Free Bus: ಫ್ರಿ ಬಸ್ ಇದ್ದವರಿಗೆ ದಂಡವೂ ಇದೆ, ಕೊನೆ ಕ್ಷಣದಲ್ಲಿ ಹೊಸ ರೂಲ್ಸ್

Free Bus: ಫ್ರಿ ಬಸ್ ಇದ್ದವರಿಗೆ ದಂಡವೂ ಇದೆ, ಕೊನೆ ಕ್ಷಣದಲ್ಲಿ ಹೊಸ ರೂಲ್ಸ್

 ಜೂನ್ 11ರಂದು ಕರ್ನಾಟಕದ ಎಲ್ಲ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷದ ಒಂದು ಗ್ಯಾರೆಂಟಿ ಲಭ್ಯವಾಗಿದೆ. ರಾಜ್ಯದ ಎಲ್ಲ ಭಾಗದಲ್ಲಿ ಉಚಿತವಾಗಿ ಮಹಿಳೆಯರಿಗೆ ಪ್ರಯಾಣ (Free Bus) ಮಾಡಲು ಅವಕಾಶ ನೀಡಲಾಗಿದ್ದು ಈ ಬಗ್ಗೆ ಕೆಲವು ಷರತ್ತುಗಳಿದೆ. ಒಂದು ವೇಳೆ ನೀವು ಷರತ್ತುಗಳ ಬಗ್ಗೆ ಗೊತ್ತಿಲ್ಲದೆ ಬಸ್ ಗೆ ಹೋದರೆ ಆಗ ಪ್ರಯಾಣ ಉಚಿತ ಆಗಲಾರದು.



ಪ್ರಯಾಣ ಉಚಿತ ಬಯಸುವವರು ಈ ಕೆಳಗಿನ ಮಾಹಿತಿಯನ್ನು ತಪ್ಪದೇ ಓದಿ ಮತ್ತು ಉಚಿತ ಪ್ರಯಾಣಕ್ಕೆ ಬಯಸುವವರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.

ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸಿಕ್ಕಲು ಮೊದಲನೆಯಾಗಿ ನಿಮ್ಮ ಪ್ರೂಫ್ ಐಡಿ (ID prof) ಬೇಕು. ಅಂದರೆ ನೀವು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯುವವರೆಗೆ ನಿಮ್ಮ ಆಧಾರ್, ರೇಶನ್, ಓಟಾರ್ ಐಡಿ ಇತರ ಸರಕಾರಿ ಐಡಿಯನ್ನು ಬಳಸಬಹುದು.

ನೀವು ಸರಕಾರಿ ನಾರ್ಮಲ್ ಬಸ್ ನಲ್ಲಿ ಮಾತ್ರ ಪ್ರಯಾಣ ಮಾಡಬೇಕು ಎಸಿ, ಓಲೋ ರಾಜಹಂಸ (AC , volo, Rajahamsa) ದಂತಹ ಬಸ್ ಪ್ರಯಾಣವು ಉಚಿತವಾಗಿ ಇಲ್ಲ.

aaaa

ರಾಜ್ಯದ ಒಳಗೆ ಮಾತ್ರ ಉಚಿತ ಬಸ್ ಪ್ರಯಾಣ ಇರುತ್ತದೆ. ಪರರಾಜ್ಯಕ್ಕೆ ನಮ್ಮ ರಾಜ್ಯದಿಂದ ಹೋಗುವಾಗ ಈ ಪ್ರಯಾಣ ಉಚಿತ ಇಲ್ಲ ಎಂದು ಹೇಳಬಹುದು ಇದು ಕೂಡ ಒಂದು ಷರತ್ತು ಎಂದು ನೆನಪಿಡಿ.

ರಾಜ್ಯದಲ್ಲಿ ಇರುವ ಅನ್ಯ ರಾಜ್ಯದ ಬಸ್ ಗೆ ಉಚಿತ ಪ್ರಯಾಣದ ಅವಕಾಶ ಇಲ್ಲ ಎಂದು ಹೇಳಬಹುದು. ಅನ್ಯ ರಾಜ್ಯದ ಉದಾಹರಣೆಗೆ ಕೇರಳ ಬಸ್ ಇದ್ದರೆ ಅವರ ಬೋರ್ಡ್ ಮೇಲೆ ಸಹ ಕೆಎಸ್ ಆರ್ಟಿಸಿ (KSRTC) ಎಂದು ಬರೆದಿರುತ್ತದೆ ಆದರೆ ಅದು ಕೇರಳ ಬಸ್ ಅಂತಹ ಬಸ್ ಗೆ ಉಚಿತ ಪ್ರಯಾಣ ಇಲ್ಲ.

