'ಅನ್ನಭಾಗ್ಯ' ಅಕ್ಕಿ ಬದಲು ಸಿಗುತ್ತೆ ಹಣ! ಯಾವ ಕುಟುಂಬಕ್ಕೆ ಎಷ್ಟು ಸಿಗುತ್ತೆ ದುಡ್ಡು? ಇಲ್ಲಿದೆ ಫುಲ್ ಡಿಟೇಲ್ಸ್

'ಅನ್ನಭಾಗ್ಯ' ಅಕ್ಕಿ ಬದಲು ಸಿಗುತ್ತೆ ಹಣ! ಯಾವ ಕುಟುಂಬಕ್ಕೆ ಎಷ್ಟು ಸಿಗುತ್ತೆ ದುಡ್ಡು? ಇಲ್ಲಿದೆ ಫುಲ್ ಡಿಟೇಲ್ಸ್

 ರಾಜ್ಯದಲ್ಲಿ ಅಕ್ಕಿಯ ಕೊರತೆ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲು ಹಣವನ್ನು ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಒಂದು ಕುಟುಂಬಕ್ಕೆ 5 ಕೆಜಿಯ ಅಕ್ಕಿಯ ಮೌಲ್ಯವನ್ನು ಹಣದ ರೂಪದಲ್ಲಿ ನೀಡಲು ತೀರ್ಮಾನಿಸಲಾಗಿದೆ. ಜು. 1ರಿಂದಲೇ ಹಣ ನೀಡಿಕೆ ಶುರುವಾಗುತ್ತದೆ. ಈ ವಿಚಾರವನ್ನು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ತಿಳಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ವಿಚಾರದ ಬಗ್ಗೆ ತೀರ್ಮಾನ ಮಾಡಿರುವುದಾಗಿ ತಿಳಿಸಿದ್ದಾರೆ.



ಬೆಂಗಳೂರು: ಅನ್ನ ಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ ನೀಡಬೇಕಿರುವ ಅಕ್ಕಿಯ ಬದಲಿಗೆ ಹಣವನ್ನು ನೀಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಜೂ. 28ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಜು. 1ರಿಂದಲೇ ಫಲಾನುಭವಿಗಳ (ಬಿಪಿಎಲ್ ಕಾರ್ಡ್ ದಾರರ) ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆ ಮಾಡಲು ನಿರ್ಧರಿಸಲಾಗಿದೆ

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಈ ವಿಚಾರ ತಿಳಿಸಿದರು. ಸದ್ಯಕ್ಕೆ ಅಕ್ಕಿಯ ಕೊರತೆ ಇರುವ ಹಿನ್ನೆಲೆಯಲ್ಲಿ ಹಣವನ್ನು ನೀಡಲು ತೀರ್ಮಾನಿಸಲಾಗಿದೆ. ಒಂದು ಕೆಜಿ ಅಕ್ಕಿಯ ಬೆಲೆಯನ್ನು 34 ರೂ.ಗಳನ್ನು ನಿಗದಿಪಡಿಸಿ, ಪ್ರತಿಯೊಂದು ಕುಟುಂಬಕ್ಕೆ ಅಗತ್ಯವಿರುವಷ್ಟು ಅಕ್ಕಿಯ ಬದಲಿಗೆ ಹಣವನ್ನು ನೀಡಲಾಗುತ್ತದೆ ಎಂದು ತಿಳಿಸಿದರು

ಈ ಯೋಜನೆಯು ಬಿಪಿಎಲ್ ಕಾರ್ಡುದಾರರಿಗೆ ಮಾತ್ರವೇ ಅನ್ವಯವಾಗುತ್ತದೆ. ಪ್ರತಿ ಕುಟುಂಬಕ್ಕೆ 5 ಕೆಜಿ ಅಕ್ಕಿಯನ್ನು ನಿಗದಿಪಡಿಸಲಾಗಿದ್ದು, ಅದರಂತೆ ಪ್ರತಿ ಕೆಜಿ ಅಕ್ಕಿಗೆ 34 ರೂ.ಗಳಂತೆ ಪ್ರತಿ ಕುಟುಂಬಕ್ಕೆ 170 ರೂ.ಗಳನ್ನು ನೀಡಲು ತೀರ್ಮಾನಿಸಲಾಗಿದೆ. ಜು. 1ರಿಂದಲೇ ಫಲಾನುಭವಿಗಳಿಗೆ ಈ ಹಣವನ್ನು ಜಮೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಯೋಜನೆಯಡಿ ಮಾತ್ರ ಹಣ

ಕೇಂದ್ರ ಸರ್ಕಾರದ ಅಕ್ಕಿ ಬಿಟ್ಟು ರಾಜ್ಯ ಸರ್ಕಾರವು ಕೊಡಬೇಕಿದ್ದ ಉಚಿತ ಅಕ್ಕಿಯ ಯೋಜನೆಯ ಬದಲಿಗೆ ಮಾತ್ರ ಲೆಕ್ಕಾಚಾರ ಅನ್ವಯವಾಗುತ್ತದೆ. ಕೇಂದ್ರ ಸರ್ಕಾರದ ಯೋಜನೆಯಡಿ ಅಕ್ಕಿ ಪಡೆಯುವ ಯೋಜನೆಯು ಹಾಗೆಯೇ ಮುಂದುವರಿಯಲಿದೆ ಎಂದು ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಅಕ್ಕಿ ಬದಲು, 170 ರೂ ಹಣ ಹಾಕುತ್ತೇವೆ : ಎಚ್ ಕೆ ಪಾಟೀಲ್

ಎಷ್ಟು ಸದಸ್ಯರಿರುವ ಕುಟುಂಬಕ್ಕೆ ಎಷ್ಟು ಹಣ ಸಿಗುತ್ತೆ?

