Steps to get PAN card with QR code: ಕ್ಯುಆರ್ ಕೋಡ್ ಇರುವ ಹೊಸ ಪ್ಯಾನ್ ಕಾರ್ಡ್ ಅನ್ನು ಈಗ ನೀಡಲಾಗುತ್ತಿದೆ. ಹಳೆಯ ಪ್ಯಾನ್ ಕಾರ್ಡ್ ಹೊಂದಿರುವವರು ಹೊಸದನ್ನು ಪಡೆಯಬೇಕು. ಪ್ಯಾನ್ ಕಾರ್ಡ್ ಡೂಪ್ಲಿಕೇಟ್ ಮಾಡಿ ದುರ್ಬಳಸುವುದನ್ನು ತಡೆಯಲು ಕ್ಯೂಆರ್ ಕೋಡ್ ಫೀಚರ್ ನೆರವಾಗುತ್ತದೆ. ಆನ್ಲೈನ್ನಲ್ಲಿ ಸುಲಭವಾಗಿ ಹೊಸ ಪ್ಯಾನ್ ಕಾರ್ಡ್ ಪಡೆಯಬಹುದು.
ಹೊಸ ಪ್ಯಾನ್ ಕಾರ್ಡ್ನಲ್ಲಿ ಕ್ಯುಆರ್ ಕೋಡ್ ಮಹತ್ವವೇನು? ಆನ್ಲೈನಲ್ಲಿ 50 ರೂ ಶುಲ್ಕದೊಂದಿಗೆ ಕಾರ್ಡ್ ಪಡೆಯುವ ಕ್ರಮ
ಪ್ಯಾನ್ ಕಾರ್ಡ್ನಲ್ಲಿ ಕ್ಯೂಆರ್ ಕೋಡ್
ನವದೆಹಲಿ, ಡಿಸೆಂಬರ್ 11: ಪರ್ಮನೆಂಟ್ ಅಕೌಂಟ್ ನಂಬರ್ನ ವ್ಯವಸ್ಥೆಯಲ್ಲಿ ಸರ್ಕಾರ ಒಂದಿಷ್ಟು ಮಾರ್ಪಾಡು ತಂದಿದೆ. ಕ್ಯೂಆರ್ ಕೋಡ್ ಫೀಚರ್ ಇರುವ ಹೊಸ ಪ್ಯಾನ್ ಕಾರ್ಡ್ ಅನ್ನು ವಿತರಿಸಲಾಗುತ್ತಿದೆ. ಈಗ ಯಾವುದೆ ಹೊಸ ಪ್ಯಾನ್ ಕಾರ್ಡ್ ಮಾಡಿಸಿದರೂ ಕ್ಯೂಆರ್ ಕೋಡ್ ಇರುವ ಹೊಸ ಮಾದರಿಯ ಪ್ಯಾನ್ ಕಾರ್ಡ್ ಕೊಡಲಾಗುತ್ತಿದೆ. ಹಳೆಯ ಪ್ಯಾನ್ ಕಾರ್ಡ್ ಹೊಂದಿರುವವರು ಸುಲಭವಾಗಿ ಹೊಸ ಅಪ್ಡೇಟೆಡ್ ಪ್ಯಾನ್ ಕಾರ್ಡ್ ಪಡೆಯಬಹುದು. ಹೊಸ ಪ್ಯಾನ್ ಕಾರ್ಡ್ ಪಡೆದರೆ ನಿಮ್ಮ ಹಳೆಯ ಪ್ಯಾನ್ ನಂಬರ್ ಬದಲಾಗುವುದಿಲ್ಲ. ಅದೇ ನಂಬರ್ ಮುಂದುವರಿಯುತ್ತದೆ.
ಪ್ಯಾನ್ ಕಾರ್ಡ್ನಲ್ಲಿ ಕ್ಯೂಆರ್ ಕೋಡ್ ಯಾಕೆ ಇದೆ?
ಹೊಸ ಪ್ಯಾನ್ ಕಾರ್ಡ್ನಲ್ಲಿ ಕ್ಯುಆರ್ ಕೋಡ್ನ ಫೀಚರ್ ಇದೆ. ಇದು ಬಹಳ ಮುಖ್ಯವಾದ ಫೀಚರ್. ಪ್ಯಾನ್ ಕಾರ್ಡ್ ದುರುಪಯೋಗವಾಗುವುದನ್ನು ತಡೆಯಲು ಇದು ಮುಖ್ಯ. ವಂಚಕರು ಯಾವುದಾದರೂ ಪ್ಯಾನ್ ಕಾರ್ಡ್ನಲ್ಲಿ ಹೆಸರು, ಫೋಟೋವನ್ನು ಬದಲಾಯಿಸಿ ಅದನ್ನು ಡೂಪ್ಲಿಕೇಟ್ ಮಾಡಿ, ಹಣಕಾಸು ವಂಚನೆ ಕಾರ್ಯಗಳಿಗೆ ಬಳಸುವುದುಂಟು. ಕ್ಯೂಆರ್ ಕೋಡ್ ಫೀಚರ್ನಿಂದ ಈ ವಂಚನೆಯನ್ನು ತಡೆಯಲು ಸಾಧ್ಯ.
