Digital Ration card-ಡಿಜಿಟಲ್ ರೇಶನ್ ಕಾರ್ಡ ಡೌನ್ಲೋಡ್ ಮಾಡಿಕೊಳ್ಳಲು ಆಪ್ಲಿಕೇಶನ್ ಬಿಡುಗಡೆ

SVR Creations
0

ಪಡಿತರ ಚೀಟಿ ಹೊಂದಿರುವವರು ತಮ್ಮ ರೇಶನ್ ಕಾರ್ಡಿನ ಡಿಜಿಟಲ್ ಪ್ರತಿಯನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಕೇಂದ್ರ ಸರಕಾರವು ಮೇರಾ ರೇಷನ್ 2.0(ration card) ಎನ್ನುವ ಹೆಸರಿನ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.

ಇಂದು ಈ ಅಂಕಣದಲ್ಲಿ ಡಿಜಿಟಲ್ ರೇಶನ್ ಕಾರ್ಡ(Digital ration card) ಪ್ರಯೋಜನಗಳೇನು? ಇದನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದ್ದು, ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಡಿಜಿಟಲ್ ಇಂಡಿಯಾ(Digital india) ಯೋಜನೆಯಡಿಯಲ್ಲಿ ಕೇಂದ್ರ ಸರಕಾರವು ಅನೇಕ ನೂತನ ಕಾರ್ಯಕ್ರಮಗಳನ್ನು ಅನುಷ್ಥಾನ ಮಾಡುತ್ತಿದ್ದು, ಸರಕಾರದ ಪ್ರಯೋಜನವನ್ನು ಪಡೆಯಲು ಸಾರ್ವಜನಿಕರಿಗೆ ಸರಳ ವ್ಯವಸ್ಥೆಯನ್ನು ರೂಪಿಸಿಕೊಡಲು ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ದೇಸೆಯಲ್ಲಿ ರೇಶನ್ ಕಾರ್ಡನ ಎಲ್ಲಾ ರೀತಿಯ ಡೇಟಾವನ್ನು ಆನ್ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲು ಈ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಪಡಿಸಲಾಗಿದೆ.

Mera ration card application-ಮೇರಾ ರೇಶನ್ ಕಾರ್ಡ ಅಪ್ಲಿಕೇಶನ್ ಕುರಿತು ವಿವರಣೆ:

ಡಿಜಿಟಲ್ ಪಡಿತರ ಚೀಟಿ ಎಲೆಕ್ಟ್ರಾನಿಕ್ ಕಾರ್ಡ್ ಆಗಿದೆ. ಇದು ಪಡಿತರ ಚೀಟಿಯ ಡಿಜಿಟಲ್ ಆವೃತ್ತಿಯಾಗಿದೆ. ಇದನ್ನು ಡೌನ್‌ಲೋಡ್ ಮಾಡುವುದರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಆಹಾರ ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯ ನೆರವಾಗುತ್ತದೆ. ಇದನ್ನು ಆನ್‌ಲೈನ್ ಅಥವಾ ಮೇರಾ ರೇಷನ್ 2.0 ಅಪ್ಲಿಕೇಶನ್ ಮೂಲಕ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಡಿಜಿಟಲ್ ರೇಷನ್ ಕಾರ್ಡ ಸಾರ್ವಜನಿಕ ವಿತರಣಾ ವ್ಯವಸ್ಥೆ (pds) ಯೋಜನೆಯಡಿಯಲ್ಲಿ ಸಹಾಯಧನದಲ್ಲಿ ಆಹಾರ ಧಾನ್ಯಗಳನ್ನು ಗ್ರಾಹಕರು ಸ್ವೀಕರಿಸಲು ಫಲಾನುಭವಿಗಳಿಗೆ ನೆರವಾಗಲು ರೂಪಿಸಿರುವ ಒಂದು ಎಲೆಕ್ಟ್ರಾನಿಕ್ ದಾಖಲೆಯಾಗಿದ್ದು. ಇದನ್ನು ಆನ್‌ಲೈನ್ ಅಥವಾ ಮೇರಾ ರೇಷನ್ 2.0 ಅಪ್ಲಿಕೇಶನ್(Mera ration card app) ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಬಹುದು.

