White Mango: ನೀವೆಂದೂ ಕಂಡಿರದ ವಿಶಿಷ್ಟ ಬಿಳಿ ಮಾವು, ಎಲ್ಲಿ ಸಿಗತ್ತೆ ಗೊತ್ತಾ? ಬೆಲೆ ವಿಶೇಷತೆ ವೈರಲ್

White Mango: ನೀವೆಂದೂ ಕಂಡಿರದ ವಿಶಿಷ್ಟ ಬಿಳಿ ಮಾವು, ಎಲ್ಲಿ ಸಿಗತ್ತೆ ಗೊತ್ತಾ? ಬೆಲೆ ವಿಶೇಷತೆ ವೈರಲ್

 ನಮ್ಮ ದೇಶದಲ್ಲಿ ಸಾಕಷ್ಟು ರೀತಿಯ ಮಾವಿನ ಹಣ್ಣುಗಳು ಸಿಗುತ್ತವೆ. ಈಗಂತೂ ಮಾವಿನ ಹಣ್ಣಿನ ಸೀಸನ್. 



ಹಾಗಾಗಿ ಎಲ್ಲೆಂದರಲ್ಲಿ ಸಾಕಷ್ಟು ವಿಧದ ಮಾವಿನ ಹಣ್ಣುಗಳು ಸಿಗುತ್ತವೆ ತೋತಾಪುರಿ, ಆ್ಯಪುಸ್, ಮಲಗೋವಾ ಹೀಗೆ ಬೇರೆ ಬೇರೆ ವಿಧದ ಹಣ್ಣುಗಳನ್ನು ನೀವು ನೋಡಬಹುದು ಆದರೆ ಸಾಮಾನ್ಯವಾಗಿ ಮಾವಿನ ಹಣ್ಣುಗಳು ಹಳದಿ ಬಣ್ಣದಲ್ಲಿ ಇರುತ್ತವೆ ಅಥವಾ ಗಾಢ ಹಳದಿ ಸ್ವಲ್ಪ ಕೇಸರಿ ಬಣ್ಣದಲ್ಲಿ ಕಾಣಿಸುತ್ತದೆ ಆದರೆ ನೀವು ಬಿಳಿ ಬಣ್ಣದ (White Mango) ಮಾವಿನಹಣ್ಣನ್ನು ನೋಡಿದ್ದೀರಾ?

ಹೌದು, ಇದು ಕೂಡ ಒಂದು ಜಾತಿಯ ಮಾವಿನ ಹಣ್ಣು ಹೊರ ಭಾಗದಿಂದ ತಿಳಿಹಸಿರು ಬಣ್ಣದಲ್ಲಿಯೂ ಒಳಭಾಗದಲ್ಲಿ ಸಂಪೂರ್ಣ ಬಿಳಿ ಬಣ್ಣದಲ್ಲಿಯೂ ಈ ಮಾವಿನಹಣ್ಣು ಇರುತ್ತದೆ. ಆದರೆ ಪ್ರಪಂಚದಲ್ಲಿ ಕೇವಲ ಈ ಒಂದು ಸ್ಥಳದಲ್ಲಿ ಮಾತ್ರ ಈ ಮಾವಿನಹಣ್ಣು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ ಹಾಗಾದರೆ ಈ ವಿಶಿಷ್ಟ ಮಾವಿನಹಣ್ಣು ಎಲ್ಲಿ ಸಿಗುತ್ತೆ ಗೊತ್ತಾ?

ಬಿಳಿ ಮಾವು ಎಲ್ಲಿ ಸಿಗುತ್ತೆ?



ಜಗತ್ತಿನಲ್ಲಿ ಕೇವಲ ಬಾಲಿಯಲ್ಲಿ ಮಾತ್ರ ಈ ಮಾವು ಸಿಗುತ್ತದೆ. ಈ ಬಿಳಿ ಮಾವನ್ನು ವಾನಿ (WANI) ಎಂದು ಕರೆಯಲಾಗುತ್ತದೆ. ಇದು ಬಹಳ ವಿಶೇಷವಾದ ಮಾವಿನ ಹಣ್ಣು ಮೇಲ್ನೋಟಕ್ಕೆ ಸಾಮಾನ್ಯ ಮಾವಿನಹಣ್ಣಿನಂತೆ ಕಂಡರು ಒಳಭಾಗದಲ್ಲಿ ಸಂಪೂರ್ಣ ಬಿಳಿಯಾಗಿರುತ್ತದೆ ಮಾವಿನ ಹಣ್ಣಿನ ತಿರುಳು ಕೂಡ ಬಿಳಿಯ ಬಣ್ಣದಲ್ಲಿಯೇ ಇರುತ್ತದೆ. ಈ ಒಂದು ಮಾವಿನ ಹಣ್ಣನ್ನು ತಿಂದರೆ ಸಾಕು ಒಂದು ಬುಟ್ಟಿಯಷ್ಟು ರುಚಿಯಾದ ಹಣ್ಣುಗಳನ್ನು ಒಟ್ಟಿಗೆ ತಿಂದ ಅನುಭವ ಆಗುತ್ತದೆ ಅಷ್ಟು ರುಚಿಕರವಾದ ಮಾವಿನ ಹಣ್ಣು ಇದು. ಆದರೆ ಭಾರತದಲ್ಲಿ ಈ ಜಾತಿಯ ಮಾವಿನ ಹಣ್ಣು ಲಭ್ಯವಿಲ್ಲ ಆದರೆ ಸದ್ಯದಲ್ಲಿಯೇ ಭಾರತದಲ್ಲಿಯೂ ಕೂಡ ಈ ಹಣ್ಣನ್ನು ಬೆಳೆಯಲು ಯೋಚಿಸಲಾಗುತ್ತಿದೆ.

ಇದರಲ್ಲಿದೆ ಆಲ್ಕೋಹಾಲ್ ರುಚಿ:

ಇದರಲ್ಲಿ ಆಲ್ಕೋಹಾಲ್ ರುಚಿ ಸ್ವಲ್ಪ ಸೇರಿಕೊಂಡಿದೆ ಎಂದು ತಿಂದವರು ಹೇಳುತ್ತಾರೆ. ಕೆಲವರು ಸ್ಮೋಕಿ ಟೂತ್ ಪೇಸ್ಟ್ ರುಚಿ ಕೂಡ ಇದೆ ಎನ್ನುತ್ತಾರೆ. ಬಾಲಿಯಲ್ಲಿ ಮ್ಯಾಂಗಿಫೆರಾ ಸಿಸಿಯಾ ಜಾಕ್ ಎಂದು ಕರೆಯಲಾಗುತ್ತಿದ್ದು ಬಾಲಿಯ ಪ್ರತಿಯೊಂದು ಮನೆಯಲ್ಲಿಯೂ ಈ ಹಣ್ಣು ಸಾಮಾನ್ಯವಾಗಿ ಬೆಳೆಯುತ್ತದೆ. ಭಾರತದಲ್ಲಿಯೂ ಈ ಹಣ್ಣು ತಿನ್ನಲು ಸಿಗುವಂತಾದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ


Post a Comment

Previous Post Next Post
CLOSE ADS
CLOSE ADS
×