟ್ಟದ ಸ್ಮಾರ್ಟ್ ಫೋನ್ ಇದಾಗಿದ್ದು, ಅದುವೇ ನೋಕಿಯಾ ಸಿ 12 ಪ್ರೊ ಆಗಿದೆ. ಈ ಫೋನ್ ಹಿಂದೆಯೇ ಬಿಡುಗಡೆ ಆಗಿತ್ತು ಆದರೆ ಆ ಫೋನಿನ ಬಣ್ಣ ಜನರಿಗೆ ಹೆಚ್ಚು ಇಷ್ಟವಾಗಿರಲಿಲ್ಲ ಹಾಗಾಗಿ ಹೊಸ ಬಣ್ಣದಲ್ಲಿ ಹೊಸ ರೂಪದಲ್ಲಿ ಮತ್ತೆ ಬಿಡುಗಡೆ ಮಾಡಲಾಗಿದೆ ಈ ಫೋನಿನ ಬ್ಯಾಟರಿ, ಕ್ಯಾಮೆರಾ ಎಲ್ಲವೂ ಅತ್ಯುತ್ತಮವಾಗಿದ್ದು ಫೋನಿನ ಬಗ್ಗೆ ಅಧಿಕೃತ ಮಾಹಿತಿಯನ್ನು ನೋಕಿಯಾ ಕಂಪನಿ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.

Nokia C12 Pro Features:

ಈ ಫೋನಿನಲ್ಲಿರುವ ವೈಶಿಷ್ಟ್ಯತೆ ನೋಡುವುದಾದರೆ 6.3 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯನ್ನು ಕೊಡಲಾಗಿದೆ. ಡ್ಯೂಡ್ರಾಪ್ ನಾಚ್ ಹಾಗೂ 1600*720 ಪಿಕ್ಸೆಲ್ ಇರುವ ಎಚ್ ಡಿ ಪ್ಲಸ್ ರೆಸುಲ್ಯೂಷನ್ ಹೊಂದಿದೆ. ಇನ್ನು ಆಂಡ್ರಾಯ್ಡ್ 12 ಗೋ ಆವೃತ್ತಿಯ ಫೋನ್ ಇದಾಗಿದ್ದು ಇದರಲ್ಲಿ ಹಳೆಯ 28 nm unisoc SC9863A1 ಚಿಪ್ ಸೆಟ್ ಅಳವಡಿಸಲಾಗಿದೆ.

Nokia C12 Pro Battery:

ನೋಕಿಯಾ ಫೋನ್ ಹೆಚ್ಚು ಹೆಸರುವಾಸಿಯಾಗಿರುವುದೇ ಅದರ ಅತ್ಯುತ್ತಮ ಗುಣಮಟ್ಟದ ಬ್ಯಾಟರಿ ಪವರ್ ನಿಂದಾಗಿ. ಕಡಿಮೆ ಬೆಲೆಯ ಈ ಸ್ಮಾರ್ಟ್ ಫೋನ್ ನಲ್ಲಿ ಕೂಡ 4000 ಎಮ್ ಎ ಎಚ್ ಬ್ಯಾಟರಿ ಅಳವಡಿಸಲಾಗಿದ್ದು ಅತ್ಯಂತ ಬೇಗ ಚಾರ್ಜ್ ಆಗುತ್ತದೆ. ಜೊತೆಗ್ ದೀರ್ಘಾವಧಿಯ ವರೆಗೆ ಬ್ಯಾಟರಿ ಪವರ್ ಇರುತ್ತದ್. ಹೆಚ್ ಎಂ ಡಿ ಗ್ಲೋಬಲ್ ನಿಂದ ಎರಡು ವರ್ಷಗಳ ನಿಯಮಿತ ಅಪ್ಡೇಟ್ ಕೂಡ ಖಾತರಿಪಡಿಸಲಾಗಿದೆ ಆದರೆ ಆಂಡ್ರಾಯ್ಡ್ ಅಪ್ಡೇಟ್ ಬಗ್ಗೆ ಇವರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಎರಡು ತಿಂಗಳ ಬದಲಿ ಗ್ಯಾರಂಟಿ ಕೂಡ ಈ ಫೋನ್ ನಲ್ಲಿ ಪಡೆದುಕೊಳ್ಳಬಹುದು.