ಕ್ಯೂಆರ್ ಕೋಡ್ನಲ್ಲಿ ಪ್ಯಾನ್ ಕಾರ್ಡ್ದಾರರ ವೈಯಕ್ತಿಕ ದತ್ತಾಂಶವನ್ನು ಎನ್ಕ್ರಿಪ್ಟ್ ಮಾಡಿರಲಾಗುತ್ತದೆ. ಆಥರೈಸ್ ಆಗಿರುವ ವ್ಯಕ್ತಿಗಳು ನಿರ್ದಿಷ್ಟ ಸಾಫ್ಟ್ವೇರ್ ಬಳಸಿ ಕ್ಯೂಆರ್ ಕೋಡ್ನಲ್ಲಿನ ಮಾಹಿತಿಯನ್ನು ಪಡೆಯಬಹುದು.
ಹಾಗೆಯೇ, ಸಂಬಂಧ ಪಟ್ಟ ಅಧಿಕಾರಿಗಳು ಪ್ಯಾನ್ ಕಾರ್ಡ್ನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಬಹಳ ಬೇಗ ಅಗತ್ಯ ಮಾಹಿತಿಯನ್ನು ಪಡೆಯಬಹುದು. ಇದರಿಂದ ವೆರಿಫಿಕೇಶನ್ ಇತ್ಯಾದಿ ಕೆಲಸಗಳು ಬೇಗ ನಡೆಯುತ್ತವೆ.
ಹೊಸ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
ಆನ್ಲೈನ್ನಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಬಹುದು. ಪ್ರೋಟಿಯಾನ್ (ಎನ್ಎಸ್ಡಿಎಲ್) ಮತ್ತು ಯುಟಿಐ ಐಟಿಎಸ್ಎಲ್ ಎಂಬ ಎರಡು ಏಜೆನ್ಸಿಗಳು ಪ್ಯಾನ್ ಕಾರ್ಡ್ ನೀಡುತ್ತವೆ. ನಿಮ್ಮ ಹಳೆಯ ಪ್ಯಾನ್ ಕಾರ್ಡ್ ಅನ್ನು ಯಾವ ಏಜೆನ್ಸಿ ವಿತರಿಸಿದೆಯೋ ಅಲ್ಲಿಂದಲೇ ನೀವು ಹೊಸ ಪ್ಯಾನ್ ಕಾರ್ಡ್ ಪಡೆಯಬೇಕು. ನಿಮ್ಮ ಪ್ಯಾನ್ ಕಾರ್ಡ್ನ ಹಿಂಬದಿಯಲ್ಲಿ ಏಜೆನ್ಸಿಯ ಹೆಸರು ಇರುವುದನ್ನು ನೀವು ಗಮನಿಸಬಹುದು.
ಪ್ರೊಟಿಯಾನ್ ಏಜೆನ್ಸಿಯಿಂದ ಪ್ಯಾನ್ ಕಾರ್ಡ್ ಪಡೆಯುವುದಾದರೆ ಈ ಲಿಂಕ್ ಕ್ಲಿಕ್ ಮಾಡಿ: https://www.onlineservices.nsdl.com/paam/ReprintEPan.html
ಯುಪಿಐ ಐಟಿಎಸ್ಎಲ್ ಏಜೆನ್ಸಿಯ ಲಿಂಕ್: https://www.pan.utiitsl.com/reprint.html
ಇಲ್ಲಿ ನೀವು ನಿಮ್ಮ ಪ್ಯಾನ್ ನಂಬರ್, ಜನ್ಮದಿನಾಂಕ, ಮೊಬೈಲ್ ನಂಬರ್, ಇಮೇಲ್ ವಿಳಾಸ ಇತ್ಯಾದಿ ವಿವರಗಳನ್ನು ತುಂಬಿಸಬೇಕು. 50 ರೂ ಶುಲ್ಕ ಪಾವತಿಸಬೇಕಾಗುತ್ತದೆ.
ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಕೆಲವೇ ನಿಮಿಷಗಳ ಅಂತರದಲ್ಲಿ ನಿಮ್ಮ ಇಮೇಲ್ ವಿಳಾಸಕ್ಕೆ ಹೊಸ ಪ್ಯಾನ್ ಕಾರ್ಡ್ನ ಸಾಫ್ಟ್ ಕಾಪಿ ಬಂದಿರುತ್ತದೆ. 15-20 ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ಭೌತಿಕ ಪ್ಯಾನ್ ಕಾರ್ಡ್ ಅನ್ನು ಪೋಸ್ಟ್ ಮೂಲಕ ಕಳುಹಿಸಿಕೊಡಲಾಗುತ್ತದೆ.