IIT Dharwad Recruitment 2023: ಮಾಸಿಕ 35,000 ವೇತನದ ಹುದ್ದೆಗೆ ಕೂಡಲೇ ಅರ್ಜಿ ಹಾಕಿ

IIT Dharwad Recruitment 2023: ಮಾಸಿಕ 35,000 ವೇತನದ ಹುದ್ದೆಗೆ ಕೂಡಲೇ ಅರ್ಜಿ ಹಾಕಿ

 ಬೆಂಗಳೂರು, ಜೂನ್ 11: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡವು (IIT Dharwad) ತನ್ನಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಇದೇ ತಿಂಗಳ ಜೂನ್ 26 ರೊಳಗೆ ಅರ್ಜಿ ಸಲ್ಲಿಸುವಂತೆ ಸಂಸ್ಥೆ ತಿಳಿಸಿದೆ



ಐಐಟಿ ಧಾರವಾಡದಲ್ಲಿ 01 ಯಂಗ್ ಪ್ರೊಫೆಶನಲ್- II (ಐಟಿ) ಹುದ್ದೆ ಖಾಲಿ ಇದೆ. ಈ ಹುದ್ದೆ ಭತಿಗೆ ಮುಂದಾಗಿರುವ ಸಂಸ್ಥೆಗೆ ಅರ್ಜಿ ಸಲ್ಲಿಸುವ ಮೂಲಕ ಧಾರವಾಡದಲ್ಲೇ ಉದ್ಯೋಗ ಪಡೆದುಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅದಕ್ಕು ಮೊದಲು ಐಐಟಿ ಧಾರವಾಡದ ಅಧಿಸೂಚನೆ ಪೂರ್ಣ ಓದಿಕೊಂಡು ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆಗು ಮುನ್ನ ಖಾಲಿ ಹುದ್ದೆ ಮಾಹಿತಿ, ಅರ್ಜಿ ಸಲ್ಲಿಕೆ ವಿಳಾಸ ಸೇರಿದಂತೆ ಅಗತ್ಯ ಮಾಹಿತಿಯನ್ನು ಇಲ್ಲಿ ತಿಳಿಯಬಹುದು.


ಹುದ್ದೆಯ ಇತರೆ ವಿವರ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಧಾರವಾಡ ಸಂಸ್ಥೆಯಲ್ಲಿ ಒಂದು ಯಂಗ್ ಪ್ರೊಫೆಶನಲ್- II (ಐಟಿ) ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಆಸಕ್ತ ಅರ್ಹ ಅಭ್ಯರ್ಥಿಗಳು ಜೂನ್ 26ರೊಳಗೆ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ- ವೇತನದ ಮಾಹಿತಿ

ಐಐಟಿ ಧಾರವಾಡ ಸಂಸ್ಥೆ ಹೊರಡಿಸಿರುವ ನೇಮಕಾತಿ ಅಧಿಸೂಚನೆ ಅನ್ವಯ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಂಪ್ಯೂಟರ್ ಅಪ್ಲಿಕೇಶನ್/ಮಾಹಿತಿ ತಂತ್ರಜ್ಞಾನ/ಕಂಪ್ಯೂಟರ್ ಸೈನ್ಸ್/ಸಾಫ್ಟ್‌ವೇರ್ ಇಂಜಿನಿಯರಿಂಗ್/ಕಂಪ್ಯೂಟರ್ ಗ್ರಾಫಿಕ್ಸ್‌/ಆರ್ಟಿಫಿಶಿಯಲ್ ಇಂಜಿನಿಯರಿಂಗ್/ಆಪರೇಟಿಂಗ್ ಸಿಸ್ಟಮ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಕಡ್ಡಾಯವಾಗಿ ಮುಗಿಸಿರಬೇಕು. ಇಂತಹವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದಲ್ಲಿ ಅವರಿಗೆ ಮಾಸಿಕ 35,000 ರೂ. ವೇತನ ನಿಗದಿ ಮಾಡಲಾಗಿದೆ.

ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 2023ರ ಜೂನ್ 26ಕ್ಕೆ ಗರಿಷ್ಠ 32 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ. ಇನ್ನು ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಮೊದಲು ಅಭ್ಯರ್ಥಿಗಳಿಗೆ ಸ್ಕ್ರೀನಿಂಗ್ ಇರಲಿದೆ. ನಂತರ ಆನ್​ಲೈನ್ ಮೂಲಕವೇ ಪರೀಕ್ಷೆ ನಡೆಯಲಿದ್ದು, ಬಳಿಕ ನೇರ ಸಂದರ್ಶನ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುವುದು.


ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಅನುಭವ ಪಡೆದಿರಬೇಕು. ವೆಬ್-ಸೈಟ್, ಪೋರ್ಟಲ್ ಅಭಿವೃದ್ಧಿ ಮತ್ತು ನಿರ್ವಹಣೆ, MySQL ಮತ್ತು Java/C++/PHP/Python ಇನ್ನಿತರ ಅಪ್ಲಿಕೇಶನ್ ಅಭಿವೃದ್ಧಿಯಲ್ಲಿ ಅನುಭವವನ್ನು ಹೊಂದಿರಬೇಕು.

ಹೆಚ್ಚಿನ ಮಾಹಿತಿಗೆ/ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಐಐಟಿ ಧಾರವಾಡ ಅಧಿಕೃತ ವೆಬ್‌ಸೈಟ್‌ https://www.iitdh.ac.in/ ಗೆಭೇಟಿ ನೀಡಬಹುದು. ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಶ್ನೆಗೆ, ಅರ್ಜಿದಾರರು kedark@iitdh.ac.in ಗೆ ಇಮೇಲ್ ಕಳುಹಿಸಲು ಅವಕಾಶ ಇದೆ ಎಂದು ತಿಳಿಸಲಾಗಿದೆ

Post a Comment

Previous Post Next Post
CLOSE ADS
CLOSE ADS
×