Nokia C12 Pro:

ಇನ್ನು ಈ ಫೋನಿನ ಕ್ಯಾಮೆರಾ ನೋಡುವುದಾದರೆ ಹಿಂಬದಿಯಲ್ಲಿ ಹಾಗೂ ಮುಂಭಾಗದಲ್ಲಿ 5 ಎಂಪಿ ಕ್ಯಾಮೆರಾ ಜೋಡಿಸಲಾಗಿದ್ದು ಸಿಂಗಲ್ ಬ್ಯಾಂಡ್ ವೈಫೈ, ಬ್ಲೂಟೂತ್ 5.2, ಮೈಕ್ರೋ ಯುಎಸ್ ಬಿ, ಮೈಕ್ರೋ ಎಸ್ ಡಿ ಕಾರ್ಡ್ ಕೂಡ ಕೊಡಲಾಗಿದೆ. ಇನ್ನು 3.5 ಎಂಎಂ ಹೆಡ್ ಫೋನ್ ಜಾಕ್ ಕೂಡ ಮೊಬೈಲ್ ನಲ್ಲಿ ಇದೆ.


Nokia C12 Pro Price:

ಆಗಲೇ ಹೇಳಿರುವಂತೆ ನೋಕಿಯಾದ ಎಲ್ಲಾ ಸ್ಮಾರ್ಟ್ ಫೋನ್ ಗಳು ಕೂಡ ಇದುವರೆಗೆ ಗ್ರಾಹಕರನ್ನು ಸಂಪೂರ್ಣವಾಗಿ ಆವರಿಸಿಕೊಂಡಿಲ್ಲ ಇದರ ಆಂಡ್ರಾಯ್ಡ್ ಫೋನ್ ಗಳಿಗೆ ಹೋಲಿಸಿದರೆ ನೋಕಿಯಾ ಸ್ಮಾರ್ಟ್ ಫೋನ್ ಸ್ವಲ್ಪ ಹಿಂದೆ ಬಿದ್ದಿದೆ ಎನ್ನಬಹುದು ಆದರೆ ಈಗ ನೋಕಿಯಾ ಸಿ 12 ಪ್ರೊ ಬಿಡುಗಡೆ ಮಾಡಿದ್ದು ಇದು ಬೇಸಿಕ್ ಸ್ಮಾರ್ಟ್ ಫೋನ್ ಎನ್ನಬಹುದು ಆದರೂ ಇದರಲ್ಲಿ ವೈಶಿಷ್ಟ್ಯತೆಗಳು ತುಂಬಾನೇ ಉತ್ತಮವಾಗಿದೆ. ಎರಡು ಜಿಬಿ ರಾಮ್ ಹೊಂದಿರುವ ಫೋನಿನ ಬೆಲೆ ಕೇವಲ 6,999 ರೂಪಾಯಿಗಳು. ಇನ್ನು ಮೂರು ಜಿಬಿ ರಾಮ್ ಹೊಂದಿರುವ ಫೋನಿನ ಬೆಲೆ ರೂ.7,499 ರೂಪಾಯಿಗಳಾಗುತ್ತವೆ. ಒಟ್ಟಾರೆಯಾಗಿ ನೋಕಿಯಾದ ಈ ಬೇಸಿಕ್ ಸ್ಮಾರ್ಟ್ ಫೋನ್ ಹಳ್ಳಿ ಪ್ರದೇಶದಲ್ಲಿ ಹೆಚ್ಚು ಫೇಮಸ್ ಆಗುವ ಸಾಧ್ಯತೆ ಇದೆ. ಈ ಫೋನ್ ಬಿಡುಗಡೆ ಆಗುತ್ತಿದ್ದಂತೆ ಅಮೆಜಾನ್ ಫ್ಲಿಪ್ ಕಾರ್ಟ್ ಮತ್ತಿತರ ಈ ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಅಥವಾ ರಿಟೇಲ್ ಶಾಪ್ ಗಳಲ್ಲಿ ಹಾಗೂ ನೋಕಿಯಾ ವೆಬ್ಸೈಟ್ ಮೂಲಕವೂ ಕೂಡ ಖರೀದಿ ಮಾಡಬಹುದು.


Post a Comment

Previous Post Next Post
CLOSE ADS
CLOSE ADS
×