ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ 806 ಹುದ್ದೆ ಭರ್ತಿ: ಅರ್ಜಿ ಆಹ್ವಾನ

ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ 806 ಹುದ್ದೆ ಭರ್ತಿ: ಅರ್ಜಿ ಆಹ್ವಾನ

 ರಾಷ್ಟ್ರದಾದ್ಯಂತ ಖಾಲಿ ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಭರ್ತಿಗೆ ಐಬಿಪಿಎಸ್ ಇತ್ತೀಚೆಗೆ ಅಧಿಸೂಚಿಸಿದೆ. ಈ ಹುದ್ದೆಗಳ ಪೈಕಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ 806 ಹುದ್ದೆಗಳಿವೆ. ಅರ್ಜಿ ಸಲ್ಲಿಸಲು ಜೂನ್ 21 ಕೊನೆ ದಿನವಾಗಿದೆ. ಆಸಕ್ತರು ಹೆಚ್ಚಿನ ವಿವರಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.



ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಇತ್ತೀಚೆಗೆ ದೇಶದಾದ್ಯಂತದ ರೀಜನಲ್ ರೂರಲ್ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 8 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿ, ಅರ್ಜಿ ಅಹ್ವಾನಿಸಿದೆ. ಒಟ್ಟು 8612 ಹುದ್ದೆಗಳ ಪೈಕಿ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಹಾಗೂ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗಳಲ್ಲಿ 806 ಹುದ್ದೆಗಳಿವೆ. ಈ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ

ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಹುದ್ದೆಗಳ ಸಂಖ್ಯೆ : 600

ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಹುದ್ದೆಗಳ ಸಂಖ್ಯೆ : 206

ಎರಡು ಬ್ಯಾಂಕ್‌ಗಳಿಂದ ಸೇರಿ ಆಫೀಸ್ ಅಸಿಸ್ಟಂಟ್ 450 ಹುದ್ದೆಗಳು, ಆಫೀಸರ್ ಸ್ಕೇಲ್-1 350 ಹುದ್ದೆಗಳು, ಲಾ ಆಫೀಸರ್ 4 ಹುದ್ದೆ, ಸಿಎ 2 ಹುದ್ದೆ ಇವೆ.

ಅರ್ಜಿ ಸಲ್ಲಿಸಲು ನಿಗಧಿತ ದಿನಾಂಕಗಳು

ಆನ್‌ಲೈನ್‌ ಅರ್ಜಿಗೆ ಆರಂಭಿಕ ದಿನಾಂಕ: 01-06-2023

ಆನ್‌ಲೈನ್ ಅರ್ಜಿಗೆ ಕೊನೆ ದಿನಾಂಕ : 21-06-2023

ಪರೀಕ್ಷೆ ಪೂರ್ವಭಾವಿ ತರಬೇತಿ ದಿನಾಂಕ : ಜುಲೈ 17-22, 2023.

ಅಪ್ಲಿಕೇಶನ್‌ ಶುಲ್ಕ : ಎಸ್‌ಸಿ / ಎಸ್‌ಟಿ / PWD ಅಭ್ಯರ್ಥಿಗಳಿಗೆ ರೂ.175, ಇತರೆ ಅಭ್ಯರ್ಥಿಗಳಿಗೆ ರೂ.850.

ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ : ಆಗಸ್ಟ್‌ 2023

ಆನ್‌ಲೈನ್‌ ಪ್ರಿಲಿಮ್ಸ್‌ ಎಕ್ಸಾಮ್ ಫಲಿತಾಂಶ : ಆಗಸ್ಟ್‌ / ಸೆಪ್ಟೆಂಬರ್, 2023

ಮೇನ್ಸ್‌ ಪರೀಕ್ಷೆ ದಿನಾಂಕ : ಸೆಪ್ಟೆಂಬರ್ 2023

ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್‌ : https://www.ibps.in/

ವಿದ್ಯಾರ್ಹತೆ

ಆಫೀಸ್ ಅಸಿಸ್ಟಂಟ್ / ಆಫೀಸರ್ ಸ್ಕೇಲ್‌-1 ಹುದ್ದೆಗೆ ಸ್ಥಳೀಯ ಭಾಷೆ ತಿಳಿದಿರಬೇಕು. ಕಂಪ್ಯೂಟರ್ ಬಳಕೆ ಅರಿವು ಇರಬೇಕು. ಯಾವುದೇ ಪದವಿ ಪಾಸ್ ಮಾಡಿರಬೇಕು.


