SSLC, PUC ವಿದ್ಯಾರ್ಥಿಗಳಿಗೆ ಒಂದೊಳ್ಳೆ ಸುದ್ದಿ, ಸಿಗಲಿದೆ ಉಚಿತ ಪಾಠ-ಪ್ರವಚನ

SSLC, PUC ವಿದ್ಯಾರ್ಥಿಗಳಿಗೆ ಒಂದೊಳ್ಳೆ ಸುದ್ದಿ, ಸಿಗಲಿದೆ ಉಚಿತ ಪಾಠ-ಪ್ರವಚನ

 SSLC, PUC ವಿದ್ಯಾರ್ಥಿಗಳಿಗೆ ಒಂದೊಳ್ಳೆ ಸುದ್ದಿ, ಸಿಗಲಿದೆ ಉಚಿತ ಪಾಠ-ಪ್ರವಚನ

 SSLC ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಒಂದೊಳ್ಳೆ ಸುದ್ದಿಯೊಂದು ಇಲ್ಲಿದೆ. ಆರ್ಥಿಕವಾಗಿ ಸದೃಢರಲ್ಲದ ಕುಟುಂಬಗಳ ವಿದ್ಯಾರ್ಥಿಗಳಿಗೆ ಎಂದು ವಿಶೇಷ ಸೌಲಭ್ಯವೊಂದರ ಕುರಿತು ಮಾಹಿತಿ ಇಲ್ಲಿದೆ. 

SSLC ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಒಂದೊಳ್ಳೆ ಸುದ್ದಿಯೊಂದು ಇಲ್ಲಿದೆ. ಆರ್ಥಿಕವಾಗಿ ಸದೃಢರಲ್ಲದ ಕುಟುಂಬಗಳ ವಿದ್ಯಾರ್ಥಿಗಳಿಗೆ ಎಂದು ವಿಶೇಷ ಸೌಲಭ್ಯವೊಂದರ ಕುರಿತು ಮಾಹಿತಿ ಇಲ್ಲಿದೆ. 

ಬೆಂಗಳೂರಿನ ಉದಯಭಾನು ಕಲಾ ಸಂಘವು ಅಶಕ್ತ SSLC ಮತ್ತು PUC ವಾಣಿಜ್ಯ, ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ, ಪ್ರವಚನಗಳನ್ನು ಹಮ್ಮಿಕೊಂಡಿದೆ. 

ಪ್ರತಿದಿನ ಸಂಜೆ 5 ಗಂಟೆಯಿಂದ ಈ ಉಚಿತ ತರಗತಿಗಳು ನಡೆಯಲಿವೆ. ರವಿವಾರ ಬೆಳಗ್ಗೆ 9 ಗಂಟೆಯಿಂದ ತರಗತಿ ಆರಂಭವಾಗಲಿದೆ. ಬೆಂಗಳೂರಿನ 40 ಹಿರಿಯ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡಲಿದ್ದಾರೆ. 

ಉಚಿತ ಪಾಠ ಪ್ರವಚನಗಳು ಆಗಸ್ಟ್ ತಿಂಗಳಿನಿಂದ ಆರಂಭವಾಗಲಿವೆ. ಪ್ರವೇಶ ಪತ್ರಗಳು ಜುಲೈ 31ರವರೆಗೆ ನೀಡಲಾಗುತ್ತದೆ. 

ಹೆಚ್ಚಿನ ವಿವರಗಳಿಗೆ ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು ಈ ವಿಳಾಸವನ್ನು ಸಂಪರ್ಕಿಸಬಹುದಾಗಿದೆ. 

ಅಥವಾ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-26609343 ಅಥವಾ 080-26601831 ಸಂಫರ್ಕಿಸಬಹುದು ಎಂದು ಮಾಹಿತಿ ನೀಡಲಾಗಿದೆ. 

ಒಟ್ಟಾರೆ ಈ ಸೌಲಭ್ಯದ ಅಗತ್ಯವುಳ್ಳ SSLC ಮತ್ತು PUC ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.

Post a Comment

Previous Post Next Post
CLOSE ADS
CLOSE ADS
×