PM Kisan Pension Scheme : ರೈತ ಹಾಗು ರೈತನ ಪತ್ನಿಗೆ ತಿಂಗಳಿಗೆ 3000/- ಪೆನ್ಶನ್

PM Kisan Pension Scheme : ರೈತ ಹಾಗು ರೈತನ ಪತ್ನಿಗೆ ತಿಂಗಳಿಗೆ 3000/- ಪೆನ್ಶನ್

PM Kisan Pension Scheme



ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

PM Kisan Pension Scheme : ನಮಸ್ಕಾರ ಸ್ನೇಹಿತರೇ, ನಿಮಗೆ ಬಂಪರ್ ಸಿಹಿಸುದ್ಧಿ. ರೈತ ಹಾಗು ರೈತನ ಪತ್ನಿಗೆ ಪ್ರತೀ ತಿಂಗಳಿಗೆ ಮೂರು ಸಾವಿರ ರೂಪಾಯಿ ಹಣವನ್ನ ಪಡೆಯಬಹುದಾಗಿದೆ. ರೈತರ ಆರ್ಥಿಕ ಸಬಲೀಕರಣದ ಉದ್ದೇಶದಿಂದಾಗಿ, ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ನೋಂದಣಿಗೊಳ್ಳುವ ರೈತ ಫಲಾನುಭವಿಗಳು ಈ ಪಿಂಚಣಿಯನ್ನ ಪಡೆಯಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.


ಹೌದು, ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎನ್ನುವುದು ಸರ್ಕಾರದ ಬೆಂಬಲಿತ ಯೋಜನೆಯಾಗಿದೆ. ವೃದ್ಧಾಪ್ಯದಲ್ಲಿ ರೈತರು ಹಣಕಾಸಿನ ಅವಶ್ಯಕತೆ ಪೂರೈಸಲು, ಸಹಾಯ ಮಾಡಲು ಈ ಯೋಜನೆಯನ್ನ ಪ್ರಾರಂಭಿಸಿದರು. ಈ ಯೋಜನೆಯ ಅಡಿಯಲ್ಲಿ ಸರ್ಕಾರ, 60 ವರ್ಷ ವಯಸ್ಸಿನ ನಂತರ ರೈತರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿಗಳ ಕನಿಷ್ಠ ಖಾತರಿ ಪಿಂಚಣಿ ಒದಗಿಸುತ್ತದೆ. ಪಿಂಚಣಿದಾರರು ಮರಣ ಹೊಂದಿದರೆ, ಸರ್ಕಾರ ಪಿಂಚಣಿಯ 50 ರಷ್ಟು ಕುಟುಂಬ ಪಿಂಚಣಿಯಾಗಿ ಖಾತೆ ಹಾಕುತ್ತದೆ. ಕುಟುಂಬ ಪಿಂಚಣಿಯು ಸಂಗಾತಿಗೆ ಮಾತ್ರ ನೀಡುತ್ತದೆ. ಹಾಗು ಅದನ್ನು ಬೇರೆ ಯಾರು ಪಡೆಯಲು ಸಾಧ್ಯವಿಲ್ಲ.

ಹದಿನೆಂಟರಿಂದ ನಲ್ವತ್ತು ವಯಸ್ಸಿನ ಎರಡು ಎಕ್ಟೇರ್ ವರೆಗೆ ಸಾಗುವಳಿ ಮಾಡಬಹುದಾದ ಭೂ ಹಿಡುವಳಿ ಹೊಂದಿರುವ ಎಲ್ಲಾ ಸಣ್ಣ ಮತ್ತು ಅತೀ ಸಣ್ಣ ರೈತರು ಯೋಜನೆಯ ಅಡಿಯಲ್ಲಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಹದಿನೆಂಟರಿಂದ ನಲ್ವತ್ತು ವರ್ಷದೊಳಗಿನವರು ಅರವತ್ತು ವರ್ಷ ವಯಸ್ಸಿನವರೆಗೆ ಮಾಸಿಕ ೫೦ ೨೦೦ ರೂಪಾಯಿಯನ್ನ ಪಾವತಿಸಿದ ನಂತರ ಸರ್ಕಾರವು ಮಾಸಿಕ 3,000/- ರೂಪಾಯಿ ಪಿಂಚಣಿಯನ್ನ ನೀಡುತ್ತದೆ. ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (Gram One) ಕ್ಕೆ ಭೇಟಿ ನೀಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ನಂಬರ್, ಉಳಿತಾಯ ಖಾತೆ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳು ಬೇಕಾಗುತ್ತವೆ. ಈ ಕೇಂದ್ರಗಳಲ್ಲಿ ನೀವು ಅರ್ಜಿಯನ್ನ ಸಲ್ಲಿಸಬಹುದು.



Post a Comment

Previous Post Next Post
CLOSE ADS
CLOSE ADS
×