200 ರೂಪಾಯಿಗಳ ನೋಟಿಗೆ (200 Rupee Note) ಸಂಬಂಧಪಟ್ಟ ಹಾಗೆ ಆರ್ ಬಿ ಐ ಹೊಸ ಅಪ್ಡೇಟ್ ನೀಡಿದೆ
ನಿಮ್ಮ ಬಳಿಯೂ ಇನ್ನೂರು ರೂಪಾಯಿ ನೋಟುಗಳು ಇದ್ರೆ ಈ ವಿಷಯವನ್ನು ತಿಳಿದುಕೊಳ್ಳಲೇಬೇಕು. ಈಗಾಗಲೇ 2000 ನೋಟುಗಳ ಬ್ಯಾನ್ ಹಲವರಿಗೆ ಸಮಸ್ಯೆ ಉಂಟುಮಾಡಿದೆ. ಹಾಗಾಗಿ 200 ರುಪಾಯಿಗಳ ನೋಟ್ ಗಳ ಬಗ್ಗೆ ಆರ್ ಬಿ ಐ ನೀಡಿರುವ ಬಿಗ್ ಅಪ್ಡೇಟ್ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಾ ನೋಡೋಣ.
2000 ಅಮಾನ್ಯೀಕರಣ ಮಾಡುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದೆ ಸೆಪ್ಟೆಂಬರ್ ವರೆಗೆ ಎರಡು ಸಾವಿರ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಜೊತೆಗೆ 200 ರೂಪಾಯಿ ನೋಟುಗಳು ಕೂಡ ಬ್ಯಾನ್ ಆಗುತ್ತದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾಗಿ ಇನ್ನೂರು ರೂಪಾಯಿ ನೋಟುಗಳನ್ನ ತೆಗೆದುಕೊಳ್ಳಲು ಜನ ಹಿಂದೆ ಮುಂದೆ ನೋಡುತ್ತಿದ್ದಾರೆ ಆದರೆ ಆರ್‌ಬಿಐ ಹೇಳುವಂತೆ 200 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡುವ ಯಾವುದೇ ಅಧಿಕೃತ ಮಾಹಿತಿಯು ಇಲ್ಲ.
ಮತ್ತೆ ಬರಲಿದೆಯಾ ಸಾವಿರ ರೂಪಾಯಿ ನೋಟುಗಳು?
2000 ರೂ. ನೋಟುಗಳನ್ನು ಬ್ಯಾನ್ ಮಾಡುತ್ತಿದ್ದಂತೆ ಸರ್ಕಾರ ಸಾವಿರ ರೂಪಾಯಿ ನೋಟುಗಳಿಗೆ ಚಲಾವಣೆಯ ನೀಡಲಿದ್ಯಾ ಎನ್ನುವ ಕುತೂಹಲ ಎಲ್ಲರನ್ನೂ ಇತ್ತು. ಕೆಲವು ಮಾಹಿತಿಯ ಪ್ರಕಾರ 2023ರ ಅಂತ್ಯದ ವೇಳೆಗೆ ಸಾವಿರ ರೂಪಾಯಿ ನೋಟುಗಳನ್ನು ಕೂಡ ಮುದ್ರಣ ಮಾಡಲಾಗುವುದು ಎಂದು ಹೇಳಲಾಗುತ್ತಿದೆ