ಆಫೀಸರ್ ಸ್ಕೇಲ್-2 ಹುದ್ದೆಗೆ ಪದವಿ ಜತೆಗೆ ಯಾವುದೇ ಬ್ಯಾಂಕ್‌ಗಳಲ್ಲಿ 2 ವರ್ಷ ಕಾರ್ಯಾನುಭವ ಹೊಂದಿರಬೇಕು.

ವಯಸ್ಸಿನ ಅರ್ಹತೆಗಳು

ಆಫೀಸ್ ಅಸಿಸ್ಟಂಟ್ : ಕನಿಷ್ಠ 18 ರಿಂದ ಗರಿಷ್ಠ 28 ವರ್ಷ ಮೀರಿರಬಾರದು.

ಆಫೀಸರ್ ಸ್ಕೇಲ್‌ - 2 : ಕನಿಷ್ಠ 21 ರಿಂದ ಗರಿಷ್ಠ 32 ವರ್ಷ ಮೀರಿರಬಾರದು.

ಆಫೀಸರ್ ಸ್ಕೇಲ್ -1 : ಕನಿಷ್ಠ 18 ರಿಂದ ಗರಿಷ್ಠ 30 ವರ್ಷ ಮೀರಿರಬಾರದು.

ಅಭ್ಯರ್ಥಿಗಳು ಎಷ್ಟು ಹುದ್ದೆಗಳಿಗೆ ಬೇಕಾದರೂ ಅರ್ಜಿ ಸಲ್ಲಿಸಬಹುದು. ಆದರೆ ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿರುತ್ತದೆ.

ಅರ್ಜಿ ಶುಲ್ಕ ರೂ.850. SC / ST / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.175.


ನೇಮಕಾತಿ ವಿಧಾನ : ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಜತೆಗೆ, ಸಂದರ್ಶನ ಪ್ರಕ್ರಿಯೆ ನಡೆಸಲಾಗುತ್ತದೆ.

ಉದ್ಯೋಗ ವಿವರ

ಹುದ್ದೆಯ ಹೆಸರು ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ವಿವಿಧ ಸ್ಕೇಲ್‌ ಹುದ್ದೆಗಳು

ವಿವರ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ನೋಟಿಫಿಕೇಶನ್

ಪ್ರಕಟಣೆ ದಿನಾಂಕ 2023-06-01

ಕೊನೆ ದಿನಾಂಕ 2023-06-21

ಉದ್ಯೋಗ ವಿಧ Full Time

ಉದ್ಯೋಗ ಕ್ಷೇತ್ರ ಗ್ರಾಮೀಣ ಬ್ಯಾಂಕ್‌ಗಳ ಉದ್ಯೋಗ

ವೇತನ ವಿವರ INR 35000 to 90000 /Month

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ --

ವಿದ್ಯಾರ್ಹತೆ ಪದವಿ / ಸ್ನಾತಕೋತ್ತರ ಪದವಿ

ಕಾರ್ಯಾನುಭವ 0 Years

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ

ವೆಬ್‌ಸೈಟ್‌ ವಿಳಾಸ https://ibps.in/

ಸಂಸ್ಥೆ ಲೋಗೋ 

ಉದ್ಯೋಗ ಸ್ಥಳ

ವಿಳಾಸ ಮುಂಬೈ

ಸ್ಥಳ ಮುಂಬೈ

ಪ್ರದೇಶ ಮಹಾರಾಷ್ಟ್ರ

ಅಂಚೆ ಸಂಖ್ಯೆ 400101

ದೇಶ IND

Post a Comment

Previous Post Next Post
CLOSE ADS
CLOSE ADS
×