ಸರಕಾರದ ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಕಡ್ಡಾಯವಾಗಿ ಮೂರು ತಿಂಗಳ ಒಳಗಾಗಿ ಮಾಡಿಸಲೇ ಬೇಕು. ಇದನ್ನು ಸೇವಾ ಸಿಂಧು ವೆಬ್ ಸೈಟ್ ಮೂಲಕವೇ ಜೂನ್ 15ರಿಂದ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಪುರುಷರಿಗೆ ಬಿಎಂಟಿಸಿ ಬಸ್ ಅನ್ನು ಹೊರತು ಪಡಿಸಿ ಉಳಿದ ಮೂರು ಸರಕಾರಿ ಬಸ್ ನಲ್ಲಿಯೂ 50%ಶೇ. ಮೀಸಲಾತಿ ಇದ್ದು ಅವರು ಬಂದಾಗ ಸೀಟ್ ಬಿಟ್ಟು ಕೊಡಬೇಕಾಗುತ್ತದೆ.

ನಿಮ್ಮ ಪ್ರಯಾಣ ಉಚಿತ ಇದ್ದರೂ ಸಹ ನೀವು ಟಿಕೇಟ್ ಅನ್ನು ಕಡ್ಡಾಯವಾಗಿ ಪಡೆಯಲೇ ಬೇಕು. ಫ್ರೀ ವ್ಯವಸ್ಥೆ ಇದ್ದರೂ ಟಿಕೇಟ್ ಕಲೆಕ್ಷನ್ ಮೂಲಕ ನಮ್ಮ ಮಹಿಳೆಯರ ಪ್ರಯಾಣ ಎಷ್ಟು ಎಂದು ಅದರಲ್ಲಿ ತಿಳಿದು ತೆರಿಗೆ ಹಣ ಸಾರಿಗೆ ಇಲಾಖೆಗೆ ಕಟ್ಟಲಾಗುತ್ತದೆ. ನಿಮ್ಮ ಬಳಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ಚೆಕ್ಕಿಂಗ್ ಬಂದ ಸಂದರ್ಭ ದಂಡ ಕಟ್ಟಬೇಕಾಗುತ್ತದೆ.

ನೀವು ದೊಡ್ಡ ಲಗೇಜ್ ಅನ್ನು ಕ್ಯಾರಿ ಮಾಡಲು ಹಣ ನೀಡಲೇ ಬೇಕು ಅಂದರೆ ನಿಗಧಿತ ಪ್ರಮಾಣಕ್ಕಿಂತ ಅಧಿಕ ಲಗೇಜ್ ನೊಂದಿಗೆ ಪ್ರಯಾಣ ಮಾಡಿದರೆ ಅಂತಹ ಲಗೇಜ್ ಗೆ ಹಣ ನೀಡಲೇ ಬೇಕು ಅದು ಫ್ರೀ ಇರಲಾರದು. ಅಂದರೆ ನೀವು ಕೊಂಡೊಗುವ ವಸ್ತು ಅಥವಾ ಲಗೇಜ್ 30kg ಗಿಂತ ಮೇಲಿದ್ದರೆ ನೀವು ಅದಕ್ಕೆ ಟಿಕೇಟ್ ತೆಗೆದುಕೊಳ್ಳಿ.

ಎಲ್ಲಿವರೆಗೆ ಟಿಕೇಟ್ ತೆಗೆದುಕೊಂಡಿರುತ್ತೀರಿ ಅಲ್ಲಿ ವರೆಗೆ ಮಾತ್ರ ಪ್ರಯಾಣ ಮಾಡಬೇಕು ಅದೇ ಬಸ್ ನಲ್ಲಿ ಲಾಸ್ಟ್ ಸ್ಟಾಪ್ ವರೆಗೆ ಹೋಗುವಂತಿಲ್ಲ ಒಂದು ವೇಳೆ ಪ್ರಯಾಣ ಮಾಡಬೇಕಾಗಿ ಬಂದರೆ ಮತ್ತೊಂದು ಟಿಕೇಟ್ ಖರೀದಿ ಮಾಡಬೇಕು.

Post a Comment

Previous Post Next Post
CLOSE ADS
CLOSE ADS
×