JNVST Admission 2024: ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ..ಇಲ್ಲಿದೆ ಸಂಪೂರ್ಣ ಮಾಹಿತಿ

JNVST Admission 2024: ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ..ಇಲ್ಲಿದೆ ಸಂಪೂರ್ಣ ಮಾಹಿತಿ

 ನವೋದಯ ವಿದ್ಯಾಲಯ ಸಮಿತಿ, ನವೋದಯ ವಿದ್ಯಾಲಯಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.



ನವೋದಯ ವಿದ್ಯಾಲಯ ಸಮಿತಿ, ನವೋದಯ ವಿದ್ಯಾಲಯಗಳಲ್ಲಿ 2024-25ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ

ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅಧಿಕೃತ ವೆಬ್‌ಸೈಟ್ https://navodaya.gov.in/ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜೂನ್ 20,2023 ರಿಂದ ದಿನಾಂಕ 10-08-2023ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಅರ್ಜಿ ಸಲ್ಲಿಸುವ ಮಗುವಿನ ಆಧಾರ್ ಕಾರ್ಡ್‌- ಈ ಆಧಾರ್‌ಗೆ ನಿಮ್ಮ ಚಾಲ್ತಿಯಲ್ಲಿರುವ ಪೋನ್ ನಂಬರ್ ಲಿಂಕ್ ಇರಬೇಕು. ಮತ್ತು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆ ಪೋನ್ ತೆಗೆದುಕೊಂಡು ಬರಬೇಕು. ಆ ನಂಬರ್‌ಗೆ ಒಟಿಪಿ ಬರುತ್ತದೆ. ಒಂದು ವೇಳೆ ಪೋನ್ ನಂಬರ್ ಲಿಂಕ್ ಇಲ್ಲದೇ ಇದ್ದಲ್ಲಿ ತಹಶೀಲ್ದಾರ್ ನೀಡುವ ವಾಸಸ್ಥಳ ಪತ್ರವನ್ನು ತೆಗೆದುಕೊಂಡು ಬರಬೇಕು.

ಅರ್ಜಿಯು ಆಧಾರ್ ಮೂಲಕ ಮಾಹಿತಿಯಿಂದ ಸಲ್ಲಿಕೆಯಾಗುವುದರಿಂದ ಆಧಾರ್ ಕಾರ್ಡ್‌ನಲ್ಲಿ ಮಗುವಿನ ಮಾಹಿತಿಗಳಾದ ಮಗುವಿನ ಹೆಸರು, ತಂದೆಯ ಹೆಸರು, ಜನ್ಮದಿನಾಂಕ, ಲಿಂಗ ಮತ್ತು ವಾಸಸ್ಥಳ ಮಾಹಿತಿಯನ್ನು ಶಾಲಾ ರೆಜಿಸ್ಟರ್‌ನಲ್ಲಿ ಇರುವಂತೆ ನಮೂದಿಸಬೇಕು. ಒಂದು ವೇಳೆ ಆಧಾರ್‌ನಲ್ಲಿ ಶಾಲಾ ರೆಜಿಸ್ಟರ್ ಪ್ರಕಾರ ತಾಳೆಯಾಗದಿದ್ದಲ್ಲಿ ಮಗುವಿನ ಆಧಾರ್‌ ಮಾಹಿತಿಯನ್ನು ಕೂಡಲೇ ಸರಿ ಮಾಡಿಸಿಕೊಳ್ಳಬೇಕು.

ಮಗುವಿನ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ.

ವಿದ್ಯಾರ್ಥಿಯು ಪ್ರಸ್ತುತ ಐದನೇ ತರಗತಿಯಲ್ಲಿ ಓದುತ್ತಿರುವ ಕುರಿತು ಶಾಲೆಯವರಿಂದ ಪ್ರಮಾಣ ಪತ್ರ.

ಮುಖ್ಯ ಸೂಚನೆ

ಅರ್ಜಿ ಸಲ್ಲಿಸುವಾಗ ಅತ್ಯಂತ ಎಚ್ಚರಿಕೆಯಿಂದ ಅರ್ಜಿಯನ್ನು ಸಲ್ಲಿಸಬೇಕು. ತಪ್ಪಾಗಿ ಅರ್ಜಿ ಸಲ್ಲಿಸಿದರೆ ಅರ್ಜಿ ತಿದ್ದುಪಡಿಗೆ ಯಾವುದೇ ಅವಕಾಶ ಇರುವುದಿಲ್ಲ.

ಅರ್ಜಿಯನ್ನು ಸರಿಯಾಗಿ ತುಂಬದೇ ಮತ್ತು ಮಾಹಿತಿಯನ್ನು ಸರಿಯಾಗಿ ನೀಡದೇ ಇದ್ದಲ್ಲಿ, ಇದಕ್ಕೆ ಸಂಪೂರ್ಣ ಹೊಣೆಗಾರರು ಪಾಲಕರು ಮತ್ತು ಶಾಲೆಯವರು ಆಗಿರುತ್ತಾರೆ.

ಪರೀಕ್ಷೆಯನ್ನು ಮಗುವು ಯಾವ ಭಾಷೆಯಲ್ಲಿ ಬರೆಯುತ್ತದೆ ಎಂಬುದನ್ನು ಮೊದಲ ಖಾತ್ರಿ ಪಡಿಸಿಕೊಳ್ಳಬೇಕು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ - 20-06-2023.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 10-08-2023.

ಪರಿಕ್ಷಾ ದಿನಾಂಕ - ನಂತರ ಪ್ರಕಟಿಸಲಾಗುವುದು.

ಪ್ರವೇಶ ಪರೀಕ್ಷೆಯನ್ನು ಒಟ್ಟು 100 ಅಂಕಗಳಿಗೆ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯು ಮೂರು ವಿಭಾಗಗಳಿಂದ 80 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ವಸ್ತುನಿಷ್ಠ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯನ್ನು ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಮತ್ತು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬಹುದು. ಮತ್ತು ಪರೀಕ್ಷೆಯ ಅವಧಿಯು 2 ಗಂಟೆಗಳಿರುತ್ತದೆ. ನಕಾರಾತ್ಮಕ ಅಂಕಗಳಿರುವುದಿಲ್ಲ.


ಹೇಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ವೇಬ್‌ಸೈಟ್https://navodaya.gov.in/ ಗೆ ಭೇಟಿ ನೀಡಿ.


Post a Comment

Previous Post Next Post
CLOSE ADS
CLOSE ADS
×