Digital Ration card Download-ಡಿಜಿಟಲ್ ರೇಶನ್ ಕಾರ್ಡ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:

ಪಡಿತರ ಚೀಟಿ ಹೊಂದಿರುವ ಗ್ರಾಹಕರು ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ನಿಮ್ಮ ಮೊಬೈಲ್ ನಲ್ಲೇ ಕ್ಷಣಾರ್ಧದಲ್ಲೇ ಒಂದೆರಡು ಕ್ಲಿಕ್ ನಲ್ಲಿ ರೇಶನ್ ಕಾರ್ಡ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Step-1: ಪ್ರಥಮದಲ್ಲಿ Download Digital Ration card ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಮೊದಲು ನಿಮ್ಮ ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ ಕೋಡ್ ನಮೂದಿಸಿ ಒಟಿಪಿಯನ್ನು ಹಾಕಿ ಪರೀಶಿಲಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಪರೀಶಿಲಿಸು ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರ ಸಲ್ಲಿಸಿ ಈ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಅಗಬೇಕು. ಬಳಿಕ ಇಲ್ಲಿ ನಿಮ್ಮ ಡಿಜಿಟಲ್ ರೇಶನ್ ಕಾರ್ಡ ಪ್ರತಿ ತೋರಿಸುತ್ತದೆ.

Digital Ration card benefits-ಡಿಜಿಟಲ್ ರೇಷನ್ ಕಾರ್ಡ ಬಳಕೆಯ ಪ್ರಯೋಜನಗಳ ಮಾಹಿತಿ ಹೀಗಿದೆ:

ಒಮ್ಮೆ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಡಿಜಿಟಲ್ ರೇಶನ್ ಕಾರ್ಡ ಅನ್ನು ನಿಮ್ಮ ಮೊಬೈಲ್ ನಲ್ಲಿ ಪಡೆದ ಬಳಿಕ ಇದನ್ನು ನೀವು ಎಲ್ಲಿಯಾದರೂ, ಯಾವುದೇ ಸಮಯಲ್ಲಿಯು ಸಹ ಬಳಕೆ ಮಾಡಬಹುದು.

ಭೌತಿಕ ರೇಶನ್ ಕಾರ್ಡ್ ರೀತಿ ಈ ಕಾರ್ಡ ಅನ್ನು ಬಳಕೆ ಮಾಡಿವುದರಿಂದ ಇದರಲ್ಲಿ ಕಳೆದುಕೊಳ್ಳುವ ಭಯವಿಲ್ಲ.

ಎಲ್ಲ ದಾಖಲೆಗಳೂ ಡಿಜಿಟಲ್ ಆಗಿರುವುದರಿಂದ ವಂಚನೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ರೇಶನ್ ಕಾರ್ಡ ಮರೆತು ಸರಕಾರಿ ಕಚೇರಿ ಭೇಟಿ ಮಾಡಿದಾಗ ಈ ಕಾರ್ಡ ನೆರವಾಗುತ್ತದೆ.

e-Ration Card-ಇ-ರೇಶನ್ ಕಾರ್ಡ ಪಡೆಯುವ ವಿಧಾನ:

ಇಲ್ಲಿ ಕ್ಲಿಕ್ Ration card detail ಮಾಡಿ ರಾಜ್ಯ ಸರಕಾರದ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ನಿಮ್ಮ ಪಡಿತರ ಚೀಟಿಯ ಕುರಿತು ಸಂಪೂರ್ಣ ಮಾಹಿತಿ ಮತ್ತು ಇ-ರೇಶನ್ ಕಾರ್ಡ ಅನ್ನು ಸಹ ಡೌನ್ಲೋಡ್ ಮಾಡಿಕೊಳ್ಳಬಹುದು.

Post a Comment

0 Comments
* Please Don't Spam Here. All the Comments are Reviewed by Admin.
Post a Comment (0)

#buttons=(Accept !) #days=(20)

Our website uses cookies to enhance your experience. Learn More
Accept !
To Top