ಒಬ್ಬ ಸದಸ್ಯರಿರುವ ಕುಟುಂಬಕ್ಕೆ 5 ಕೆಜಿ, ಇಬ್ಬರು ಸದಸ್ಯರಿರುವ ಕುಟುಂಬಕ್ಕೆ 10 ಕೆಜಿ, ಐದು ಜನರಿರುವ ಕುಟುಂಬಕ್ಕೆ 25 ಕೆಜಿ ಅಕ್ಕಿಯನ್ನು ನಿಗದಿಪಡಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ. ಅದೇ ಲೆಕ್ಕದಲ್ಲಿ ಕೆಜಿ ಅಕ್ಕಿಗೆ 34 ರೂ.ಗಳಂತೆ, 5 ಕೆಜಿ ಅಕ್ಕಿ ಪಡೆಯುವ ಕುಟುಂಬಕ್ಕೆ 150 ರೂ., 10 ಕೆಜಿ ಅಕ್ಕಿಯನ್ನು ಪಡೆಯುವ ಕುಟುಂಬಕ್ಕೆ 340 ರೂ. ಹಾಗೂ 25 ಕೆಜಿ ಅಕ್ಕಿಯನ್ನು ಪಡೆಯುವ ಕುಟುಂಬಕ್ಕೆ 850 ರೂ.ಗಳನ್ನು ನೀಡಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಯಾರಿಗೆ ಸಿಗುತ್ತೆ ಹಣ?

ಪ್ರತಿ ಬಿಪಿಎಲ್ ಕುಟುಂಬದ ಕಾರ್ಡ್ ಗಳಲ್ಲಿ ಮನೆಯ ಯಜಮಾನಿ ಯಾರು ಎಂದು ನಮೂದಾಗಿರುತ್ತದೋ ಅವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ಬಿಪಿಎಲ್ ಕಾರ್ಡುದಾರರ ಮಾಹಿತಿ ನಮ್ಮ (ಸರ್ಕಾರ) ಬಳಿಯಿದೆ. ಆ ಕಾರ್ಡ್ ಗಳಲ್ಲಿ ಪ್ರಮುಖವಾಗಿ ಉಲ್ಲೇಖವಾಗಿರುವವರ ಹೆಸರು, ಅವರ ಬ್ಯಾಂಕ್ ಖಾತೆಗಳ ವಿವರಗಳು ಸರ್ಕಾರದ ಬಳಿಯಿವೆ. ಅದರ ಆಧಾರದಲ್ಲಿ ಸರ್ಕಾರ ಹಣ ಜಮೆ ಮಾಡುತ್ತದೆ ಎಂದು ಮುನಿಯಪ್ಪ ತಿಳಿಸಿದ್ದಾರೆ.


ಅನ್ನಭಾಗ್ಯದ ಹೆಚ್ಚುವರಿ ಅಕ್ಕಿ ಬದಲು ಹಣ ನೀಡಲು ತೀರ್ಮಾನ; ಯಾವ ಕುಟುಂಬಕ್ಕೆ ಎಷ್ಟು ದುಡ್ಡು?

ಇದು ತಾತ್ಕಾಲಿಕ ಮಾತ್ರ!

ಅಕ್ಕಿ ಬದಲಿಗೆ ಹಣ ಕೊಡುವ ನಿರ್ಧಾರ ಕೇವಲ ತಾತ್ಕಾಲಿಕ ಮಾತ್ರ. ಸರ್ಕಾರ ಅಕ್ಕಿ ಖರೀದಿ ಪ್ರಯತ್ನವನ್ನು ಮುಂದುವರಿಸುತ್ತದೆ. ಸೂಕ್ತ ಪ್ರಮಾಣದ ಅಕ್ಕಿ ಸಿಗುವುದು ಖಾತ್ರಿಯಾದ ನಂತರ ಹಣದ ಬದಲು ಅಕ್ಕಿಯನ್ನು ಕೊಡಲು ನಿರ್ಧರಿಸಿದ್ದೇವೆ. ಆದರೆ, ಅಲ್ಲಿಯವರೆಗೆ ಬಡವರು ಕಾಯುವುದು ಬೇಡ ಎಂಬ ಉದ್ದೇಶದಿಂದ ಸದ್ಯಕ್ಕೆ ಅಕ್ಕಿಯ ಬದಲು ಹಣವನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.

    


Post a Comment

Previous Post Next Post
CLOSE ADS
CLOSE ADS
×