ಕರ್ನಾಟಕದ ಕಲ್ಲಿಯಲ್ಲಿರುವ ಮೊರಾರ್ಜಿ ದೇಸಾಯಿ ವಿಜ್ಞಾನ ಪಿಯು ಕಾಲೇಜಿನಲ್ಲಿ ಅಗತ್ಯ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ, ಇಂಗ್ಲಿಷ್, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ವಿಷಯಗಳಲ್ಲಿ ಎಂಎ, ಎಂಎಸ್ಸಿ, ಬಿ.ಇಡಿ ಪಾಸಾದವರು ಅರ್ಜಿ ಹಾಕಿರಿ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಕಾರ್ಯನಿರ್ವಹಿಸುವ, ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜು, ಕಲ್ಲಿಯಲ್ಲಿ ಅಗತ್ಯ ಇರುವ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚಿಸಲಾಗಿದೆ. ಆಸಕ್ತರು ಅರ್ಹತೆ ಹೊಂದಿದ್ದಲ್ಲಿ ಅರ್ಜಿ ಹಾಕಿರಿ.
ಅತಿಥಿ ಉಪನ್ಯಾಸಕರ ವಿವರ
ಕನ್ನಡ ಉಪನ್ಯಾಸಕರು : 1
ಇಂಗ್ಲಿಷ್ ಉಪನ್ಯಾಸಕರು : 1
ಭೌತಶಾಸ್ತ್ರ ಉಪನ್ಯಾಸಕರು : 1
ರಸಾಯನ ಶಾಸ್ತ್ರ ಉಪನ್ಯಾಸಕರು : 1
ಜೀವಶಾಸ್ತ್ರ ಉಪನ್ಯಾಸಕರು : 1
ವಿದ್ಯಾರ್ಹತೆ
ಕನ್ನಡ ಉಪನ್ಯಾಸಕರು : ಎಂಎ ಕನ್ನಡ, ಬಿ.ಇಡಿ
ಇಂಗ್ಲಿಷ್ ಉಪನ್ಯಾಸಕರು : ಎಂಎ ಇನ್ ಇಂಗ್ಲಿಷ್, ಬಿ.ಇಡಿ.
ಭೌತಶಾಸ್ತ್ರ ಉಪನ್ಯಾಸಕರು : ಎಂಎಸ್ಸಿ (ಬಿ.ಇಡಿ)
ರಸಾಯನ ಶಾಸ್ತ್ರ ಉಪನ್ಯಾಸಕರು : ಎಂಎಸ್ಸಿ, ಬಿ.ಇಡಿ.
ಜೀವಶಾಸ್ತ್ರ ಉಪನ್ಯಾಸಕರು : ಎಂಎಸ್ಸಿ, ಬಿ.ಇಡಿ
ಅತಿಥಿ ಉಪನ್ಯಾಸಕರಿಗೆ ಮಾಸಿಕ ಸಂಭಾವನೆ : Rs.18,150.
ಇತರೆ ಅರ್ಹತೆ :
ಟಿಇಟಿ / ಎಸ್‌ಎಲ್‌ಇಟಿ ಉತ್ತೀರ್ಣರಾಗಿರುವ, ಸ್ಥಳೀಯ ಮತ್ತು ಅನುಭವಿ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ
ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ :
8050662432
ಆಯ್ಕೆ ವಿಧಾನ :
ವಿದ್ಯಾರ್ಹತೆ ಅಂಕಗಳು / ಟಿಇಟಿ ಹಾಗೂ ಎಸ್‌ಎಲ್‌ಇಟಿ ಅಂಕಗಳು / ಕಾರ್ಯಾನುಭವ ಸೇರಿ ಈ ಮೂರನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆ / ಮಾಹಿತಿಗಳು
ಹೆಸರು, ಮೊಬೈಲ್ ನಂಬರ್, ಇ-ಮೇಲ್ ವಿಳಾಸ, ವೈಯಕ್ತಿಕ ಮಾಹಿತಿಗಳು, ಉಪನ್ಯಾಸಕರ ಹುದ್ದೆಗೆ ನಿಗಧಿತ ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವ ದಾಖಲೆಗಳು.